ಮಾಜಿ ಪ್ರಧಾನಿ ಮನಮೋಹನ ಸಿಂಗ್ (Manmohan Singh) ಸತತ 10 ವರ್ಷಗಳ ಪ್ರಧಾನಿಯಾಗಿ ದೇಶದ ಸೇವೆ ಮಾಡಿದವರು. ಅವರ ಅವಧಿಯಲ್ಲಿ ಭಾರತ ಸಾಕಷ್ಟು ಆರ್ಥಿಕ ಮುನ್ನಡೆ ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಇಡೀ ಭಾರತ ಸ್ಮರಿಸುತ್ತಿದೆ. ಅಷ್ಟೇ ಅಲ್ಲ, ಅಮೆರಿಕದ (America) ಮಾಜಿ ಅಧ್ಯಕ್ಷ ಬರಾಕ್ ಒಬಾಮಾ (Barack Obama ) ಕೂಡ ಅವರನ್ನು ಹಾಡಿ ಹೊಗಳಿದ್ದರು.
ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ಒಬಾಮಾ ಅಮೆರಿಕದ ಅಧ್ಯಕ್ಷರಾಗಿದ್ದರು. ಆಗ 2008ರಲ್ಲಿ, ಅಮೆರಿಕದಲ್ಲಿ ಮಹಾನ್ ಆರ್ಥಿಕ ಕುಸಿತ ಸಂಭವಿಸಿತ್ತು. ಅಪರ ಪರಿಣಾಮ ಭಾರತದ ಮೇಲೆಯೂ ಬೀರಿತ್ತು. ಆದರೆ ಭಾರತಕ್ಕೆ ಹೆಚ್ಚು ನಷ್ಟವಾಗದಂತೆ ಮನಮೋಹನ್ ಸಿಂಗ್ ತೆಗೆದುಕೊಂಡ ಕ್ರಮ ಒಬಾಮಾ ಅವರಿಗೆ ಆಶ್ಚರ್ಯ ಉಂಟು ಮಾಡಿತ್ತು.
ಒಬಾಮಾ ಜೊತೆಗೆ ಐತಿಹಾಸಿಕ ಭಾರತ-ಅಮೆರಿಕ ಅಣು ಒಪ್ಪಂದ ಮಾಡಿಕೊಳ್ಳುವಲ್ಲಿ ಮನಮೋಹನ ಸಿಂಗ್ ಯಶಸ್ವಿಯಾಗಿದ್ದರು. ಈ ಒಪ್ಪಂದವು 2008 ರಲ್ಲಿ ಜಾರಿಯಾಗಿತ್ತು. ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಕೆಲವರ ಆರಂಭಿಕ ಅಸಮ್ಮತಿಯ ನಡುವೆ ಮನಮೋಹನ್ ಸಿಂಗ್ ಇದನ್ನು ಸಮರ್ಥವಾಗಿ ನಿಭಾಯಿಸಿದ್ದರು.
ಸಿಂಗ್ ಅವರನ್ನು ಜಗತ್ತಿನ ಶ್ರೇಷ್ಠ ಆರ್ಥಿಕ ತಜ್ಞರಲ್ಲಿ ಒಬ್ಬರು ಎಂದು ಒಬಾಮಾ ಯಾವಾಗಲೂ ಗೌರವಿಸುತ್ತಿದ್ದರು. ಸಮಾರಂಭದಲ್ಲಿ ಮಾತನಾಡುವಾಗ ಒಬಾಮಾ, ‘ನಾನು ಸಿಂಗ್ ಅವರ ದೊಡ್ಡ ಅಭಿಮಾನಿ. ಅವರು ಭಾರತದ ಆರ್ಥಿಕತೆಗೆ ಅಡಿಪಾಯ ಹಾಕಿದವರು’ ಎಂದು ಹೇಳಿದ್ದರು








