ಬಿಜೆಪಿ ಸೇರಲ್ಲ.. ಕಾಂಗ್ರೆಸ್ ನಲ್ಲಿ ಇರಲ್ಲ.. ಸ್ವಂತ ಪಕ್ಷ ಕಟ್ತಾರಾ ಅಮರೀಂದರ್..?
ನವದೆಹಲಿ : ಬಿಜೆಪಿ ಸೇರಲ್ಲ.. ಕಾಂಗ್ರೆಸ್ ನಲ್ಲಿ ಇರಲ್ಲ.. ಸ್ವಂತ ಪಕ್ಷ ಕಟ್ತಾರಾ ಅಮರೀಂದರ್..? ಹೌದು..! ಸದ್ಯ ರಾಜಕೀಯ ಚಿಂತಕರಲ್ಲಿ ಮೂಡಿರುವ ಪ್ರಶ್ನೆ ಇದು.
ಕಾರಣ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಈಗಾಗಲೇ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.
ಪಕ್ಷದಲ್ಲಿನ ಒಳ ಜಗಳದಿಂದಾಗಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮಧ್ಯೆ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಮಾತು ಕೂಡ ಹರಿದಾಡುತ್ತಿತ್ತು.
ಇದಕ್ಕೆ ಪುಷ್ಠಿ ನೀಡುವಂತೆ ಅಮರೀಂದರ್ ಅವರು ಬುಧವಾರ ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಹೀಗಾಗಿ ಅಮರಿಂದರ್ ಸಿಂಗ್ ಬಿಜೆಪಿ ಸೇರೋದು ಪಕ್ಕಾ ಎಂದು ಹೇಳಲಾಗುತ್ತಿತ್ತು.
ಆದ್ರೆ ಈ ವಿಚಾರವಾಗಿ ಸುದ್ದಿವಾಹಿನಿ ಜೊತೆ ಮಾತನಾಡಿರುವ ಅಮರಿಂದರ್ ಸಿಂಗ್, “ನಾನು ಬಿಜೆಪಿಗೆ ಹೋಗುವುದಿಲ್ಲ ಹಾಗಂತ ಕಾಂಗ್ರೆಸ್ನಲ್ಲಿ ಇರುವುದಿಲ್ಲ. ಸದ್ಯ ನಾನು ಈ ಪಕ್ಷದಲ್ಲಿ ಇದೀನಿ, ಆದರೆ, ಇದರಲ್ಲಿಯೇ ಮುಂದುವರೆಯುವುದಿಲ್ಲ” ಎಂದಿದ್ದಾರೆ.
ಅಮರೀಂದರ್ ಸಿಂಗ್ ಅವರ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹಾಗೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಸ್ವಂತ ಪಕ್ಷ ಕಟ್ಟುತ್ತಾರಾ ಎಂಬ ಪ್ರಶ್ನೆ ಉದ್ಭವವಾಗಿದೆ.