Facebook : ಶ್ರೀಮಂತರ ಪಟ್ಟಿಯಲ್ಲಿ ಫೇಸ್ ಬುಕ್ ಒಡೆಯನನ್ನೇ ಹಿಂದಿಟ್ಟ ಭಾರತೀಯರು….
ನ್ಯೂಯಾರ್ಕ್ : ವಿಶ್ವದ ಜನಪ್ರಿಯ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಗೆ ಈಗ ಮುಂಚಿನಷ್ಟು ಜನಪ್ರಿಯತೆ ಇಲ್ಲ… ಈಗ ಜನರು ಅದರದ್ದೇ ಸಬ್ ಸೋಷಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ ಆಗಿರುವ ಇನ್ಸ್ಟಾದಲ್ಲಿ ಹೆಚ್ಚು ಆಕ್ಟೀವ್ ಆಗಿದ್ದಾರೆ.. ಜೊತೆಗೆ ಟ್ವಿಟ್ಟರ್ ನತ್ತ ಹೆಚ್ಚು ಒಲವು ತೋರುತ್ತಿದ್ದಾರೆ.. ಇದರಿಂದಾಗಿ ಫೇಸ್ ಬುಕ್ ಸಕ್ರಿಯ ಬಳಕೆದಾರರ ಸಂಖ್ಯೆ ತಗ್ಗಿದೆ…
ಇದು ಮೆಟಾ ಸ್ಟಾಕ್ ಮೇಲೆ ಆಘಾತಕಾರಿಯಾದ ಪರಿಣಾಮ ಬೀರಿದೆ… ಇದೆಲ್ಲಾ ಬೆಳವಣಿಗೆಯ ನಂತರ ಮುಖೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ಅವರು ಫೇಸ್ ಬುಕ್ ಒಡೆತನದ ಜುಕರ್ ಬರ್ಗ್ ಗಿಂತಲೂ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ.
46 ನೇ ವಸಂತಕ್ಕೆ ಕಾಲಿಟ್ಟ ಅಭಿಷೇಕ್ ಬಚ್ಚನ್ – ಈ ಕುರಿತು ವಿಶೇಷ ಮಾಹಿತಿ..
ಹೌದು… ಫೇಸ್‍ಬುಕ್ ಸಕ್ರಿಯ ಬಳಕೆದಾರರ ಸಂಖ್ಯೆ ತಗ್ಗಿದ ಹಿನ್ನೆಲೆಯಲ್ಲಿ ಅದರ ಮಾತೃಸಂಸ್ಥೆ ಮೆಟಾ ಕಂಪನಿಯ ಷೇರುಗಳು ಶೇ.26ರಷ್ಟು ಕುಸಿತ ಕಂಡಿವೆ. ಇದರ ಪರಿಣಾಮವಾಗಿ ಆ ಕಂಪನಿಯ ಒಡೆಯ ಮಾರ್ಕ್ ಜುಕರ್‌ಬರ್ಗ್ ಸಂಪತ್ತಿನ ಮೌಲ್ಯವೂ ಇಳಿಕೆಯಾಗಿದೆ.
ಈ ಮೂಲಕ ಶ್ರೀಮಂತರ ಪಟ್ಟಿಯಲ್ಲಿ ಭಾರತದ ಮುಕೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ಮಾರ್ಕ್ ಜುಕರ್‌ಬರ್ಗ್ ಅವರನ್ನ ಹಿಂದಿಕ್ಕಿದ್ದಾರೆ.. ಶ್ರೀಮಂತರ ಪಟ್ಟಿಯಿಂದ ಮಾರ್ಕ್ ಜುಕರ್‌ಬರ್ಗ್ ಅವರು 12ನೇ ಸ್ಥಾನಕ್ಕೆ ಕುಸಿದಿದ್ದಾರೆ.. ಇನ್ನೂ ಗೌತಮ್ ಅದಾನಿ 10ನೇ ಸ್ಥಾನದಲ್ಲಿದ್ದರೆ , ಮುಕೇಶ್ ಅಂಬಾನಿ 11 ನೇ ಸ್ಥಾನದಲ್ಲಿದ್ದಾರೆ..
ಅಂದ್ಹಾಗೆ ಬರೋಬ್ಬರಿ 18 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಫೇಸ್‍ಬುಕ್ ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ.
3 ತಿಂಗಳ ಅವಧಿಯಲ್ಲಿ ಬಳಕೆದಾರರ ಸಂಖ್ಯೆ 192.9 ಕೋಟಿಗೆ ಕುಸಿದಿದ್ದು, ಈ ಹಿಂದಿನ ತ್ರೈಮಾಸಿಕ ಅವಧಿಯಲ್ಲಿ 193 ಕೋಟಿಯಷ್ಟು ಬಳಕೆದಾರರಿದ್ದರು ಎಂದು ಫೇಸ್‍ಬುಕ್ ಸಂಸ್ಥೆಯ ಮಾತೃಸಂಸ್ಥೆ ಮೆಟಾ ಬಹಿರಂಗಪಡಿಸಿದೆ.
Irahim sutar | ಸುತಾರ ಅವರ ಅಗಲಿಕೆ ಸಮಾಜಕ್ಕೆ ದೊಡ್ಡ ನಷ್ಟ
ಮೇಟಾ ಹಣಕಾಸು ಅಧಿಕಾರಿ ಡೇವಿಡ್ ವೆಹ್ನಾರ್ ಪ್ರಕಾರ, ಭಾರತದಲ್ಲಿ ಡೇಟಾ ಪ್ಯಾಕೇಜ್ ಬೆಲೆಯಲ್ಲಿನ ಹೆಚ್ಚಳವಾಗಿದೆ. ಹೀಗಾಗಿ ಒಟ್ಟಾರೆಯಾಗಿ ದೇಶದಾದ್ಯಂತ ಫೇಸ್‍ಬುಕ್ ಬಳಕೆದಾರರ ಸಂಖ್ಯೆಯು ಕೂಡಾ ಕಡಿಮೆಯಾಗುತ್ತಾ ಬರುತ್ತಿದೆ. ನಾವು ಈ ಅಂಶಗಳ ಜೊತೆಗೆ ಸ್ಪರ್ಧೆಯನ್ನು ಮಾಡಬೇಕಾಗಿದೆ. ಈ ಬೆಳವಣೆಗೆ ಹೊಸ ಬಳಕೆದಾರರ ಮೇಲೆ ನೆಗಿಟಿವ್ ಪ್ರಭಾವಬೀರುತ್ತದೆ ಎಂದು ಹೇಳಿದ್ದಾರೆ.
ಜೊತೆಗೆ ಏರ್ಟೆಲ್, ರಿಲಯನ್ಸ್ ಜಿಯೋ, ವೋಡಫೋನ್ ನೆಟ್‍ವರ್ಕ್‍ಗಳು ತಮ್ಮ ಡಾಟಾ ಪ್ಲ್ಯಾನ್ ಬೆಲೆಯಲ್ಲಿ ಹೆಚ್ಚಳ ಮಾಡಿರುವುದೂ ಕೂಡ ಬಳಕೆದಾರರ ಮೇಲೆ ಡಾಟಾ ಪ್ಲ್ಯಾನ್ ಬೆಲೆ ಹೆಚ್ಚಳದ ಹೊಡೆತ ಬೀಳುತ್ತಿದೆ ಎನ್ನಲಾಗಿದೆ.