ಮಂಗಳೂರು: ಶಿವನ ವಿಗ್ರಹದ ಧ್ವಜಪೀಠದ ಮೇಲೆ ಶೂ ಧರಿಸಿ ಟಿಕ್ ಮಾಡಲು ಹೋಗಿ ನಾಲ್ವರು ಅನ್ಯಕೋಮಿನ ಯುವಕರು ಶ್ರೀಕೃಷ್ಣನ ಜನ್ಮಸ್ಥಾನ ಸೇರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಕಂಚಿನಡ್ಕ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಯುವಕರಾದ ಮಸೂದ್, ಅಜೀಮ್, ಅಬ್ದುಲ್ ಲತೀಫ್ ಹಾಗೂ ಅರ್ಫಾಜ್‍ರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಕಂಚಿನಡ್ಕ ಗ್ರಾಮ ಹಿಂದೂ ರುದ್ರಭೂಮಿಯಲ್ಲಿ ತ್ರಿಶೂಲ ಸ್ತಂಭ ನಿರ್ಮಾಣವಾಗಿದೆ. ಇದರ ಮೇಲೆ ಈ ಯುವಕರು ಭರ್ಜರಿ ಟಿಕ್‍ಟಾಕ್ ಮಾಡಿದ್ದಾರೆ. ಈ ಯುವಕರ ಈ ಟಿಕ್‍ಟಾಕ್ ವಿಡಿಯೋ ಸೋಷಿಯಲ್ ಮೀಡಿಯಲ್ಲಿ ಭಾರಿ ಆಕ್ರೊಶಕ್ಕೆ ಕಾರಣವಾಗಿತ್ತು.
ಹಿಂದೂಗಳ ಧಾರ್ಮಿಕ ಸ್ಥಳಗಳಲ್ಲಿ ಪಾದರಕ್ಷೆಗಳನ್ನು ಧರಿಸುವುದು ನಿಷಿದ್ಧ. ಆದರೆ, ಈ ಯುವಕರು
ತಮ್ಮ ಟಿಕ್ ಟಾಕ್ ಶೋಕಿಗೆ ಹಿಂದೂ ರುದ್ರಭೂಮಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರದ ಗೌರವಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿ ರುದ್ರಭೂಮಿ ಅಧ್ಯಕ್ಷರು ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಕೊಂಡ ಪೊಲೀಸರು ನಾಲ್ವರು ಯುವಕರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ದೇಶದಲ್ಲಿ ಟಿಕ್‍ಟಾಕ್ ಕ್ರೇಜ್‍ಗೆ ದಿನ ನಿತ್ಯ ನೂರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳನ್ನು ದಿನ ನಿತ್ಯ ನೋಡುತ್ತಲೇ ಇರುತ್ತೇವೆ. ದಕ್ಷಿಣ ಕನ್ನಡ ಜಿಲ್ಲೆ ಮೊದಲೇ ಕೋಮುಸೂಕ್ಷ್ಮ ಪ್ರದೇಶ. ಒಂದು ಸಣ್ಣ ವಿಚಾರವೂ ಇಲ್ಲಿ ಕೋಮುಬಣ್ಣ ಪಡೆಯುತ್ತದೆ.








