ಆಜಾನ್ ಕರೆಯನ್ನ ನೆನಪಿಸಲು ಆಪ್ ಬಿಡುಗಡೆ ಮಾಡಿದ ಜುಮಾ ಮಸೀದಿ…
ಇತ್ತೀಚಿಗೆ ಆಜಾನ್ ಪ್ರಾರ್ಥನೆಗೆ ಧ್ವನಿವರ್ಧಗಳ ಬಳಕೆ ಕುರಿತು ದೇಶಾದ್ಯಂತ ವಾದ ವಿಚಾದಗಳು ನಡೆದಿದ್ದವು. ದಿನಕ್ಕೆ ಐದು ಬಾರಿ ಪ್ರಾರ್ಥನೆಗೆ ಕರೆ ನೀಡುವ ಧ್ವನಿವರ್ಧಕಗಳ ಬಳಕೆಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಭಾರಿ ವಿರೋಧವನ್ನ ವ್ಯಕ್ತಪಡಿಸಿತ್ತು.
ಇದರ ಬೆನ್ನಲ್ಲೇ ಬಾಂಬೆ ಟ್ರಸ್ಟ್‌ನ ಜುಮಾ ಮಸೀದಿ “ಅಲ್ ಇಸ್ಲಾಹ್” ಎಂಬ ಮೊಬೈಲ್ ಅಪ್ಲಿಕೇಶನ್ ನ್ನ ಪ್ರಾರಂಭಿಸಿದೆ, ಇದು ಪ್ರಾರ್ಥನೆ ಕರೆಗಳನ್ನ ಲೈವ್-ಸ್ಟ್ರೀಮ್ ಮಾಡುತ್ತದೆ. ನಮಾಜ್ ಸಮಯದ ಬಗ್ಗೆ ಬಳಕೆದಾರರಿಗೆ ತಿಳಿಸುತ್ತದೆ.
ಈ ಮೊದಲು ಸಹ ಇಂಥಹ ಆ್ಯಪ್‌ಗಳಿದ್ದವು ಆದರೆ ಆ ಆ್ಯಪ್‌ಗಳಲ್ಲಿ ರೆಕಾರ್ಡ್ ಮಾಡಿದ ಅಜಾನ್ ಮಾತ್ರ ಪ್ಲೇ ಮಾಡಬಹುದಾಗಿತ್ತು ಇದೀಗ ತಂತ್ರಜ್ಞಾನ ಬಳಸಿಕೊಂಡು ಲೈವ್ ಸ್ಟ್ರೀಮ್ ಆಪ್ ಬಿಡುಗೆಡೆ ಮಾಡಲಾಗಿದೆ. ಪ್ರಾರ್ಥನೆಯ ಕರೆ ಇಸ್ಲಾಂ ಧರ್ಮದ ಪ್ರಮುಖ ಭಾಗವಾಗಿದೆ ಎಂದು ಟ್ರಸ್ಟ್ ಹೇಳಿದೆ.
ಅಪ್ಲಿಕೇಶನ್ iOS ಮತ್ತು Android ಎರಡರಲ್ಲೂ ಲಭ್ಯವಿರುತ್ತದೆ. ನಾಗ್ಪಾಡಾದಲ್ಲಿರುವ ಮಹಾರಾಷ್ಟ್ರ ಕಾಲೇಜ್ ಆಫ್ ಆರ್ಟ್ಸ್ ಸೈನ್ಸ್ ಅಂಡ್ ಕಾಮರ್ಸ್‌ನಲ್ಲಿರುವ ಸೆಂಟರ್ ಫಾರ್ ಆಕ್ಸಿಲರೇಶನ್ ಆಫ್ ರಿಸರ್ಚ್ ಅಂಡ್ ಎಂಟರ್‌ಪ್ರೆನ್ಯೂರ್‌ಶಿಪ್ (ಕೇರ್) ಸಹಯೋಗದೊಂದಿಗೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಕ್ರಾಫರ್ಡ್ ಮಾರ್ಕೆಟ್‌ನಲ್ಲಿರುವ ಬಾಂಬೆ ಟ್ರಸ್ಟ್‌ನ ಮಸೀದಿಯು ನಗರದ ಅತ್ಯಂತ ದೊಡ್ಡ ಮತ್ತು ಹಳೆಯ ಮಸೀದಿಗಳಲ್ಲಿ ಒಂದಾಗಿದೆ.








