ಇದೆಂಥಾ ಸೆಲ್ಫಿ ಗೀಳು.. ಬಾತ್ ಟಬ್ ನಲ್ಲಿ ಫೋಟೋ ಶೂಟ್..!!
ಸೆಲ್ಫಿ ಗೀಳು ಯಾರನ್ನೂ ಬಿಟ್ಟಿಲ್ಲ. ಕಿರಿಯರಿಂದ ಹಿಡಿದು ಹಿರಿಯರವರೆಗೂ ಹಲ್ಲು ಗಿಂಜಿಕೊಂಡು ಸೆಲ್ಫಿಗೆ ಫೋಸ್ ಕೊಡುತ್ತಾರೆ. ಅದರಲ್ಲೂ ಸೋಶಿಯಲ್ ಮೀಡಿಯಾದ ಕಿಚ್ಚು ಹೆಚ್ಚಾದಂತೆ ರೀಲ್ಸ್ ಯುಗ ಆರಂಭವಾಗಿದೆ.
ಜನ ಸಾಮಾನ್ಯರಿಂದ ಹಿಡಿದು ದೊಡ್ಡ ದೊಡ್ಡ ಸ್ಟಾರ್ ಗಳವರೆಗೂ ಆ ಹಾಡು ಈ ಹಾಡು ಅಂತ ಬೇಧವಿಲ್ಲದೇ ಎಲ್ಲಾ ಹಾಡುಗಳಿಗೆ ಹೆಜ್ಜೆ ಹಾಕ್ತಿದ್ದಾರೆ. ಜೊತೆಗೆ ಅವುಗಳನ್ನ ತಮ್ಮ ತಮ್ಮ ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾ ದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಅದರಲ್ಲೂ ಮುಖ್ಯವಾಗಿ ನಟಿಯರ ವಿಚಾರಕ್ಕೆ ಬಂದರೇ ಸೋಶಿಯಲ್ ಮಿಡಿಯಾದಲ್ಲಿ ಶುರುವಾಗುವ ಪ್ರತಿವೊಂದು ಚಾಲೆಂಜ್ ಆಕ್ಸೆಪ್ಟ್ ಮಾಡಿಕೊಳ್ಳುತ್ತಾ ಫೋಟೋಗಳನ್ನ ಶೇರ್ ಮಾಡಿಕೊಳ್ಳುತ್ತಲೇ ಇದ್ದಾರೆ.
ಈ ಹಿಂದೆ ಪಿಲ್ಲೋ ಚಾಲೆಂಜ್ ತೆಗೆದುಕೊಂಡಿದ್ದ ಹಾಟ್ ಬೆಡಗಿಯರು, ಈಗ ಬಾತ್ ಟಬ್ ನಲ್ಲಿ ಅಂದ ಪ್ರದರ್ಶಿಸಲು ನಿಂತಿದ್ದಾರೆ…!!!
ಹೌದು,,,! ಸದ್ಯ ಬಾಲಿವುಡ್ ನಟಿಯರಿಂದ ಹಿಡಿದು ಟಾಲಿವುಟ್ ತಾರೆಯರವರೆಗೂ ಈ ಬಾತ್ ಟಬ್ ಸೆಲ್ಫಿಯನ್ನ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಮುಖ್ಯವಾಗಿ ಬಾಲಿವುಡ್ ನಟಿ ಆಲಿಯಾ ಭಟ್ಮ ಬಾತ್ ಟಬ್ ನಲ್ಲಿ ವಿಭಿನ್ನ ಫೋಟೋ ಶೂಟ್ ಮಾಡಿಸಿ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಪುಷ್ಪಾ ಸಿನಿಮಾದಲ್ಲಿ ಹು ಅಂಟವಾ.. ಹುಹು ಅಂಟಾವಾ ಮಾವ ಎಂದಿದ್ದ ನಟಿ ಸಮಂತ ಕೂಡ ಬಾತ್ ಟಬ್ ಸೆಲ್ಫಿ ಗೀಳಿನಲ್ಲಿ ಹಿಂದೆ ಬಿದಿಲ್ಲ.
ಇನ್ನ ಎಲ್ಲರಂತೆ ನಾನೂ ಸಹ ಎಂದು ರಿಯಾ ಸೇನ್ ಬಾತ್‌ಟಬ್‌ನಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಇತ್ತ ನಟಿ ಪ್ರಿಯಾಂಕಾ ಚೋಪ್ರಾ ಬಾತ್ ಟಬ್ನಲ್ಲಿ ಮನಮೋಹಕ ನೋಟ ಬೀರಿದ್ದಾರೆ.
ಬಾತ್‌ಟಬ್‌ನಲ್ಲಿ ಸನ್ನಿ ಲಿಯೋನ್ ಮೈಮರೆತರೇ ಜಾಕ್ವೆಲಿನ್ ಫರ್ನಾಂಡಿಸ್, ದೀಪಿಕಾ ಪಡುಕೋಣೆ, ಝರೀನ್ ಖಾನ್ ಬಾತ್ ಟಬ್ ನಲ್ಲಿ ಸ್ಮೈಲ್ ಮಾಡಿದ್ದಾರೆ.
ನಟಿಯರಷ್ಟೇ ಅಲ್ಲದೇ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ, ಶಾಹಿದ್ ಕಪೂರ್, ಕಾರ್ತಿಕ್ ಆರ್ಯನ್ ಕೂಡ ಬಾತ್ ಟಬ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.