ಅಮೆಜಾನ್ ಉದ್ಯೋಗಿಗಳು ಮಾಸ್ಕ್ ಧರಿಸುವ ಅವಶ್ಯವಿಲ್ಲ, ಆದರೆ…
ವಿಶ್ವದ ಪ್ರಮುಖ ಇ-ಕಾಮರ್ಸ್ ಕಂಪನಿ Amazon ತನ್ನ ಉದ್ಯೋಗಿಗಳಿಗೆ ಬಿಗ್ ರಿಲೀಫ್ ಕೊಟ್ಟಿದೆ. ಕೋವಿಡ್ ಸಂಪೂರ್ಣ ಎರಡೂ ಲಸಿಕೆಗಳನ್ನು ಪಡೆದಿರುವ ಉದ್ಯೋಗಿಗಳು ಶುಕ್ರವಾರದಿಂದ ಮಾಸ್ಕ್ ಇಲ್ಲದೆ ಕೆಲಸಕ್ಕೆ ಹಾಜರಾಗಲು ಕಂಪನಿ ಅವಕಾಶ ನೀಡಿದೆ. ಆದರೆ ಇದು ಭಾರತದಲ್ಲಿ ಅಲ್ಲ ಅಮೆರಿಕಾದಲ್ಲಿ.
ಉದ್ಯೋಗಿಗಳು ಕೋವಿಡ್-19 ರಜೆಯ ಪಾವತಿಯನ್ನ ಬಯಸಿದರೆ, ಮಾರ್ಚ್ 18 ರೊಳಗೆ ಸಂಪೂರ್ಣ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂದು ಅಮೆಜಾನ್ ಗುರುವಾರ ಹೊರಡಿಸಿದ ನಿರ್ದೇಶನದಲ್ಲಿ ತಿಳಿಸಿದೆ.
ಅಮೆರಿಕಾದ ತನ್ನ ಗೋದಾಮು ಮತ್ತು ಸಾರಿಗೆ ಕೆಲಸಗಳಲ್ಲಿ ತೊಡಗಿರುವ ಉದ್ಯೋಗಿಗಳಿಗೆ Amazon ಈ ಸೂಚನೆಯನ್ನು ನೀಡಿದೆ. ಯುಎಸ್‌ನಾದ್ಯಂತ ಕಡಿಮೆಯಾಗುತ್ತಿರುವ ಕರೋನಾ ಪ್ರಕರಣಗಳು, ಹೆಚ್ಚುತ್ತಿರುವ ವ್ಯಾಕ್ಸಿನೇಷನ್, ವೈದ್ಯಕೀಯ ತಜ್ಞರ ಸಮಾಲೋಚನೆ ಮತ್ತು ಸರ್ಕಾರಿ ಆರೋಗ್ಯ ಅಧಿಕಾರಿಗಳ ಅಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಕರೋನಾ ಅವಧಿಯುದ್ದಕ್ಕೂ ಅಮೆಜಾನ್ ತನ್ನ ಕೋವಿಡ್ ಸುರಕ್ಷತಾ ಪ್ರೋಟೋಕಾಲ್ ಗಳನ್ನ ಗಮನವಿಟ್ಟು ಪರಿಗಣಿಸಲ್ಪಟ್ಟಿಲ್ಲ ಎಂದು ಉದ್ಯೋಗಿಗಳು ಟೀಕಿಸಿದ್ದಾರೆ. ಕಂಪನಿಯು ತಮ್ಮ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಕೆಲವು ಉದ್ಯೋಗಿಗಳು ಆರೋಪಿಸಿದ್ದಾರೆ. ಅಮೆಜಾನ್ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಎರಡನೇ ಅತಿ ದೊಡ್ಡ ಖಾಸಗಿ ಉದ್ಯೋಗದಾತನಾಗಿದೆ. ವಾಲ್‌ಮಾರ್ಟ್ ಮೊದಲ ಸ್ಥಾನದಲ್ಲಿದೆ.








