ಕಡಿಮೆ ಪ್ರಮಾಣದ ಮದ್ಯ ಔಷಧಿಯಂತೆ – ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್
ಭೂಪಾಲ್ – ಮದ್ಯವು ಅಗ್ಗವಾಗಲಿ ಅಥವಾ ದುಬಾರಿಯಾಗಲಿ, ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ ಆಲ್ಕೋಹಾಲ್ ಔಷಧಿಯಂತೆ ಎಂದು ಬಿಜೆಪಿ ಎಂ ಪಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದಾರೆ. ಮದ್ಯದ ಬಗ್ಗೆ ಮಾತನಾಡಿದ ಅವರು ಆಯುರ್ವೇದದ ನೇರ ಉದಾಹರಣೆ ನೀಡಿದ್ದಾರೆ ಈ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬಿಜೆಪಿ ಎಂಪಿ ಪ್ರಜ್ಞಾ ಸಿಂಗ್ ಠಾಕೂರ್ ವಿಭಿನ್ನ ಹೇಳಿಕೆಗಳಿಂದಾಗಿ ಯಾವಾಗಲೂ ಚರ್ಚೆಯಲ್ಲಿರುತ್ತದೆ. ಅವರ ಕೆಲವು ಹೇಳಿಕೆಗಳು ಭಾರೀ ವಿವಾದಕ್ಕೆ ಕಾರಣವಾಗಿವೆ. ಆದರೆ, ಈ ಬಾರಿ ವಿಚಿತ್ರ ಹೇಳಿಕೆ ನೀಡಿದ್ದಾರೆ. ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ ಆಲ್ಕೋಹಾಲ್ ಔಷಧಿಯಂತೆ, ಎಂದು ಪ್ರಜ್ಞಾ ಠಾಕೂರ್ ಹೇಳಿದ್ದಾರೆ.
ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಮಾಧ್ಯಮಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತ “ಆಲ್ಕೋಹಾಲ್ ಕಡಿಮೆಯಾದರೆ ಆಲ್ಕೋಹಾಲ್ ಔಷಧಿಯಾಗಿದೆ ಮತ್ತು ಮದ್ಯದ ಪ್ರಮಾಣವು ಅಪರಿಮಿತವಾಗಿದ್ದರೆ ಅದು ವಿಷವಾಗಿದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಅತಿಯಾಗಿ ಮದ್ಯ ಸೇವಿಸುವವರು ಅದನ್ನು ನಿಲ್ಲಿಸಬೇಕು” ಎಂದು ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದಾರೆ.