ಲಕ್ನೋ: ಜಗತ್ತು ಬಳಸುವ ಪ್ರತಿಯೊಂದು ಸಾಧನಗಳಲ್ಲಿಯೂ ಭಾರತದ ಚಿಪ್ ಇರಬೇಕು ಎಂಬುವುದು ನನ್ನ ಕನಸು ಎಂದು ಪ್ರದಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ.
ಉತ್ತರಪ್ರದೇಶದ (Uttarpradesh) ಗ್ರೇಟರ್ ನೋಯ್ಡಾದ (Greater Noida) ಇಂಡಿಯಾ ಎಕ್ಸ್ಪೋ ಮಾರ್ಟ್ನಲ್ಲಿ (India Expo Mart) ನಡೆದ 2024ರ ಸೆಮಿಕಾನ್ ಇಂಡಿಯಾ (Semicon India 2024) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿಪ್ಗಳು ಕೇವಲ ತಂತ್ರಜ್ಞಾನದ ರೂಪವಾಗಿರಬಾರದು. ಅದು ಜನರ ಆಸೆಗಳನ್ನು ಈಡೇರಿಸುವ ಮಾಧ್ಯಮವಾಗಬೇಕು.
ಇಂತಹ ದೊಡ್ಡಮಟ್ಟದ ಕಾರ್ಯಕ್ರಮ ನಿಯೋಜಿಸುವಲ್ಲಿ ಭಾರತ ವಿಶ್ವದಲ್ಲೇ 8ನೇ ಸ್ಥಾನದಲ್ಲಿದೆ. 2028ರ ವೇಳೆಗೆ ಸೆಮಿಕಂಡಕ್ಟರ್ ಮಾರುಕಟ್ಟೆಯು 8,030 ಕೋಟಿ ತಲುಪಲಿದ್ದು, 85,000 ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಇದಕ್ಕಾಗಿ 1.4 ಲಕ್ಷ ಕೋಟಿಗೂ ಅಧಿಕ ಹೂಡಿಕೆ ಮಾಡಲಾಗಿದೆ. ಇನ್ನೂ ಹಲವು ಯೋಜನೆಗಳು ಚಾಲ್ತಿಯಲ್ಲಿವೆ ಎಂದ ಹೇಳಿದ್ದಾರೆ.