ಬಿಜೆಪಿ ಸರ್ಕಾರದಲ್ಲಿ ಎಲ್ಲರೂ ಕಳ್ಳರೇ : ಸಿದ್ದರಾಮಯ್ಯ ( Siddaramaiah )
ಬೆಂಗಳೂರು : ಬಿಜೆಪಿ ಸರ್ಕಾರದಲ್ಲಿ ಎಲ್ಲರೂ ಕಳ್ಳರೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ, ರಾಸಲೀಲೆ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ.
ಮುಂಬೈ ಫ್ರೆಂಡ್ಸ್ ಕೋರ್ಟ್ ಮೊರೆ ಹೋಗಿರುವ ಬಗ್ಗೆ ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಮ್ಮ ಪಕ್ಷ ಬಿಟ್ಟು ಹೋಗಿರುವವರ ಬಗ್ಗೆ ನಮಗೆ ಅನುಕಂಪ ಬರುತ್ತಾ ಎಂದು ಪ್ರಶ್ನಿಸಿದ್ರು.
ನಮ್ಮ ಸರ್ಕಾರವನ್ನ ಬೀಳಿಸಿದವರ ಬಗ್ಗೆ ನನಗೆ ಯಾವುದೇ ರೀತಿಯ ಅನುಕಂಪವಿಲ್ಲ ಎಂದು ಹೇಳಿದ್ರು.
ಇನ್ನು ಅವರಿಗೆ ಸಿಡಿ ಇರುವುದು ಮೊದಲೇ ಗೊತ್ತಿರಬೇಕು. ಇದೇ ಕಾರಣಕ್ಕೆ ಅವರು ಕೋರ್ಟ್ ಮೊರೆ ಹೋಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಕೋರ್ಟ್ ಮೋರೆ ಹೋಗಿರುವವರ ಕುರಿತಾಗಿ ನನಗೆ ಯಾವುದೇ ಮಾಹಿತಿ ಇಲ್ಲ. ಬಿಜೆಪಿಯಲ್ಲಿ ಎಲ್ಲರೂ ಕಳ್ಳರೆ ಆಗಿದ್ದಾರೆ. ಸಾಚಾ, ಪ್ರಾಮಾಣಿಕ ಅಂತ ಯಾರಿಲ್ಲ ಎಂದು ಟೀಕಿಸಿದರು.










