ಮದ್ಯ ಪ್ರಿಯರಿಗೆ ಸ್ಯಾಡ್ ನ್ಯೂಸ್… ಲಸಿಕೆ ಹಾಕಿಸಿಕೊಂಡಮೇಲೆ ‘45 ದಿನʼಗಳವರೆಗೆ ಎಣ್ಣೆ ಮುಟ್ಟಂಗಿಲ್ಲ..!
ಈಗಾಗಲೇ ಲಸಿಕೆ ಅಭಿಯಾನಕ್ಕೆ ಚಾಲನೆ ಸಿಕ್ಕಿದ್ದು, ಮೊದಲ ಹಂತದಲ್ಲಿ ಕೊರೊನಾ ವಾರಿಯಾರ್ಸ್ ಲಸಿಕೆ ವಿತರಣಾ ಕಾರ್ಯ ಶುರುವಾಗಿದೆ. ಇದರ ಬೆನ್ನಲ್ಲೇ ಮದ್ಯ ಪ್ರಿಯರಿಗೆ ಕಹಿ ಸುದ್ದಿಯೊಂದು ಸಿಕ್ಕಿದೆ. ಅದೇನೆಂದ್ರೆ ಲಸಿಕೆ ತೆಗೆದುಕೊಂಡು 45 ದಿನಗಳವರೆಗೆ ಮದ್ಯ ಸೇವಿಸುವಂತಿಲ್ಲ. ಹೌದು, 2 ಹಂತದಲ್ಲಿ ಲಸಿಕೆ ನೀಡಲಾಗ್ತಿದ್ದು, ಮೊದಲ ಡೋಸ್ ತೆಗೆದುಕೊಂಡ 28 ದಿನಗಳ ನಂತ್ರ 2ನೇ ಡೋಸ್ ನೀಡಲಾಗುತ್ತೆ. ಹಾಗಾಗಿ ಮೊದಲ 28 ದಿನ, ಎರಡನೇ ಡೋಸ್ ತೆಗೆದುಕೊಂಡ ನಂತ್ರ 14 ದಿನಗಳವರೆಗೆ ಮದ್ಯ ಸೇವಿಸುವಂತಿಲ್ಲ.
ಈ ಬಗ್ಗೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್ ಎಂ. ಕೆ ಅವ್ರು ಮಾತನಾಡಿದ್ದು, ಮೊದಲ 28 ದಿನ, ಎರಡನೇ ಡೋಸ್ ತೆಗೆದುಕೊಂಡ ನಂತ್ರ 14 ದಿನಗಳವರೆಗೆ ಮದ್ಯ ಸೇವಿಸುವಂತಿಲ್ಲ. ಒಂದ್ವೇಳೆ ಮದ್ಯಪಾನ ಮಾಡಿದ್ರೆ ಪೂರ್ಣ ಪ್ರಮಾಣದಲ್ಲಿ ಲಸಿಕೆ ಕೆಲಸ ಮಾಡೋದಿಲ್ಲ. ಹಾಗಾಗಿ 45 ದಿನಗಳ ಕಾಲ ಮದ್ಯಪಾನ ಮಾಡದಿರಿ ಎಂದು ಸೂಚನೆ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel