ಶಿವಮೊಗ್ಗ: ಅಂಬುಲೆನ್ಸ್ (Ambulence) ಡಿಕ್ಕಿಯಾದ (Accident)ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಶಿವಮೊಗ್ಗ (Shivamogga) ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟ ಬಳಿ ಈ ಘಟನೆ ನಡೆದಿದೆ. ಮೂವರು ಬೈಕ್ (Bike) ಸವಾರರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಘಟನೆ ಶನಿವಾರ ಮಧ್ಯರಾತ್ರಿ ನಡೆದಿದೆ. ಅಂಬುಲೆನ್ಸ್ ಶಿವಮೊಗ್ಗದಿಂದ ಹಾವೇರಿ ಮಾರ್ಗವಾಗಿ ತೆರಳುತ್ತಿತ್ತು. ಈ ವೇಳೆ ಬೈಕ್ ನಲ್ಲಿದ್ದವರು ಶಿಕಾರಿಪುರದಿಂದ ಸ್ವಗ್ರಾಮಕ್ಕೆ ತೆರಳುತ್ತಿರು. ಆಗ ಬೈಕ್ ಹಾಗೂ ಆಂಬುಲೆನ್ಸ್ ಮಧ್ಯೆ ಡಿಕ್ಕಿಯಾಗಿದೆ. ಈ ವೇಳೆ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಮೃತರನ್ನು ಪ್ರಸನ್ನ (25), ಕಾರ್ತಿಕ್ (27), ಅಜಯ್ (25) ಎಂದು ಗುರುತಿಸಲಾಗಿದೆ. ಮೃತರು ಹೊಸ ಜೋಗದ ನಿವಾಸಿಗಳು ಎನ್ನಲಾಗಿದೆ. ಸ್ಥಳಕ್ಕೆ ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.