ಪೊನ್ನಿಯನ್ ಸಿನಿಮಾಗೆ ಮೊದಲು ನನಗೆ ಅವಕಾಶ ಬಂದಿತ್ತು – ನಟಿ ಅಮಲಾ ಪೌಲ್
ಒಂದೆಡೆ ಸ್ಟಾರ್ ಹೀರೋಗಳ ಜೊತೆ ಕಮರ್ಷಿಯಲ್ ಸಿನಿಮಾ ಮಾಡುತ್ತಾ ಮತ್ತೊಂದೆಡೆ ಲೇಡಿ ಓರಿಯೆಂಟೆಡ್ ಚಿತ್ರಗಳನ್ನ ಮಾಡುತ್ತಾ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಜನಪ್ರಿಯತೆಯನ್ನ ಗಳಿಸಿಕೊಂಡಿರುವ ನಟಿ ಅಮಲಾ ಪೌಲ್. ಇವರ ಇತ್ತೀಚಿನ ಕ್ರೈಮ್ ಥ್ರಿಲ್ಲರ್ ಚಿತ್ರ “ಕಡವರ” OTT ಪ್ಲಾಟ್ ಪ್ಲಾರ್ಮ್ ನಲ್ಲಿ ಬಿಡುಗೆಯಾಗಿ ಟಾಕ್ ಪಡೆದುಕೊಂಡಿದೆ.
ಈ ವೇಳೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಪ್ಯಾನ್ ಇಂಡಿಯಾ ಸಿನಿಮಾ ‘ಪೊನ್ನಿಯಿನ್ ಸೆಲ್ವನ್’ ನಲ್ಲಿ ಮೊದಲು ಅವಕಾಶ ತನಗೆ ಬಂದಿತ್ತು ಎಂದು ಹೇಳಿದ್ದಾರೆ.
“ಪೊನ್ನಿನ್ ಸೆಲ್ವನ್ ಗಾಗಿ ಮಣಿರತ್ನಂ ಸರ್ ಹಿಂದೊಮ್ಮೆ ಆಡಿಷನ್ ಮಾಡಿದ್ರು. ಆಗ ನಾನು ಕೂಡ ಆ ಚಿತ್ರ ಮಾಡಲು ತುಂಬಾ ಉತ್ಸುಕನಾಗಿದ್ದೆ. ನಾನು ಮಣಿ ಸರ್ ಅವರ ದೊಡ್ಡ ಅಭಿಮಾನಿ. ಹಾಗಾಗಿ ಅವರ ಜೊತೆ ಕೆಲಸ ಮಾಡುವ ದಿನವನ್ನು ಎದುರು ನೋಡುತ್ತಿದ್ದೆ. ಆದರೆ.. ಏನಾಯಿತು, ಆ ಸಮಯದಲ್ಲಿ ಚಿತ್ರ ಸೆಟ್ಟೇರಲಿಲ್ಲ. ಅದರಿಂದ ನನಗೆ ತುಂಬಾ ನಿರಾಸೆಯಾಯಿತು”
ನಂತರ ಅವರು 2021 ರಲ್ಲಿ ಅದೇ ಪ್ರಾಜೆಕ್ಟ್ ಗಾಗಿ ನನ್ನನ್ನು ಕರೆದರು. ಆದರೆ ಆಗ ನನ್ನ ಮೂಡ್ ಚೆನ್ನಾಗಿರಲಿಲ್ಲ. ಹಾಗಾಗಿ ಆ ಪಾತ್ರವನ್ನು ಮಾಡಬಲ್ಲೆ ಎಂಬ ವಿಶ್ವಾಸ ನನಗಿರಲಿಲ್ಲ. ಅದಕ್ಕಾಗಿಯೇ ನಾನು ಆ ಪ್ರಸ್ತಾಪವನ್ನು ತಿರಸ್ಕರಿಸಿದೆ. ಇದರ ಬಗ್ಗೆ ನಿಮಗೆ ಚಿಂತೆ ಇದೆಯೇ ಎಂದು ನೀವು ನನ್ನನ್ನು ಕೇಳಿದರೆ, ನಾನು ಇಲ್ಲ ಎಂದು ಹೇಳುತ್ತೇನೆ. ಏಕೆಂದರೆ ಕೆಲವು ವಿಷಯಗಳು ಹಾಗೆಯೇ ನಡೆಯಬೇಕು ಅದು ಆಗೇ ಜರುಗಿತು. ನನ್ನ ಅಭಿಪ್ರಾಯದಲ್ಲಿ ಇದು ನಾವು ನೊಡುವ ರೀತಿಯನ್ನ ಅವಲಂಬಿಸಿರುತ್ತದೆ ಎಂದು ಹೇಳಿದ್ದಾರೆ ನಟಿ ಅಮಲಾ ಪೌಲ್








