ಪ್ಯಾನ್ ಕಾರ್ಡ್ನಲ್ಲಿ ಕ್ಯೂಆರ್ ಕೋಡ್ ಯಾಕೆ ಇದೆ?
ಹೊಸ ಪ್ಯಾನ್ ಕಾರ್ಡ್ನಲ್ಲಿ ಕ್ಯುಆರ್ ಕೋಡ್ನ ಫೀಚರ್ ಇದೆ. ಇದು ಬಹಳ ಮುಖ್ಯವಾದ ಫೀಚರ್. ಪ್ಯಾನ್ ಕಾರ್ಡ್ ದುರುಪಯೋಗವಾಗುವುದನ್ನು ತಡೆಯಲು ಇದು ಮುಖ್ಯ. ವಂಚಕರು ಯಾವುದಾದರೂ ಪ್ಯಾನ್ ಕಾರ್ಡ್ನಲ್ಲಿ ಹೆಸರು, ಫೋಟೋವನ್ನು ಬದಲಾಯಿಸಿ ಅದನ್ನು ಡೂಪ್ಲಿಕೇಟ್ ಮಾಡಿ, ಹಣಕಾಸು ವಂಚನೆ ಕಾರ್ಯಗಳಿಗೆ ಬಳಸುವುದುಂಟು. ಕ್ಯೂಆರ್ ಕೋಡ್ ಫೀಚರ್ನಿಂದ ಈ ವಂಚನೆಯನ್ನು ತಡೆಯಲು ಸಾಧ್ಯವಿದೆ.
ಕ್ಯೂಆರ್ ಕೋಡ್ನಲ್ಲಿ ಪ್ಯಾನ್ ಕಾರ್ಡ್ದಾರರ ವೈಯಕ್ತಿಕ ದತ್ತಾಂಶವನ್ನು ಎನ್ಕ್ರಿಪ್ಟ್ ಮಾಡಲಾಗಿರುತ್ತದೆ. ಆಥರೈಸ್ ಆಗಿರುವ ವ್ಯಕ್ತಿಗಳು ನಿರ್ದಿಷ್ಟ ಸಾಫ್ಟ್ವೇರ್ ಬಳಸಿ ಕ್ಯೂಆರ್ ಕೋಡ್ನಲ್ಲಿನ ಮಾಹಿತಿಯನ್ನು ಪಡೆಯಬಹುದು.
ಹಾಗೆಯೇ, ಸಂಬಂಧ ಪಟ್ಟ ಅಧಿಕಾರಿಗಳು ಪ್ಯಾನ್ ಕಾರ್ಡ್ನ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಬಹಳ ಬೇಗ ಅಗತ್ಯ ಮಾಹಿತಿಯನ್ನು ಪಡೆಯಬಹುದು. ಇದರಿಂದ ವೆರಿಫಿಕೇಶನ್ ಇತ್ಯಾದಿ ಕೆಲಸಗಳು ಬೇಗ ನಡೆಯುತ್ತವೆ.
ಹೊಸ ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ?
ಆನ್ಲೈನ್ನಲ್ಲಿ ಹೊಸ ಪ್ಯಾನ್ ಕಾರ್ಡ್ ಪಡೆಯಬಹುದು. ಪ್ರೋಟಿಯಾನ್ (ಎನ್ಎಸ್ಡಿಎಲ್) ಮತ್ತು ಯುಟಿಐ ಐಟಿಎಸ್ಎಲ್ ಎಂಬ ಎರಡು ಏಜೆನ್ಸಿಗಳು ಪ್ಯಾನ್ ಕಾರ್ಡ್ ನೀಡುತ್ತವೆ. ನಿಮ್ಮ ಹಳೆಯ ಪ್ಯಾನ್ ಕಾರ್ಡ್ ಅನ್ನು ಯಾವ ಏಜೆನ್ಸಿ ವಿತರಿಸಿದೆಯೋ ಅಲ್ಲಿಂದಲೇ ನೀವು ಹೊಸ ಪ್ಯಾನ್ ಕಾರ್ಡ್ ಪಡೆಯಬೇಕು. ನಿಮ್ಮ ಪ್ಯಾನ್ ಕಾರ್ಡ್ನ ಹಿಂಬದಿಯಲ್ಲಿ ಏಜೆನ್ಸಿಯ ಹೆಸರು ಇರುವುದನ್ನು ನೀವು ಗಮನಿಸಬಹುದು.
ಸೂಚನೆ: ನಕಲಿ ಲಿಂಕ್ ಗಳ ಬಗ್ಗೆ ಎಚ್ಚರವಹಿಸಿ
Website Link
https://www.onlineservices.nsdl.com/paam/ReprintEPan.html
https://www.pan.utiitsl.com/reprint.html