Amarnath Yatra | 8 ಮಂದಿ ಅಮರನಾಥ ಯಾತ್ರಾರ್ಥಿಗಳು ಸಾವು
ಶ್ರೀನಗರ : ಕಳೆ ವಾರ ಸಂಭವಿಸಿದ ಮೇಘಸ್ಫೋಟದಿಂದ ಪ್ರವಾಹ ಉಂಟಾಗಿ 15 ಅಮರನಾಥ ಯಾತ್ರಾರ್ಥಿಗಳು ಮೃತಪಟ್ಟಿದ್ದರು.
ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಆಘಾತಕಾರಿ ಸುದ್ದಿವೊಂದು ಹೊರಬಿದ್ದಿದೆ.
ಅದು ಏನಂದರೇ ನೈಸರ್ಗಿಕ ವಿಕೋಪದಿಂದಾಗಿ ಕಳೆದ 36 ಗಂಟೆಗಳಲ್ಲಿ ಅಮರನಾಥ ಯಾತ್ರೆಯಲ್ಲಿ ಎಂಟು ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಗಳು ತಿಳಿಸಿದ್ದಾರೆ.
ಅಲ್ಲದೇ ಇದರೊಂದಿಗೆ ಯಾತ್ರಾರ್ಥಿಗಳ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.
ಮೃತರನ್ನು ರಾಜಸ್ಥಾನದ ಮೊಂಗಿಲಾಲ್(52), ಗುಜರಾತ್ನ ವ್ರಿಯಾಗ್ ಲಾಲ್ ಹೀರಾ ಚಂದ್ ವ್ಯಾಸ್(57), ಕರ್ನಾಟಕದ ಬಸವರಾಜ(68), ಸಿಂಗಾಪುರದ ಪೂನಿಯಾಮೂರ್ತಿ(63), ಮಹಾರಾಷ್ಟ್ರದ ಕಿರಣ್ ಚತುರ್ವೇದಿ, ಕಲವಲ ಸುಬ್ರಮಣ್ಯಂ(63), ಉತ್ತರ ಪ್ರದೇಶದ ಗೋವಿಂದ್ ಶರಣ್(34) ಮತ್ತು ಹರಿಯಾಣದ ಸತ್ವೀರ್ ಸಿಂಗ್(70) ಎಂದು ಗುರುತಿಸಲಾಗಿದೆ.
ಕಳೆದ ವಾರ ಮೇಘಸ್ಫೋಟ ಉಂಟಾದ ಹಠಾತ್ ಪ್ರವಾಹದಲ್ಲಿ 15 ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು.
ಎರಡು ವರ್ಷಗಳ ಬಳಿಕ ಜೂನ್ 3ರಿಂದ ಅಮರನಾಥ ಯಾತ್ರೆ ಆರಂಭವಾಗಿದೆ.
ಜುಲೈ ಎಂಟರಂದು ಸಂಭವಿಸಿದ ಪ್ರವಾಹದಿಂದ ಯಾತ್ರೆ ಸ್ಥಗಿತಗೊಳಿಸಲಾಗಿತ್ತು.
ಇದಾದ ನಂತರ ಮೂರು ದಿನಗಳ ಬಳಿಕ ಯಾತ್ರೆ ಆರಂಭವಾಗಿತ್ತು.