ಅಲ್ಲು ಹೊಸ ಸಿನಿಮಾದಲ್ಲಿ ನಾಯಕಿ ಯಾರು..? ಇಬ್ಬರು ಕನ್ನಡತಿಯರಲ್ಲಿ ಯಾರಾಗ್ತಾರೆ ನಾಯಕಿ..?
ಹೈದರಾಬಾದ್ : ಕನ್ನಡದ ನಟಿಯರಾದ ಪೂಜಾ ಹೆಗ್ಡೆ ಹಾಗೂ ರಷ್ಮಿಕಾ ಮಂದಣ್ಣ ಇಬ್ರೂ ಸಹ ಟಾಲಿವುಡ್ ನಲ್ಲಿ ಮಿಂಚುತ್ತಿರುವ ಬಹುಬೇಡಿಕೆಯರ ನಟಿಯರು.. ರಶ್ಮಿಕಾ ಕನ್ನಡದ ಸಿನಿಮಾ ಮೂಲಕ ಹಿಟ್ ಆಗಿ ನಂತರ ಟಾಲಿವುಡ್ , ಕಾಲಿವುಡ್ ಈಗ ಬಾಲಿವುಡ್ ಗೆ ಹಾರಿರುವ ನಟಿ.. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸೊಯಾಗಿರುವ ನಟಿ.. ಕನ್ನಡವರಿಂದಲೇ ಅತಿ ಹೆಚ್ಚು ಟ್ರೋಲ್ ಆಗುವ ನಟಿ ಕೂಡ ಹೌದು..
ಪೂಜಾ ಹೆಗ್ಡೆ ಮೂಲತಃ ಕನ್ನಡದವರೇ ಆದ್ರೂ ಸಿನಿ ಜರ್ನಿ ಶುರು ಮಾಡಿದ್ದು ಪರಭಾಷೆಯಲ್ಲಿ ಮಿಂಚುತ್ತಿರೋದು ಇಡೀ ದಕ್ಷಿಣ ಭಾರತದ ಸಿನಿಮಾರಂಗ ಅಷ್ಟೇ ಬಾಲಿವುಡ್ ನಲ್ಲಿಯೂ ಪೂಜಾ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಫೇಮ್ ಆಗ್ಲಿ , ಫೇಮಸ್ ಆಗಿರೋದಾಗ್ಲೀ , ಹೆಚ್ಚು ಫ್ಯಾನ್ಸ್ ಇರೋದಾಗ್ಲೀ ಬೇಡಿಕೆ , ಸಂಭಾವನೆ ವಿಚಾರದಲ್ಲಾಗ್ಲಿ ನಮ್ಮ ಬುಟ್ಟಬೊಮ್ಮ ಚಷ್ಮಾ ಸುಂದರಿಗಿಂದ ಒಂದು ಲೆವೆಲ್ ಹೆಚ್ಚಾಗಿದ್ದಾರೆ..
ರಶ್ಮಿಕಾ ಸದ್ಯ ಅಲ್ಲು ಅರ್ಜುನ್ ರ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪಾದಲ್ಲಿ ನಾಯಕಿಯಾಗಿರುವ ವಿಚಾರ ಎಲ್ರಿಗೂ ಗೊತ್ತೇ ಇದೆ.. ಈ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.. ಈ ನಡುವೆ ಅಲ್ಲು ಅರ್ಜುನ್ ಅಭಿನಯದ ಹೊಸ ಸಿನಿಮಾ ಕೂಡ ಅನೌನ್ಸ್ ಆಗಿದ್ದು , ಈ ಸಿನಿಮಾದಲ್ಲಿ ಅಲ್ಲುಗೆ ನಾಯಕಿ ಆಗೋದ್ಯಾರು ಅನ್ನೋ ಕುತೂಹಲ ಮೂಡಿದೆ..
ಪುಷ್ಪ ಸಿನಿಮಾದಲ್ಲಿ ಬ್ಯುಸಿಯಾಗಿರುವ ಅಲ್ಲು ಅರ್ಜುನ್ ಬಳಿಕ ವೇಣು ಶ್ರೀ ರಾಮ್ ಆ್ಯಕ್ಷನ್ ಕಟ್ ಹೇಳುತ್ತಿರುವ ‘ಐಕಾನ್’ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ವಿಶೇಷವೆಂದರೆ ಈ ಸಿನಿಮಾದಲ್ಲಿ ಇಬ್ಬರು ಕನ್ನಡ ನಟಿಯರ ಹೆಸರುಗಳು ಕೇಳಿಬರುತ್ತಿದೆ.. ಹಾಗಂತ ಇವರಿಬ್ಬರಲ್ಲಿ ಒಬ್ಬರನ್ನ ಮಾತ್ರ ನಾಯಕಿಯಾಗಿ ತೆಗೆದುಕೊಳ್ತಿಲ್ಲ.. ಬದಲಾಗಿ ಈ ಸಿನಿಮಾದಲ್ಲಿ ಅಲ್ಲುಗೆ ಇಬ್ಬರು ನಾಯಕಿಯರು ಇರಲಿದ್ದು, ಇಬ್ಬರೂ ಕನ್ನಡತಿಯರೇ.. ರಷ್ಮಿಕಾ ಮತ್ತೆ ಪೂಜಾ ಈ ಸಿನಿಮಾದ ಇಬ್ಬರು ನಾಯಕಿಯರು ಎನ್ನಲಾಗ್ತಿದೆ..
ಈಗಾಗಲೇ ಡಿಜೆ ಹಾಗೂ ಅಲಾ ವೈಕುಂಠಪುರಮುಲೋ ಸಿನಿಮಾದಲ್ಲಿ ಅಲ್ಲುಗೆ ಜೋಡಿಯಾಗಿ ಪೂಜಾ ಹೆಗ್ಡೆ ಮಿಂಚಿದ್ದರು. ಈ ಎರಡು ಸಿನಿಮಾಗಳು ಟಾಲಿವುಡ್ ಬಾಕ್ಸ್ ಆಫಿಸ್‍ನಲ್ಲಿ ಜೋರಾಗಿಯೇ ಸದ್ದು ಮಾಡಿತ್ತು. ಸದ್ಯ ರಶ್ಮಿಕಾ ಮಂದಣ್ಣ ಪುಷ್ಪ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಅಲ್ಲು ಅರ್ಜುನ್‍ಗೆ ನಾಯಕಿಯಾಗಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದು, ಈ ಸಿನಿಮಾ ಕೂಡ ಕೆಜಿಎಫ್ ಹಾದಿಯನ್ನೇ ಅನುಸರಿಸಿದ್ದು, ಪಾರ್ಟ್ 2 ತರಲು ಸಿನಿಮಾತಂಡ ಪ್ಲಾನ್ ಮಾಡಿಕೊಂಡಿದೆ..
ಈ ಮಧ್ಯೆ ಐಕಾನ್ ಸಿನಿಮಾಕ್ಕಾಗಿ ಪೂಜಾ ಹೆಗ್ಡೆ ಹಾಗೂ ರಶ್ಮಿಕಾ ಮಂದಣ್ಣರಿಗೆ ಚಿತ್ರತಂಡ ಕಾಲ್ ಶೀಟ್ ಕೇಳಿದ್ದು, ಒಂದೇ ಸಿನಿಮಾದಲ್ಲಿ ಈ ಇಬ್ಬರು ನಟಿಯರು ಅಲ್ಲು ಅರ್ಜುನ್ ಜೊತೆಗೆ ಅಭಿನಯಿಸುತ್ತಾರಾ.. ಒಂದು ವೇಳೆ ಈ ಸುದ್ದಿ ನಿಜ ಆದ್ರೆ , ಇಬ್ಬರು ನಟಿಯರು ಒಪ್ಪಿದ್ದೇ ಆದ್ರೆ ಸಿನಿಮಾ ಮೇಲಿನ ಕ್ರೇಜ್ ದುಪ್ಪಟ್ಟಾಗಲಿದೆ..
ಇನ್ನೂ ಇತ್ತೀಚೆಗೆ ತಮಿಳಿನಲ್ಲಿ ದಳಪತಿ ವಿಜಯ್ ನಟನೆಯ 65ನೇ ಸಿನಿಮಾ ಬೀಸ್ಟ್ ನಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗ್ತಾರೆ ಅಂತ ಸಾಕಷ್ಟು ಚರ್ಚೆಗಳು ನಡೆದಿದ್ದವು.. ಆದ್ರೆ ರಶ್ಮಿಕಾ ಬದಲಾಗಿ ಪೂಜಾ ಹೆಗ್ಡೆಗೆ ಸಿನಿಮಾ ತಂಡ ಮಣೆ ಹಾಕಿತ್ತು.. ಹೋದ್ರೆ ಹೋಗ್ಲಿ 2ನೇ ನಾಯಕಿಯಾಗುವ ಅವಕಾಶವಾದ್ರೂ ಒಲಿಯುತ್ತಾ ಅನ್ನೋ ನಿರೀಕ್ಷೆಯಲ್ಲಿದ್ದ ರಶ್ಮಿಕಾ ಫ್ಯಾನ್ಸ್ ಗೆ ಆಗಲೂ ನಿರಾಸೆ ಉಂಟಾಗಿತ್ತು.. 2ನೇ ನಾಯಕಿಯಾಗಿ ಮಳಯಾಳಂನ ಟಿಕ್ ಟಾಕ್ ಸ್ಟಾರ್ ಅನ್ನ ಸಿನಿಮಾತಂಡ ಅಧಿಕೃತವಾಗಿ ಘೋಷಣೆ ಮಾಡಿತ್ತು..








