ಯುಎಸ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಝಿವೆರೆವ್ ಅವರು ಫೈನಲ್ ಪ್ರವೇಶಿಸಿದ್ದಾರೆ. 23ರ ಹರೆಯದ ಅಲೆಕ್ಸಾಂಡರ್ ಝಿವೆರೆವ್ ಅವರು ಸೆಮಿಫೈನಲ್ ನಲ್ಲಿ 3-6, 2-6, 6-3, 6-4, 6-ರಿಂದ ಪಾಬ್ಲೊ ಕಾರೆನೊ ಬುಸ್ಟಾ ಅವರನ್ನು ಸೋಲಿಸಿದ್ರು. ಮೊದಲ ಎರಡು ಸೆಟ್ ಗಳಲ್ಲಿ ಹಿನ್ನಡೆ ಅನುಭವಿಸಿದ್ದ ಅಲೆಕ್ಸಾಂಡರ್ ನಂತರದ ಮೂರು ಸೆಟ್ ಗಳಲ್ಲಿ ಅದ್ಭುತ ಆಟವನ್ನಾಡಿದ್ರು. ಪರಿಣಾಮ ಗ್ರ್ಯಾಂಡ್ ಸ್ಲ್ಯಾಂ ಟೂರ್ನಿಯಲ್ಲಿ ಚೊಚ್ಚಲ ಬಾರಿ ಫೈನಲ್ ಪ್ರವೇಶಿಸಿದ್ದ ಸಂತಸದಲ್ಲಿ ತೇಲಾಡಿದ್ರು.
ಇನ್ನೊಂದು ಸೆಮಿಫೈನಲ್ ನಲ್ಲಿ ಡೊಮಿನಿಕ್ ಥೀಮ್ ಅವರು 6-2, 7-6, 7-6ರಿಂದ ಡೇನಿಲ್ ಮೆಡ್ವೆಡೆವ್ ಅವರನ್ನು ಮಣಿಸಿದ್ರು. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಡಾಮಿನಿಕ್ ಥೀಮ್ ಮತ್ತು ಅಲೆಕ್ಸಾಂಡರ್ ಝಿವೆರೆವ್ ಅವರು ಪ್ರಶಸ್ತಿಗಾಗಿ ಕಾದಾಟ ನಡೆಸಲಿದ್ದಾರೆ. ಸೆಪ್ಟೆಂಬರ್ 20ರ ಭಾನುವಾರ ಯುಎಸ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯ ನಡೆಯಲಿದೆ.
https://youtu.be/pBfvuudmGeM








