ಆಲಿಬಾಬಾ ಸಂಸ್ಥಾಪಕ ಜಾಕ್ ಮಾ ಮಿಸ್ಸಿಂಗ್..?!
ಬೀಜಿಂಗ್ : ಆಲಿಬಾಬಾ ಸಂಸ್ಥಾಪಕ, ಶತಕೋಟಿ ಒಡೆಯ ಜಾಕ್ ಮಾ ಕಾಣ್ಮರೆಯಾಗಿದ್ದಾರಂತೆ. ಚೀನಾ ಸರ್ಕಾರದ ನಡೆ, ದೇಶಿಯ ಬ್ಯಾಂಕ್ ಗಳ ಪಾಲಿಸಿಗಳ ಬಗ್ಗೆ ಬಹಿರಂಗವಾಗಿ ಜಾಕ್ ಮಾ ವಿಮರ್ಶೆ ಮಾಡಿದಾಗಿನಿಂದಲೂ ಅವರು ಕಾಣಿಸುತ್ತಿಲ್ಲ ಎಂದು ವರದಿಯಾಗಿದೆ.
ಎರಡು ತಿಂಗಳ ಹಿಂದೆ ಜಾಕ್ ಮಾ ಚೀನಾ ಸರ್ಕಾರವನ್ನು ಕಟುವಾಗಿ ಬಹಿರಂಗವಾಗಿ ಟೀಕಿಸಿದ್ದರು. ತನ್ನ ನೀತಿಗಳನ್ನ ಟೀಕಿಸಿದ್ದರೆ ಚೀನಾ ಸರ್ಕಾರ ತನ್ನ ದೇಶದ ಸಾರ್ವಜನಿಕ ಮೇಲೆ ಕ್ರಮ ತೆಗೆದುಕೊಳ್ಳುವುದು ಎಲ್ಲರಿಗೂ ಗೊತ್ತೇ ಇದೆ.
ಅದೇ ರೀತಿಯಾಗಿ ಜಾಕ್ ಮಾ ವಿರುದ್ಧ ಚೀನಾ ಸರ್ಕಾರ ಕ್ರಮ ತೆಗೆದುಕೊಂಡಿದ್ಯಾ ಅನ್ನೋ ಅನುಮಾನ ಈಗ ಉದ್ಭವವಾಗಿದೆ.
ಈ ಅನುಮಾನಕ್ಕೆ ಕಾರಣವೂ ಇದೆ. ಅದೇನೆಂದ್ರೆ ಕೆಲ ದಿನಗಳ ಹಿಂದೆ ಜಾಕ್ ಮಾ ಅವರು ಅಮೆರಿಕಾ ಬಿಸಿನೆಸ್ ಹೀರೋ ಅನ್ನೋ ಟ್ಯಾಲೆಂಟ್ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಈ ಕಾರ್ಯಕ್ರಮದ ಅಂತಿಮ ಎಪಿಸೋಡ್ ನಲ್ಲಿ ಜಾಕ್ ಮಾ ಭಾಗವಹಿಸಬೇಕಿತ್ತು. ಆದ್ರೆ ಅವರು ಕಾಣಿಸಿಕೊಳ್ಳಲ್ಲಿಲ್ಲ.
ಭಾರತದಲ್ಲಿ ಮತ್ತೆ 9 ಮಂದಿಗೆ ಹೊಸ ವೈರಸ್ ದೃಢ
ಅದೇ ಆಫ್ರಿಕಾ ಬಿಸಿನೆಸ್ ಹೀರೋ ಕಾರ್ಯಕ್ರಮದಲ್ಲಿ ತೀರ್ಪುಗಾರಗಾಗಿ ಅವರು ನೇಮಕವಾಗಿದ್ದರು. ಆದ್ರೆ ಈ ಕಾರ್ಯಕ್ರಮದ ವೆಬ್ ಸೈಟ್ ನಿಂದ ಜಾಕ್ ಮಾ ಫೋಟೋವನ್ನು ತೆಗೆದು ಹಾಕಲಾಗಿತ್ತು.
ಇದಲ್ಲದೇ ಅವರು ಕೆಲ ತಿಂಗಳಿನಿಂದ ಬಹಿರಂಗವಾಗಿ ಕೂಡ ಕಾಣಿಸಿಕೊಳ್ಳದೇ ಇರೋದು ಅನುಮಾನವನ್ನ ದ್ವಿಗುಣಗೊಳಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









