Ambari Utsava Bus : ಐಷಾರಾಮಿ ಅಂಬಾರಿ ಉತ್ಸವ ಬಸ್ ಗೆ KSRTC ಯಿಂದ ಚಾಲನೆ…
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ – ಕೆಎಸ್‌ಆರ್‌ಟಿಸಿ ಹೊಸದಾಗಿ ಐಷಾರಾಮಿ ಅಂಬಾರಿ ಉತ್ಸವ ವೋಲ್ವೋ ಬಸ್ ಸೇವೆ ಆರಂಭಿಸಿದೆ. ನಿನ್ನೆ ವಿಧಾನಸೌಧ ಮುಂಭಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೊಸ ಬಸ್ ಸೇವೆಗೆ ಚಾಲನೆಯನ್ನ ನೀಡಿದ್ದಾರೆ.
ಒಟ್ಟು 50 ವೋಲ್ವೋ ಮಲ್ಟಿ ಆಕ್ಸೆಲ್ ಬಿಎಸ್ 6 – 9600 ಸ್ಲೀಪರ್ ಬಸ್ ಗಳಲ್ಲಿ ಮೊದಲ ಹಂತವಾಗಿ 15 ವೋಲ್ವೋ ಬಸ್ ಗಳನ್ನ ಲೋಕಾರ್ಪಣೆಗೊಳಿಸಲಾಗಿದೆ. 15 ಮೀಟರ್ ಉದ್ದವಿರುವ ಈ ಬಸ್‌ನಲ್ಲಿ 40 ಆಸನಗಳಿದ್ದು, ಸ್ಕ್ಯಾಂಡಿನೇವಿಯನ್ ಸಂಪ್ರದಾಯದ ವಿನ್ಯಾಸದಲ್ಲಿ ವಾಹನವನ್ನ ರೂಪಗೊಳಿಸಲಾಗಿದೆ.
ಲೋಕಾರ್ಪಣೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, “ಹೊಸ ಸಂಚಾರದ ವಿಶೇಷ ಅಂಬಾರಿಯನ್ನು ಇಂದು ಲೋಕಾರ್ಪಣೆ ಮಾಡಲಾಗಿದೆ. ಇದರಲ್ಲಿ ಸ್ಲೀಪರ್ ವ್ಯವಸ್ಥೆ ಇದೆ. ದೂರ ಪ್ರಯಾಣಕ್ಕೆ ಅಗತ್ಯವಿರುವ ರೈಲ್ವೆ ಮಾದರಿಯಲ್ಲಿವುದಕ್ಕಿಂತ ಉತ್ತಮವಾದ ವ್ಯವಸ್ಥೆ ಕಲ್ಪಿಸಲಾಗಿದೆ. ಹಿಂದೆ ವೊಲ್ವೊ ಬಸ್ ಗಳು ಹೆಚ್ಚು ಅನುಕೂಲಕರವಾಗಿರಲಿಲ್ಲ. ಹಿಂದಿನ ಸಮಸ್ಯೆಗಳನ್ನು ಅರಿತು ಈ ಬಸ್ ಗಳಲ್ಲಿ ಮಲ್ಟಿ ಎಕ್ಸೆಲ್ ವ್ಯವಸ್ಥೆ ಕಲ್ಪಿಸಿ, ಉತ್ತಮ ವ್ಯವಸ್ಥೆ ರೂಪಿಸಲಾಗಿದೆ. ಸುಲಭವಾಗಿ, ಸುಖವಾಗಿ ರಾತ್ರಿ ಪ್ರಯಾಣ ಮಾಡಬಹುದಾಗಿದೆ ಎಂದಿದ್ದಾರೆ.
Ambari Utsava Bus : Luxury Ambari Utsava Bus Run by KSRTC…








