9 ನೇ ದಿನದ ಪುಷ್ಪಾ ಬಾಕ್ಸ್ ಆಫೀಸ್ ಕಲೆಕ್ಷನ್ : “ಪುಷ್ಪ ರಾಜ್” ಮುಂದೆ ನಡೆಯುತ್ತಿಲ್ಲಾ ರಣವೀರ್ ‘83’ ಹವಾ..!
ಸುಕುಮಾರ್ ನಿರ್ದೇಶನದ , ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ: ದಿ ರೈಸ್ ಪ್ಯಾನ್ ಇಂಡಿಯಾ ಸಿನಿಮಾ ಡಿಸೆಂಬರ್ 17 ರಂದು ಥಿಯೇಟರ್ ಗಳಲ್ಲಿ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣ್ತಿದೆ.. ಈ ಚಿತ್ರವು ವಿಶ್ವಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ..
ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ದಾಖಲೆ ಮಾಡಿರುವ ಪುಷ್ಪ ಹವಾ ಡಿಸೆಂಬರ್ 24 ರಿಂದ ಕಡಿಮೆಯಾಗಲಿದೆ ಅಂತಲೇ ಹೇಳಲಾಗಿತ್ತು…. ಯಾಕೆಂದ್ರೆ ಡಿಸೆಂಬರ್ 24 ಕ್ಕೆ ರಣವೀರ್ ಸಿಂಗ್ ನಟನೆಯ ‘ 83’ ಸಿನಿಮಾ 5 ಭಾಷೆಗಳಲ್ಲಿ ಥಿಯೇಟರ್ ಗಳಲ್ಲಿ ರಿಲೀಸ್ ಆ ಗಿದೆ.. ಸಿನಿಮಾ ಯಶಸ್ವಿಯಾಗಿ ಓಡ್ತಿದ್ರೂ ಕೂಡ ನಿರೀಕ್ಷೆ ಮಟ್ಟದಲ್ಲಿ ಕಲೆಕ್ಷನ್ ಮಾಡುವಲ್ಲಿ ವಿಫಲವಾಗಿದೆ.. ಜೊತೆಗೆ ಪುಷ್ಪಗೆ ಟಕ್ಕರ್ ಕೊಡುವಲ್ಲಿ ವಿಫಲವಾಗಿದೆ.. ಇದಕ್ಕೆ ಪ್ರಮುಖ ಕಾರಣ ಸೌತ್ ಸಿನಿಮಾದ ಪವರ್ ಒಂದ್ ಕಡೆ ಆದ್ರೆ ಸೋಷಿಯಲ್ ಮೀಡಿಯದಲ್ಲಿ ಸುಶಾಂತ್ ಅಭಿಮಾನಿಗಳು ಮಾಡಿದ್ದ #Boycott 83 ಅಭಿಯಾನ.. ಸುಶಾಂತ್ ಅಭಿಮಾನಿಗಳು 83 ವಿರುದ್ಧ ಸೇಡು ತೀರಿಸಿಕೊಳ್ಳಲು ಬಾಯ್ಕಾಟ್ ಹೇಳಿದ್ದರು. ಅಷ್ಟೇ ಅಲ್ಲ ಈ ಸಿನಿಮಾ ಸೋಲುತ್ತೆ ಅಂತ ಭವಿಷ್ಯವನ್ನೂ ನುಡಿದಿದ್ದರು..
ಈ ಸಿನಿಮಾ ಭಾರತದ ಕ್ರಿಕೆಟ್ ದಂಥಕಥೆ ಕಪಿಲ್ ದೇವ್ ಅವರ ಜೀವನಾಧಾರಿತ ಕಥೆ ಹೊಂದಿದ್ದು , ಐತಿಹಾಸ ವಿಶ್ವಕಪ್ ಕಪ್ ಗೆದ್ದ ಕಥೆಯನ್ನ ಸಿನಿಮಾರೂಪದಲ್ಲಿ ಅದ್ರಲ್ಲೂ 3Dಯಲ್ಲಿ ಬಂದಿದೆ.. ಹೀಗಾಗಿ ಭಾರತದಾದ್ಯಂತ 83 ಹವಾ ಶುರುವಾಗುತ್ತೆ.. ಆಗ ಪುಷ್ಪಾ ಸಿನಿಮಾಗೆ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಕಾಂಪಿಟೇಷನ್ ಏರ್ಪಡಲಿದೆ ಎನ್ನಲಾಗಿತ್ತು. ಆದ್ರೆ ಪುಷ್ಪ ಬಾಕ್ಸ್ ಆಫೀಸ್ ನಲ್ಲಿ ಲೂಟಿ ಮುಂದುವರೆಸಿದೆ.. 83 ಸಿನಿಮಾವನ್ನ ಹಿಂದಿಟ್ಟಿದೆ.
ಮೂಲಗಳ ಪ್ರಕಾರ ಪುಷ್ಪ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂಪಾಯಿಗಳ ಕಲೆಕ್ಷನ್ ಮಾಡಿಡೆ..
ಶುಕ್ರವಾರ – ರೂ. 47 ಕೋಟಿ ರೂ.
ಶನಿವಾರ – ರೂ. 34 ಕೋಟಿ ರೂ.
ಭಾನುವಾರ – ರೂ. 39.25 ಕೋಟಿ ರೂ.
ಸೋಮವಾರ – ರೂ. 20.50 ಕೋಟಿ ರೂ.
ಮಂಗಳವಾರ – ರೂ. 15 ಕೋಟಿ ರೂ.
ಬುಧವಾರ – ರೂ. 12 ಕೋಟಿ ರೂ.
ಗುರುವಾರ – ರೂ. 11 ಕೋಟಿ ರೂ.
ಒಂದು ವಾರ – ರೂ. 178.75 ಕೋಟಿ ರೂ.
2 ನೇ ಶುಕ್ರವಾರ – ರೂ. 8.75 ಕೋಟಿ ರೂ.
2 ನೇ ಶನಿವಾರ – ರೂ. 13.25 ಕೋಟಿ ರೂ.
ಒಟ್ಟು – ರೂ. 200.75 ಕೋಟಿ ರೂ.
ಪುಷ್ಪಾ ಆಂಧ್ರಪ್ರದೇಶದ ಶೇಷಾಚಲಂ ಪ್ರದೇಶದಲ್ಲಿನ ರಕ್ತ ಚಂದನದ ಕಳ್ಳ ಸಾಗಾಣಿಕೆದಾರರ ಕಥೆಯನ್ನ ಆಧರಿಸಿದೆ. ಸಿನಿಮಾದಲ್ಲಿ ಅಲ್ಲು ಅರ್ಜುನ್, ಡಾಲಿ ಧನಂಜಯ್ ಸೇರಿದಂತೆ ಅನೇಕರ ತಾರಾಬಳಗವಿದೆ…
ಸಿನಿಮಾ , ರಾಜ್ಯ , ದೇಶ , ವಿದೇಶ, ಕ್ರೀಡೆ ಇತ್ತೀಚೆಗಿನ ಸುದ್ದಿಗಳ ಅಪ್ ಡೇಟ್ಸ್ ಗಾಗಿ ಸಾಕ್ಷಾ ಟಿವಿ ಫಾಲೋ ಮಾಡಿ









