Akshay kumar
2008ರ ಮುಂಬೈ ಉಗ್ರ ದಾಳಿಯ ಕರಾಳತೆಗೆ 12 ವರ್ಷ: ಹುತಾತ್ಮ ಯೋಧರಿಗೆ ಅಕ್ಷಯ್ ಕುಮಾರ್ ಗೌರವ ನಮನ..!
2008ರ ಮುಂಬೈ ಉಗ್ರ ದಾಳಿಯ ಕರಾಳತೆಗೆ ಇಂದಿಗೆ ಸರಿಯಾಗಿ 12 ವರ್ಷಗಳು ಕಳೆದಿವೆ. 26/11 ರ ಮುಂಬೈ ದಾಳಿಯ ಕಹಿ ನೆನಪೂ ಇಂದಿಗೂ ಎಂದೆಂದಿಗೂ ಭಾರತದ ಇತಿಹಾಸದಲ್ಲಿ ಕಪ್ಪು ಚುಕ್ಕಿಯಾಗಿ ಉಳಿದಿದೆ. ಉಳಿಯುತ್ತದೆ. ಇಂದಿಗೆ ದಾಳಿ ನಡೆದು 12 ವರ್ಷಗಳು ಕಳೆದ ಹಿನ್ನೆಲೆ , ಸಿನಿ ತಾರೆಯರು , ರಾಜಕೀಯ ಮುಖಂಡರು ದಾಳಿ ವೇಳೆ ಹುತಾತ್ಮರಾದವರಿಗೆ ಇಂದು ಗೌರವ ಸೂಚಿಸುತ್ತಿದ್ದಾರೆ. ಅದರಂತೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಯೋಧರಿಗೆ ಗೌರವ ಸಲ್ಲಿಸಿದ್ದಾರೆ.
ಲೆಜೆಂಡ್ ಫುಟ್ಬಾಲ್ ಆಟಗಾರ ಡಿಯಾಗೋ ಮರಡೋನಾ ನಿಧನಕ್ಕೆ ಕಂಬನಿ ಮಿಡಿದ ಸಿನಿ ತಾರೆಯರು
ಈ ಬಗ್ಗೆ ಟ್ವೀಟ್ ಮಾಡಿರುವ ಅಕ್ಷಯ್ ಕುಮಾರ್ ಅವರು ’26/11 ದಿನವನ್ನು ಮುಂಬೈಯಿಗರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಮುಂಬೈ ಭಯೋತ್ಪಾದಕರ ದಾಳಿಯಲ್ಲಿ ಹೋರಾಡಿ ಹುತಾತ್ಮರಾದ ಯೋಧರಿಗೆ ನನ್ನ ಗೌರವ. ಧೈರ್ಯಶಾಲಿ ಯೋಧರ ತ್ಯಾಗಕ್ಕೆ ನಾವು ಶಾಶ್ವತವಾಗಿ ಚಿರಋಣಿಯಾಗಿರುತ್ತೇವೆ’ ಎಂದು ಬರೆದುಕೊಂಡಿದ್ದಾರೆ.
12 ವರ್ಷಗಳ ಹಿಂದೆ ಪಾಕಿಸ್ತಾನದಿಂದ ಸಮುದ್ರ ಮಾರ್ಗದಲ್ಲಿ ಬಂದಿದ್ದ ಲಷ್ಕರ್ ಎ ತೊಯ್ಬಾ ಸಂಘಟನೆಯ ಉಗ್ರರು ಮುಂಬೈಮೇಲೆ ದಾಳಿ ಮಾಡಿದ್ದರು. ಸುಮಾರು 60 ಗಂಟೆಗಳ ಕಾಲ ಕಾರ್ಯಾಚರಣೆ ಮಾಡಲಾಗಿತ್ತು. 18 ಭದ್ರತಾ ಸಿಬ್ಬಂದಿ ಸೇರಿ 166 ಜನರು ಮೃತಪಟ್ಟಿದ್ದರು. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್, ಒಬೆರಾಯ್ ಟ್ರಿಡೆಂಟ್ ತಾರಾ ಹೋಟೆಲ್, ಲಿಯೋಪೋಲ್ಡ್ ಕೆಫೆ, ನಾರಿ ಮನ್ ಹೌಸ್ ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದರು. ದಾಳಿಯಲ್ಲಿ ಜೀವಂತವಾಗಿ ಸಿಕ್ಕಿಬಿದ್ದ ಉಗ್ರ ಅಜ್ಮಲ್ ಕಸಬ್ ನನ್ನು 2012ರಲ್ಲಿ ನವೆಂಬರ್ 21ರಂದು ಗಲ್ಲು ಶಿಕ್ಷೆಗೆ ಗುರಿಪಡಿಸಲಾಗಿತ್ತು. 2008ರ ನವೆಂಬರ್ 26ರಂದು ನಡೆದ ಘಟನೆಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿ ಹುತಾತ್ಮರಾಗಿದ್ದ ಯೋಧರು, ಪೊಲೀಸ್ ಸಿಬ್ಬಂದಿಯ ತ್ಯಾಗವನ್ನು ಸ್ಮರಿಸಿ ಹಲವು ಪ್ರಮುಖಕರು ನುಡಿನಮನ ಸಲ್ಲಿಸಿದ್ದಾರೆ.
ಚುನಾವಣೆ ಸೋತ ಬಳಿಕ ಸಿಹಿ ಚೆಲ್ಲಿದ್ರಂತೆ RJD ಕಾರ್ಯಕರ್ತರು : ಫ್ಯಾಕ್ಟ್ ಚೆಕ್ ನಲ್ಲಿ ಬಯಲಾಯ್ತು ಅಸಲಿಯತ್ತು..!
Akshay kumar
ಕೇಂದ್ರ ಸರ್ಕಾರದ ವಿರುದ್ಧ ಅನ್ನದಾತರ ಆಕ್ರೋಶ : ದೇಶಾದ್ಯಂತ ಅನ್ನದಾತರಿಂದ ದೆಹಲಿ ಚಲೋ..!
ಆಸ್ಕರ್ ಪ್ರಶಸ್ತಿಗೆ ಭಾರತದಿಂದ ‘ಜಲ್ಲಿಕಟ್ಟು’ ಚಿತ್ರ ಆಯ್ಕೆ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel