ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸೋಂಕು ಮತ್ತಷ್ಟು ಹರಡದಂತೆ ತಡೆಯುವ ನಿಟ್ಟಿನಲ್ಲಿ ಇಂದಿನಿಂದ ರಾಜ್ಯದ ಎಲ್ಲಾ ಬಾರ್ ಗಳನ್ನು ಕ್ಲೋಸ್ ಮಾಡುವಂತೆ ಸಿಎಂ ಆದೇಶಿಸಿದ್ದಾರೆ.
ಈ ಕುರಿತಂತೆ ಆದೇಶ ಹೊರಡಿಸಿರುವ ಅಬಕಾರಿ ಆಯುಕ್ತರು, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ 13-03-2020ರಂದು ಕೊರೊನಾ ವೈರಸ್ ನಿಯಂತ್ರಣ ಕುರಿತು ಸಭೆ ಜರುಗಿತು. ಈ ಸಭೆಯಲ್ಲಿ ಕೊರೊನಾ ವೈರಸ್ ತಡೆಗಗಟ್ಟುವ ಹಾಗೂ ಕಣ್ಗಾವಲು ಕ್ರಮಗಳನ್ನು ವಹಿಸುವ ಕುರಿತು ಸುಧೀರ್ಘವಾಗಿ ಚರ್ಚೆಸಿ ಕೆಲ ನಿರ್ಧಾರಗಳನ್ನು ಜಾರಿಗೆ ತರಲು ತೀರ್ಮಾನಿಸಲಾಗಿರುತ್ತದೆ.
ಸದರಿ ತೀರ್ಮಾನಗಳಲ್ಲಿ ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಪಬ್ ಗಳು, ಕ್ಲಬ್ ಗಳು ಹಾಗೂ ಹೆಚ್ಚಿನ ಜನರು ಸೇರುವ ಕಾರ್ಯಕ್ರಮಗಳನ್ನು ನಡೆಸದಿರುವುದು ಸಹ ತೀರ್ಮಾನಸಲಾಗಿರುತ್ತದೆ. ಈ ನಿರ್ಣಯಗಳನ್ನು ಕಾರ್ಯಗತಗೊಳಿಸಲು ಎಲ್ಲಾ ಇಲಾಖೆಗಳು ಸಂಪೂರ್ಣ ಸಹಕಾರ ನೀಡಲು ಸೂಚಿಸಲಾಗಿರುತ್ತದೆ. ಈ ಸೂಚನೆಯನ್ನು ಕಾರ್ಯೋನ್ಮುಖಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಅಬಕಾರಿ ಕಾಯ್ದೆ 1965 ಕಲಂ 21(1) ಮತ್ತು 3(2) ರಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಈ ಕೆಳಗಿನಂತೆ ಆದೇಶ ನೀಡಲಾಗಿದೆ.
ದಿನಾಂಕ 14-03-2020ರ ಬೆಳಿಗ್ಗೆ 6 ಗಂಟೆಯಿಂದ 21-03-2020ರ ಮಧ್ಯರಾತ್ರಿಯವರೆಗೂ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ರೀತಿಯ ಕ್ಲಬ್ ಗಳು(ಸಿಎಲ್-4 ಸನ್ನದುಗಳು) ಸ್ವತಂತ್ರ ಆ ವಿ ಬಿ ಸನ್ನದುಗಳು, ಪಬ್ ಗಳನ್ನು ಮುಚ್ಚುಲು ಆದೇಶಿಸಿದ್ದಾರೆ.








