ಅಲ್ಲು ಅರ್ಜುನ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ ಕಿಂಗ್ ಮೇಕರ್ ಪ್ರಶಾಂತ್ ನೀಲ್..!
ಸ್ಯಾಂಡಲ್ ವುಡ್ ನ ಕಿಂಗ್ ಮೇಕರ್ ಪ್ರಸಾಂತ್ ನೀಲ್ ಕೆಜಿಎಫ್ ಸಿನಿಮಾ ಮೂಲಕ ಭಾರತೀಯ ಸಿನಿಮಾರಂಗದಲ್ಲೇ ಸಂಚಲನ ಸೃಷ್ಟಿ ಮಾಡಿದ್ದಾರೆ. ರಾಕಿ ಭಾಯ್ ಪ್ರಸಾಂತ್ ನೀಲ್ ಕಾಂಬೋ ಜಾದು ಮಾಡ್ತಿದೆ. ಈ ನಡುವೆ ಪ್ರಶಾಂತ್ ನೀಲ್ ಅವರು ಭಾರತದ ಮತ್ತೊಂದು ಬಿಗ್ ಸ್ಟಾರ್ ಪ್ರಭಾಸ್ ಜೊತೆಗೆ ಸಲಾರ್ ಸಿನಿಮಾ ಮಾಡ್ತಿರೋದು ಎಲ್ರಿಗೂ ಗೊತ್ತೇ ಇದೆ. ಆದ್ರೆ ಇದೀಗ ಮತ್ತೊಂದು ಸುದ್ದಿ ಹರಿದಾಡೋಕೆ ಶುರುವಾಗಿದೆ. ಅದಕ್ಕೆ ಕಾರಣ ಸಾಕ್ಷಿಯೂ ಇದೆ. ಹೌದು ಪ್ರಶಾಂತ್ ನೀಲ್ ಟಾಲಿವುಡ್ ನ ಮತ್ತೊಬ್ಬ ಸ್ಟಾರ್ ನಟ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜೊತೆಗೆ ಸಿನಿಮಾ ಮಾಡಲಿದ್ದಾರೆ.
ಹೌದು ಇಂದು ಪ್ರಶಾಂತ್ ನೀಲ್ ಖುದ್ದು ಅಲ್ಲು ಅರ್ಜುನ್ ಅವರನ್ನ ಭೇಟಿಯಾಗಿದ್ದಾರೆ. ಹೌದು. ಪ್ರಶಾಂತ್ ನೀಲ್ ಹಾಗೂ ಅಲ್ಲು ಅರ್ಜುನ್ ಇಂದು ಹೈದಾರಾಬಾದ್ ನಲ್ಲಿ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವಿಚಾರ ಇದೀಗ ಅಲ್ಲು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಅಷ್ಟೇ ಅಲ್ಲ ಸ್ಯಾಂಡಲ್ ವುಡ್ ಅಭಿಮಾನಿಗಳ ಕಾತರತೆ ಹೆಚ್ಚಿಸಿದೆ. ಪ್ರಶಾಂತ್ ನೀಲ್ ಅವರು ಸದ್ಯ ಪ್ರಭಾಸ್ ನಟನೆಯ ಸಲಾರ್ ಸಿನಿಮಾದ ಚಿತ್ರೀಕರಣದ ಬ್ಯುಸಿಯಲ್ಲಿದ್ದಾರೆ. ಈ ಮಧ್ಯೆ ಇಂದು ಸ್ವಲ್ಪ ಬಿಡುವು ಮಾಡಿಕೊಂಡು ಅಲ್ಲು ಅರವಿಂದ್ ಅವರ ಗೀತಾ ಆರ್ಟ್ಸ್ ಪ್ರೊಡಕ್ಷನ್ ಕಚೇರಿಗೆ ಭೇಟಿ ಕೊಟ್ಟಿದ್ದಾರೆ. ಆಗ ಪ್ರಶಾಂತ್ ನೀಲ್ ಅವರನ್ನು ಭೇಟಿಯಾಗಲು ಅಲ್ಲು ಕೂಡ ಆಫೀಸಿಗೆ ಬಂದಿದ್ದು, ಕೆಲ ಕಾಲ ಚರ್ಚೆ ನಡೆಸಿದ್ದಾರೆ.
ಇನ್ನೂ ಪ್ರಶಾಂತ್ ನೀಲ್ ಅವರು ಕಾರಿನಿಂದ ಇಳಿಯುತ್ತಿದ್ದಂತೆ ಜನರು ಖುಷಿಯಲ್ಲಿ ಕಿರುಚಾಡಿದ್ದಾರೆ. ಇತ್ತ ಆಫೀಸ್ ನಿಂದ ಅಲ್ಲು ಅರ್ಜುನ್ ಹೊರ ಬರುತ್ತಿದ್ದಂತೆ ಫ್ಯಾನ್ಸ್ ಹೋ….. ಎಂಬ ಧ್ವನಿ ಮುಗಿಲು ಮುಟ್ಟಿತ್ತು. ಪ್ರಶಾಂತ್ ನೀಲ್ ಅವರು ಅಲ್ಲು ಆಫೀಸಿಗೆ ತೆರಳಿ ಸಿನಿಮಾ ಸ್ಕ್ರಿಪ್ಟ್ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಈ ಬೆಳವಣಿಗೆಯನ್ನು ನೋಡ್ತಿದ್ರೆ ಮುಂದಿನ ಇನಗಳಲ್ಲಿ ಪ್ರಶಾಂತ್ ನೀಲ್ ಸಲಾರ್ ಶೂಟಿಂಗ್ ಮುಗಿಯುತ್ತಿದ್ದಂತೆಯೇ ಅಲ್ಲು ಜೊತೆಗೆ ಮತ್ತೊಂದು ಹೈ ಓಲ್ಟೇಜ್ ಪ್ಯಾನ್ ಇಂಡಿಯಾ ಸಿನಿಮಾ ಮಾಡಲಿರೋದ್ರಲ್ಲಿ ನೋ ಡೌಟ್.









