ಅಮೇಜಾನ್ ನಲ್ಲಿ ಬರ್ತಿದ್ದಾನೆ ‘ಪುಷ್ಪರಾಜ್’..! ಯಾವಾಗ ಗೊತ್ತಾ..?
ಡಿಸೆಂಬರ್ 24 ರಂದು ವಿಶ್ವಾದ್ಯಂತ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿಧೂಳೆಬ್ಬಿಸುತ್ತಾ ಅನೇಕ ಬಿಗ್ ಬಜೆಟ್ ಸಿನಿಮಾಗಳ ಬಾಕ್ಸ್ ಆಫೀಸ್ ಕಲೆಕ್ಷನ್ ರೆಕಾರ್ಡ್ ಮುರಿದಿರುವ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ OTT ಗೆ ಶೀಘ್ರವೇ ಬರಲಿದೆ..
ಹೌದು ಪುಷ್ಪರಾಜ್ ಆಗಿ ಅಅಲ್ಲು ಡಿಫರೆಂಟ್ ಹಾಗೂ ಡಿ ಗ್ಲಾಮ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಸಿನಿಮಾ ಸೂಪರ್ ಹಿಟ್ ಆಗಿದೆ.. ಇನ್ನೂವರೆಗೂ ಸಕ್ಸಸ್ ಫುಲ್ ಪ್ರದರ್ಶನ ಕಾಣ್ತಿದೆ.,. ಈ ‘ಪುಷ್ಪರಾಜ್’ ಅಮೇಜಾನ್ ಪ್ರೈಮ್ ಗೆ ಎಂಟ್ರಿಕೊಡೋಕೆ ಸಜ್ಜಾಗಿದ್ದು , ಅಮೇಜಾನ್ ಅಧಿಕೃತವಾಗಿ ಈ ವಿಚಾರವನ್ನ ಬಹಿರಂಗಪಡಿಸಿದೆ..
ಜನವರಿ 7 ಬುಧವಾರ ಅಮೇಜಾನ್ ಪ್ರೈಮ್ ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.. ತೆಲುಗು , ಕನ್ನಡ , ತಮಿಳು , ಮಲಯಾಳಂ , ಹಿಂದಿಯಲ್ಲಿ ರಿಲೀಸ್ ಆಗಿರುವ ಪ್ಯಾನ್ ಇಂಡಿಯಾ ಸಿನಿಮಾ ಒಟ್ಟಾರೆಯಾಗಿ ಬಾಕ್ಸ್ ಆಫೀಸ್ ನಲ್ಲಿ 306 ಕೋಟಿಗಿಂತಲೂ ಅಧಿಕ ಕಲೆಕ್ಷನ್ ಮಾಡಿದೆ.. ಸುಕುಮಾರ್ ನಿರ್ದೇಶನದ ಈ ಸಿನಿಮಾ ಇತರೇ ಭಾಷೆಗಳಿಗಿಂತಲೂ ಹಿಂದಿ ಡಬ್ಬಿಂಗ್ ವರ್ಷನ್ ಗೆ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ.. ಮೈತ್ರಿ ಮೂವೀಸ್ ನಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು , ರಶ್ಮಿಕಾ ಮಂದಣ್ಣ , ಡಾಲಿ ಧನಂಜಯ್ ಸೇರಿದಂತೆ ಸಿನಿಮಾದಲ್ಲಿ ದೊಡ್ಡ ಸ್ಟಾರ್ ಗಳ ತಾರಾಬಳಗವಿದೆ.. ಈ ಸಿನಿಮಾದಲ್ಲಿ ಸಮಂತಾ ಸಖತ್ ಗ್ಲಾಮ್ ಆಗಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದು , ಈ ಸಿನಿಮಾದ ಹೈಲೇಟ್ ಆಗಿದೆ..
ಮದುವೆಗೂ 4 ವರ್ಷ ಮುನ್ನವೇ ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ದೀಪಿಕಾ – ರಣವೀರ್








