ಹೈದರಾಬಾದ್ : ಆಂಧ್ರಪ್ರದೇಶದ ನಗರಿ ವಿಧಾನಸಭಾ ಕ್ಷೇತ್ರ ಎಂಎಲ್ ಎ, ನಟಿ ರೋಜಾ ಆಂಬ್ಯುಲೆನ್ಸ್ ನಲ್ಲಿ ಜಾಲಿ ರೈಡ್ ಹೊಡೆದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರೋಜಾ, ಆಂಬ್ಯುಲೆನ್ಸ್ನ ಚಾಲಕನ ಸೀಟ್ ನಲ್ಲಿ ಕುಳಿತು ಜಾಲಿಯಾಗಿ ರೌಂಡ್ ಹೊಡೆದದದ್ದು ಮಾತ್ರವಲ್ಲದೇ ತಮ್ಮ ಫೋಟೋ ಹಾಗೂ ವಿಡಿಯೋ ತೆಗೆಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಆಂಧ್ರ ನೆಲದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಗೆ ಆಹಾರವಾಗಿದ್ದಾರೆ.
ಅಂದಹಾಗೆ ಕೊರೊನಾ ಬಿಕ್ಕಟ್ಟಿನ ಹಿನ್ನೆಲೆ ಚಿತ್ತೂರಿನಲ್ಲಿ ಹೊಸ ಆಂಬ್ಯುಲೆನ್ಸ್ ರಸ್ತೆಗೆ ಬಿಡುವ ಸಂದರ್ಭದಲ್ಲಿ ರೋಜಾ ಜಾಲಿ ರೈಡ್ ಮಾಡಿದ್ದಾರೆ. ಅಗತ್ಯ ಇರುವ ಸ್ಥಳಕ್ಕೆ ತುರ್ತಾಗಿ ಕಳುಹಿಸುವ ಬದಲು ಕೆಲವು ಗಂಟೆ ಅದರಲ್ಲಿಯೇ ಕುಳಿತು ರೋಜಾ ಪೋಸ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ, ಆಂಬ್ಯುಲೆನ್ಸ್ ಎಮರ್ಜೆನ್ಸಿ ರೆಡಿಯೋ ಮೂಲಕ ಫೋನ್ ಕಾಲ್ ಎಟೆಂಡ್ ಮಾಡಿ ಕರೆ ಮಾಡಿದವರನ್ನು ಗೊಂದಲಕ್ಕೂ ಸಿಲುಕಿಸಿದ್ದಾರೆ.
ರೋಜಾ ಈ ಹಿಂದೆ ಕೂಡ ಹಲವು ಬಾರಿ ಸಾರ್ವಜನಿಕ ವಿಚಾರಗಳಿಗಾಗಿ ಪಕ್ಷದ ಹೊರಗೆ ಮತ್ತು ಒಳಗೂ ಟೀಕೆಗೊಳಗಾಗಿದ್ದಾರೆ.








