ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೇ ಆಲ್ ದಿ ಬೆಸ್ಟ್
ಮೊದಲಾಗಿ ನಿಮಗೆ ಆಲ್ ದಿ ಬೆಸ್ಟ್ ನೀವೆಲ್ಲರೂ ಈ ಪರೀಕ್ಷೆಯಲ್ಲಿ ವಿಜಯಶಾಲಿಗಳಾಗಿರುತ್ತೀರಿ ಎರಡೂ ಮಾತಿಲ್ಲ. ಯಾಕೆಂದರೆ ಸವಾಲುಗಳ ವಿರುದ್ಧ ಹೋರಾಡಿ ಗೆಲ್ಲುವ ಛಲ ನಿಮ್ಮಲಿದೆ ಮಾರ್ಚ್ ಏಪ್ರಿಲ್ ನಲ್ಲಿ ನಡೆಯಬೇಕಾಗಿದ್ದ ಈ ಪರೀಕ್ಷೆ ಕೊರೋನಾ ಕಾರಣದಿಂದ ಮುಂದೂಡಲ್ಪಟ್ಟಿತು. ಮುಖ್ಯವಾಗಿ ಅನಿವಾರ್ಯವಾಗಿ ಹೇರಿದ ಲಾಕ್ ಡೌನ್ ನಿಯಮವನ್ನು ಪಾಲಿಸಬೇಕಾಗಿತ್ತು ಇರಲಿ. ಈಗ ನೀವೆಲ್ಲರೂ ತಿಳಿದಂತೆ ಜೂನ್ 25 ರಿಂದ ಪ್ರಾರಂಭವಾಗಿ ಜುಲೈ 3 ರತನಕ ನಡೆಲಿರುವ ಪರೀಕ್ಷಾ ವೇಳಾಪಟ್ಟಿಯೂ ನಿಮ್ಮಲಿದೆ. ಮತ್ತೆ ಹೊಸದಾಗಿ ಪರೀಕ್ಷಾ ಪ್ರವೇಶ ಪತ್ರವನ್ನು ಪಡೆದಿರುತ್ತೀರಿ. ಹಾಗಾಗಿ ಗೆಲುವು ನಿಮ್ಮ ದೇ.
ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ಮೊದಲ ಬಾರಿಗೆ ರಾಜ್ಯವೇ ಗಮನ ಸೆಳೆಯುವ ಪರೀಕ್ಷೆಯನ್ನು ನೀವು ಬರೆಯುತ್ತಿದ್ದೀರಿ. ಪ್ರಥಮ ಭಾಷಾ ವಿಷಯವನ್ನು ಮೂರು ಗಂಟೆಗಳಷ್ಟು ಹಾಗೂ ದ್ವೀತಿಯ ತೃತೀಯ ಭಾಷೆ ಹಾಗೂ ಕೋರ್ ಸಬ್ಜೆಕ್ಟ್ ಎರಡೂವರೆ ಗಂಟೆಗಳಷ್ಟು ಬರೆಯುತ್ತಿರಬಹುದು.. ಹೌದು ವಿದ್ಯಾರ್ಥಿಗಳೇ ಪ್ರತೀ ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ಇದು ಮುಂದಿನ ವ್ಯಾಸಂಗಕ್ಕೆ ಅರ್ಹತೆ ಪಡೆಯಲು ಇದೊಂದು ಒಳ್ಳೆಯ ಅವಕಾಶ. ಹಾಗಾಗಿ ನಿಮ್ಮ ಬೌದ್ಧಿಕ ಮಟ್ಟಕ್ಕನುಗುಣವಾಗಿ ಆರು ಪಠ್ಯ ವಿಷಯಗಳ ಆಧಾರಿತವಾಗಿ ಈ ಪರೀಕ್ಷೆ ನಡೆಯುವುದು ನಿಮಗೆಲ್ಲ ತಿಳಿದ ವಿಷಯ. ಆದರೆ ತುಂಬಾ ಅಭಿಮಾನದ ಸಂಗತಿಯೆಂದರೆ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಈ ಪರೀಕ್ಷೆಗೆ ಮೊದಲ ಬಾರಿ ನೀವು ಅರ್ಹತೆಯನ್ನು ಪಡೆದುಕೊಂಡಿರುವುದು. ಈ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಸಾಧಕ ಹರಿಕಾರರು ನೀವಾಗಿದ್ದೀರಿ.ಹಾಗಾಗಿ ಆತ್ಮವಿಶ್ವಾಸ ದಿಂದ ಪರೀಕ್ಷೆಗೆ ತೆರಳಿರಿ. ನಿಮ್ಮ ಪ್ರೀತಿಯ ಗುರುಗಳು ಹೇಳಿದ ಸೂಚನೆಯಂತೆ ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಓದಿ ಅಂದವಾದ ಅಕ್ಷರ ಗಳಲ್ಲಿ ಬರೆದು ಉತ್ತರಿಸಿರಿ.
ಈ ಬಾರಿ ಪರೀಕ್ಷೆಗೆ ಸಂಬಂಧಿಸಿದಂತೆ ಇಡೀ ರಾಜ್ಯದ ಪ್ರತೀ ತಾಲೂಕಿನಲ್ಲಿ ಪರೀಕ್ಷಾ ಕೇಂದ್ರ ಗಳನ್ನು ಮಾನ್ಯ ಮುಖ್ಯಮಂತ್ರಿಗಳ ಶಿಕ್ಷಣ ಸಚಿವರ ಜಿಲ್ಲಾಧಿಕಾರಿಗಳ ಶಿಕ್ಷಣ ಇಲಾಖಾ ಅಧಿಕಾರಿಗಳ ಸೂಚನೆಯಂತೆ ವಿಶೇಷವಾದ ರೀತಿಯಲ್ಲಿ ಸಿದ್ಧ ಗೊಳಿಸಿದ್ದಾರೆ. ಕಾರಣ ಕೋವಿಡ್ 19 ಸೋಂಕು ಹರಡದಂತೆ ಅನುಸರಿಸುತ್ತಿರುವ ಮುಂಜಾಗ್ರತಾ ಕ್ರಮಗಳಾಗಿವೆ ಆದರೆ ನೀವುಗಳು ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ರಾಜ್ಯ ಸರಕಾರವು ಪ್ರತೀ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷೆ ಹಾಗೂ ಆರೋಗ್ಯದ ಬಗ್ಗೆ ಬಹಳಷ್ಟು ಕಾಳಜಿ ವಹಿಸಿದೆ ಅಂತಹ ತೊಂದರೆಗಳು ಬಂದಲ್ಲಿ ಸರಕಾರ ಶಿಕ್ಷಣ ಸಚಿವರು ಶಿಕ್ಷಣ ಇಲಾಖೆಯೇ ಪ್ರಕಟಣೆಯನ್ನು ಸೂಚಿಸಬಹುದು ಹಾಗಾಗಿ ನೀವುಗಳೆಲ್ಲರೂ ಬರೆಯಬೇಕೆಂದಿರುವ ಪರೀಕ್ಷೆ ಯನ್ನು ಪ್ರೀತಿಯಿಂದ ಆತ್ಮವಿಶ್ವಾಸ ದಿಂದ ಮತ್ತು ಗೌರವಪೂರ್ವಕವಾಗಿ ಬರೆದು ಉತ್ತಮ ಅಂಕಗಳನ್ನು ಪಡೆಯಿರಿ. ನಿಮಗೆ ಇದೊಂದು ಸುವರ್ಣಾವಕಾಶವೇ ಸರಿ ನಿಮ್ಮ ಮನೆಯಿಂದ ನಿಮ್ಮ ಪರೀಕ್ಷಾ ಕೇಂದ್ರ ಕ್ಕೆ ಬರುವಲ್ಲಿ ನಿಮಗೆ ಬೇಕಾದ ಸಹಾಯ, ಭದ್ರತೆ ,ಸಾರಿಗೆ ವ್ಯವಸ್ಥೆ ಎಲ್ಲವೂ ಸಿದ್ಧತೆ ಯಾಗಿದೆ ನಿಮ್ಮ ಶಾಲೆಗಳಿಗೆ ದೂರವಾಣಿ ಕರೆಯ ಮೂಲಕ ತಿಳಿಸಿದರೆ ಎಲ್ಲಾ ಮಾಹಿತಿ ನೀಡುವರು .ಅದರಲ್ಲೂ ಈ ಬಾರಿ ಆರೋಗ್ಯ ಹಿತ ದೃಷ್ಟಿಯಿಂದ ಆರೋಗ್ಯ ಹಾಗೆಯೇ ಬೇರೆ ಬೇರೆ ಇಲಾಖೆಗಳು ನಿಮ್ಮ ಮೇಲಿನ ಜವಾಬ್ದಾರಿ ಹಾಗೂ ಪ್ರೀತಿಯಿಂದ ಸಂಪೂರ್ಣ ಸಹಕಾರಕ್ಕೆ ಕೈ ಜೋಡಿಸಿದೆ ಹಾಗಾಗಿ ನೀವಾಗಲಿ ನಿಮ್ಮ ಮನೆಯವರಾಗಲಿ ಈ ಪರೀಕ್ಷೆಯ ಕುರಿತಂತೆ ಆತಂಕ ಪಡುವ ಅವಶ್ಯಕತೆ ಇಲ್ಲ ಅಂತಹ ಪರಿಸ್ಥಿತಿ ಬಂದರೆ ಸಂಬಂಧಪಟ್ಟ ವರಿಗೆ ತಿಳಿಸಿದರೆ ನಿಮಗೆ ಸಹಕರಿಸುವರು.
ಹೌದು ವಿದ್ಯಾರ್ಥಿಗಳೇ ಈ ಪರೀಕ್ಷೆ ಗೆ ನಾವು ಏನನ್ನೂ ಬರೆಯಲಿ ಹೇಗೆ ಬರೆಯಲಿ ಎಂದೂ ಪ್ರಶ್ನಿಸದಿರಿ. ಈಗಾಗಲೇ ನಿಮ್ಮಲ್ಲಿ ಪಠ್ಯ ಪುಸ್ತಕ, ಪಾಠ ಟಿಪ್ಪಣಿ ,ಮಾದರಿ ಪ್ರಶ್ನೆ ಪತ್ರಿಕೆಗಳು , ಪೂರಕ ಮಾಹಿತಿಗಳು ಸಾಕಷ್ಟು ಇರಬಹುದು.ಇವೆಲ್ಲಕ್ಕಿಂತಲೂ ಹೆಚ್ಚಾಗಿ ನಿಮ್ಮ ಪಠ್ಯ ವಿಷಯ ಶಿಕ್ಷಕರು ಸಾಕಷ್ಟು ಮಾಹಿತಿಯನ್ನು ನೀಡಿ ಯಾವ ಪ್ರಶ್ನೆಗಳು ಎಷ್ಟು ಅಂಕಳಿಗೆ ಬರಬಹುದು ನಿರೀಕ್ಷಿತ ಉತ್ತರ ಬರವಣಿಗೆಯಲ್ಲಿಎಷ್ಟಿರಬೇಕೆಂದು ಸ್ಪಷ್ಟ ಸೂಚನೆಯನ್ನು ನೀಡಿರುತ್ತಾರೆ. ಅಲ್ಲದೇ ಸಂಭಾವ್ಯ ಪ್ರಶ್ನೆಗಳು ಪುನರಾವರ್ತಿತ ಪ್ರಶ್ನೆಗಳು ಯಾವ್ಯಾವು ಎನ್ನುವ ಸೂಚನೆಯನ್ನು ನೀಡಿರುತ್ತಾರೆ. ಅವುಗಳನ್ನೆಲ್ಲ ಚೆನ್ನಾಗಿ ಓದಿ ಸಿದ್ಧತೆ ಯನ್ನು ಮಾಡಿಕೊಳ್ಳಿರಿ. ಅವಶ್ಯಕತೆ ಎನಿಸಿದರೆ ದೂರವಾಣಿಯ ಕರೆಯ ಮೂಲಕ ಕೇಳಿ ತಿಳಿಯಿರಿ.ನಿಮಗೆ ನಮಗೆಲ್ಲಾ ತಿಳಿದಿರುವಂತೆ ಅನಿವಾರ್ಯ ಕಾರಣಗಳಿಂದಾಗಿ ವೇಳಾಪಟ್ಟಿ ಬದಲಾವಣೆಯಾಗಿದೆ. ಹೊರತು ಈಗಾಗಲೇ ಬರೆದ ಪೂರ್ವ ಸಿದ್ಧತಾ ಪರೀಕ್ಷಾ ಮಾದರಿಯಲ್ಲೇ ನಡೆಯುವುದು.
ಹಾಗಾಗಿ ಒಂದು ವೇಳೆ ಕೆಲವೊಂದು ಕಾರಣಗಳಿಂದಾಗಿ ನಿಮ್ಮ ಪೋಷಕರೇ ಗಾಬರಿಯಾದರೆ ನೀವೇ ಅವರಿಗೆ ಧೈರ್ಯವನ್ನು ಹೇಳಿ ಜಾಗ್ರತೆಯಿಂದ ಪರೀಕ್ಷೆ ಬರೆದು ಬರೆವೆನು ಎಂದು ತಿಳಿಸಿರಿ. ಸಮಯಕ್ಕೆ ಸರಿಯಾಗಿ ಆಹಾರ ತೆಗೆದುಕೊಳ್ಳಿ. ರಾತ್ರಿಯಿಡೀ ಓದುತ್ತಲೇ ಬೆಳಗು ಮಾಡದಿರಿ. ಆರೋಗ್ಯ ಹಿತ ದೃಷ್ಟಿಯಿಂದ ಬೇಕಾಗುವಷ್ಟು ನಿದ್ದೆಯನ್ನು ಮಾಡಿರಿ. ಮರುದಿನ ಎಂದಿನಂತೆ ಬೆಳಿಗ್ಗೆ ಬೇಗ ಎದ್ದು ಓದಿರಿ.ಪರೀಕ್ಷೆ ಎಂದು ಕೆಟ್ಟ ಯೋಚನೆಯನ್ನು ಮಾಡದಿರಿ.ಪರೀಕ್ಷಾ ಕೇಂದ್ರ ಗಳಲ್ಲಿ ನೀಡುವ ಸೂಚನೆಯನ್ನು ಸರಿಯಾಗಿ ಪಾಲಿಸಿರಿ. ಹಾಗೆಯೇ ಉತ್ತಮವಾಗಿ ಬರೆದು ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರಿ. ಪರ ಇದು ಜೀವನ ಪರೀಕ್ಷೆಯಲ್ಲ ಆದರೂ ನಮ್ಮ ಮುಂದಿನ ವ್ಯಾಸಂಗಕ್ಕೆ ಒಂದು ಒಳ್ಳೆಯ ಭೂಮಿಕೆಯಾಗುವುದು ಎನ್ನುವುದು ಮತ್ತೊಮ್ಮೆ ಹೇಳುವೆನು. ಮರೆಯದಿರಿ. ನಿಮ್ಮ ಹೆತ್ತವರ ಗುರಃಗಳ ಹಾಗೂ ಎಲ್ಲರ ಆಶೀರ್ವಾದ ನಿಮಗಿದೆ. ಮುಂದೆ ಬರಲಿರುವ ಫಲಿತಾಂಶ ನಿಮಗೆ ಶುಭ ಸುದ್ದಿಯಾಗಲಿ. ನಂತರ ಒಂದಿಷ್ಟು ದಿನಗಳವರೆಗೆ ನೀವು ಆರಾಮವಾಗಿರುವಿರಿ ಅಲ್ವೇ? ಶಿಕ್ಷಣವೇ ಶಕ್ತಿ. ನೀವೇ ದೇಶದ ಭಾವೀ ಪ್ರಜೆಗಳು. ನೀವೇ ಭವ್ಯ ಭಾರತದ ಶಿಲ್ಪಿಗಳು. ಮತ್ತೊಮ್ಮೆ ಹೇಳುವೆ all the best, do best .
ಗಣೇಶ್ ಜಾಲ್ಸೂರು