ಪ್ರಕೃತಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಅನೇಕ ರಹಸ್ಯಗಳಿವೆ. ನಾವು ಪ್ರತಿದಿನವೂ ವಿಭಿನ್ನ ವಾತಾವರಣವನ್ನು ಅನುಭವಿಸುತ್ತೇವೆ. ಕೆಲವೊಮ್ಮೆ ಅತಿಯಾಗಿ ಮಳೆ ಬೀಳುತ್ತದೆ, ಆದರೆ ಇನ್ನೊಂದೆಡೆ ಹನಿ ಮಳೆಯೂ ಇರುವುದಿಲ್ಲ. ಆದ್ರೆ ಮಳೆಹನಿಯೂ ಬೀಳದ ಊರೊಂದಿದೆ ಅಂದ್ರೆ ನೀವು ನಂಬಲೇಬೇಕು. ಅದು ಮರುಭೂಮಿಯಲ್ಲದಿದ್ರೂ, ಅಲ್ಲಿ ಮಳೆಯಾಗುವುದಿಲ್ಲ. ಅಲ್ಲಿಯ ವಿಶೇಷವೇನೆಂದರೆ, ಆ ಹಳ್ಳಿಯಲ್ಲಿ ಒಂದೇ ಒಂದು ಹನಿ ಮಳೆಯೂ ಬೀಳುವುದಿಲ್ಲ!
ಅದು ಯೆಮೆನ್ನ ಅಲ್-ಹುತೈಬ್ ಎಂಬ ಹಳ್ಳಿ. ಈ ಹಳ್ಳಿ ಮಳೆಯಿಲ್ಲದ ಪ್ರದೇಶವಾಗಿದ್ದು, ಮರುಭೂಮಿಯಂತೆ ಭಾಸವಾಗುತ್ತದೆ. ಇಲ್ಲಿ ಬಹಳ ವರ್ಷಗಳಿಂದ ಒಂದು ಹನಿ ಮಳೆ ಸಹ ಬಿದ್ದಿಲ್ಲ. ಇದು ಪ್ರಕೃತಿಯ ಅಪರೂಪದ ಮತ್ತು ವಿಚಿತ್ರ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.
“ಅಲ್-ಹುತೈಬ್” ಎಂಬುದು ಯೆಮೆನ್ ದೇಶದಲ್ಲಿರುವ ವಿಶಿಷ್ಟವಾದ ಹಳ್ಳಿ. ಇದು ಮರುಭೂಮಿಯಲ್ಲದಿದ್ರೂ, ಇಲ್ಲಿ ಒಂದು ಹನಿ ಮಳೆಯೂ ಬೀಳುವುದಿಲ್ಲ. ಈ ಹಳ್ಳಿ ಯೆಮೆನ್ ರಾಜಧಾನಿ ಸನಾದಿಂದ ಪಶ್ಚಿಮಕ್ಕೆ ಮನಾಖ್ ನ ಹರಾಜ್ ಪ್ರದೇಶದ ಪರ್ವತದ ತುದಿಯಲ್ಲಿ ಇದೆ. ಅಲ್-ಹುತೈಬ್ ಹಳ್ಳಿಯು 3,200 ಮೀಟರ್ ಎತ್ತರದಲ್ಲಿದ್ದು, ಈ ಎತ್ತರದಿಂದಾಗಿ ಇಲ್ಲಿನ ಜನರಿಗೆ ಮಳೆಯ ಸೊಬಗನ್ನು ಅನುಭವಿಸುವ ಅವಕಾಶ ಇಲ್ಲ.
ಈ ಹಳ್ಳಿ 3200 ಮೀಟರ್ ಎತ್ತರದಲ್ಲಿದೆ ಮತ್ತು ಅಲ್ಲಿನ ನಿರ್ದಿಷ್ಟ ವಾತಾವರಣವೇ ಮಳೆ ಬೀಳದೆ ಇರಲು ಪ್ರಮುಖ ಕಾರಣವಾಗಿದೆ. 2,000 ಮೀಟರ್ ಎತ್ತರದಲ್ಲಿ ಅಂದರೆ ಅಲ್-ಹುತೈಬ್ ಹಳ್ಳಿಯ ಕೆಳಗೆ ಮೋಡಗಳು ರೂಪುಗೊಳ್ಳುತ್ತವೆ. ಆದರೆ ಅದು ಮೇಲಿನ ಪ್ರದೇಶವನ್ನು ದಾಟಲಾಗದ ಕಾರಣ ಮಳೆಯು ಬೀಳುವುದಿಲ್ಲ. ಇದರಿಂದಾಗಿ ಅಲ್ಲಿನ ಜನರು ಬೆಚ್ಚಗಿನ ವಾತಾವರಣವನ್ನು ಅನುಭವಿಸುತ್ತಾರೆ. ಆದರೆ ಚಳಿಗಾಲದಲ್ಲಿ ಮುಂಜಾನೆ ತಾಪಮಾನ ಕಡಿಮೆಯಾಗಿದ್ದರೂ, ಸಮಯ ಸರಿದಂತೆ ಬಿಸಿಲಿನ ತಾಪ ಹೆಚ್ಚಾಗುತ್ತದೆ.
ಅಲ್-ಹುತೈಬ್ ಹಳ್ಳಿ, ಪ್ರಕೃತಿಯ ವಿಶೇಷತೆಯೊಂದಿಗೆ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿ ಮನೆಗಳ ವಿನ್ಯಾಸ ಮತ್ತು ರಚನೆಗಳು ವಿಶಿಷ್ಟವಾಗಿವೆ. ಇಲ್ಲಿನ ಜನರು ತಮ್ಮ ಸಂಪ್ರದಾಯಗಳನ್ನು ಪಾಲಿಸುತ್ತಾರೆ. ಈ ಗ್ರಾಮವು ಯೆಮೆನ್ ಸಮುದಾಯದಿಂದ ಬಂದ ಇಸ್ಮಾಯಿಲಿ (ಮುಸ್ಲಿಂ) ಪಂಥದವರು ವಾಸಿಸುವ ಪ್ರದೇಶವಾಗಿದೆ.
ಈ ಹಳ್ಳಿ ಪ್ರತಿ ವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಹಳ್ಳಿಯ ವಿನ್ಯಾಸ, ಅದರ ಸಾಂಪ್ರದಾಯಿಕ ಮೌಲ್ಯಗಳು ಮತ್ತು ಅದರ ಸಂಸ್ಕೃತಿಯು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.