ಅಪ್ರಾಪ್ತೆ ಸ್ವಇಚ್ಛೆಯಿಂದ ವಿವಾಹವಾದ್ರು, ಗಂಡನೊಂದಿಗೆ ವಾಸಿಸಲು ಸಾಧ್ಯವಿಲ್ಲ – ನ್ಯಾಯಾಲಯ..!
ಉತ್ತರಪ್ರದೇಶ: ಅಪ್ರಾಪ್ತ ಬಾಲಕಿಯರು ತಮ್ಮ ಸ್ವ ಇಚ್ಛೆಯಿಂದ ವಿವಾಹವಾಗಿದ್ರೂ (ಬಾಲ್ಯವಿವಾಹ) ಸಹ ಗಂಡನೊಂದಿಗೆ ಇರಲು ಸಾಧ್ಯವಿಲ್ಲ ಎಂದು ಉತ್ತರಪ್ರದೇಶದ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. 2020ರ ನವೆಂಬರ್ 24ರಂದು ಹಾಪುರ್ ಮ್ಯಾಜಿಸ್ಟೈರಿಯಲ್ ಕೋರ್ಟ್ ನೀಡಿದ್ದ ತೀರ್ಪನ್ನ ಪ್ರಶ್ನಿಸಿ, ಬಾಲಕಿಯ ತಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಈ ತೀರ್ಪು ನೀಡಿದೆ. ಅಂದ್ಹಾಗೆ, ಬಾಲಕಿಯ ತಂದೆ, ಹಾಪುರ್ ನಿವಾಸಿ ಪಿಂಟೋ ಎಂಬುವವನು ಆಮಿಷವೊಡ್ಡಿ ತನ್ನ ಮಗಳನ್ನ ಮದುವೆಯಾದಾಗ ಬಾಲಕಿಗೆ ಕೇವಲ 16 ವರ್ಷ ವಯಸ್ಸಿನವಳೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಚೀನಾದಲ್ಲಿ ಸಿಲುಕಿರುವ ಭಾರತದ ನಾವಿಕರ ಬಿಡುಗಡೆಗೆ ಕೊನೆಗೂ ಚೀನಾ ಒಪ್ಪಿಗೆ
ಅದ್ರಂತೆ, ಹುಡುಗಿಗೆ ಇನ್ನು ಮದುವೆಯ ವಯಸ್ಸಾಗಿಲ್ಲ. ಆದ್ರೆ, ಬಾಲಕಿಯು ತಾನು ತನ್ನ ಪತಿಯನ್ನ ಸ್ವ ಇಚ್ಛೆಯಿಂದ ಮದುವೆಯಾಗಿದ್ದು, ಪೋಷಕರೊಂದಿಗೆ ಇರಲು ನಿರಾಕರಿಸಿದ್ದಾಳೆ. ಈ ಸಂಬಂಧ ವಿಚಾರಣೆ ನಂತರ ಕೋರ್ಟ್ ಕಾನೂನಿನ ಪ್ರಕಾರ ವಿವಾಹ ಅನೂರ್ಜಿತವಾಗಿದೆ ಎಂದು ಹೇಳಿದೆ. ಹುಡುಗಿ ಮದುವೆಯ ಸೂಕ್ತ ವಯಸ್ಸು ತಲುಪಿದ ನಂತ್ರ, ಆಕೆಯ ವಿವಾಹವನ್ನ ಒಪ್ಪಿಕೊಳ್ಳುವುದು ಅಥವಾ ಅದನ್ನ ರದ್ದು ಮಾಡುವ ಮುಕ್ತ ಅವಕಾಶ ಆಕೆಗಿರುತ್ತೆ ಎಂದು ತಿಳಿಸಿದೆ.
ರೆಪೋ ದರ ಯಥಾಸ್ಥಿತಿ – RBI : ಹಾಗಾದ್ರೆ ರೆಪೋ, ರಿವರ್ಸ್ ರೆಪೋ ದರ ಎಂದರೇನು..?
ಅಲ್ದೇ ಕಾನೂನು ಪಾಲಕರ ಬಂಧನದಿಂದ ಹೊರಬಂದ ಅಪ್ರಾಪ್ತ ಬಾಲಕಿ ತನ್ನ ಗಂಡನೊಂದಿಗೆ ವಾಸಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದೆ. ಆದ್ರೆ, ಬಾಲಕಿ ಮೇಜರ್ ಆದಾ ನಂತ್ರ ಮದುವೆಯನ್ನ ಒಪ್ಪಿಕೊಳ್ಳುವ ಅಥವಾ ಅದನ್ನ ಬಿಟ್ಟು ಬೇರೆ ಯಾರೊಂದಿಗಾದರೂ ವಾಸಿಸಲು ಸ್ವತಂತ್ರಳಾಗುತ್ತಾಳೆ ಎಂದು ನ್ಯಾಯಮೂರ್ತಿ ಜೆ.ಜೆ. ಮುನೀರ್ ಅವರಿದ್ದ ನ್ಯಾಯಪೀಠವು ತೀರ್ಪು ನೀಡಿದೆ. ಇನ್ನೂ ಬಾಲಕಿ ಮೇಜರ್ ಆಗುವವರೆಗೆ ಸುರಕ್ಷಿತ ಮನೆ ಅಥವ ಆಶ್ರಯಾಲಯದಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
SBIನಲ್ಲಿ ಅಪ್ರಾಪ್ತ ಮಕ್ಕಳಿಗೆ ಖಾತೆ ತೆರೆಯುವ ಅವಕಾಶ : ಇಲ್ಲಿದೆ ಸಂಪೂರ್ಣ ಮಾಹಿತಿ..!
RBI ರೆಪೋ ದರ ಘೋಷಣೆ: ಮುಂಬೈ ಷೇರುಪೇಟೆ ಸೆನ್ಸೆಕ್ಸ್ 330 ಅಂಕ ಏರಿಕೆ..!
ರೆಪೋ ದರ ಯಥಾಸ್ಥಿತಿ, ಹೊಸ ಆರ್ಥಿಕ ಯುಗಕ್ಕೆ 2021 ವೇದಿಕೆ : ಶಕ್ತಿಕಾಂತ್ ದಾಸ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








