ಟ್ರಂಪ್ ನಿರ್ಗಮನಕ್ಕೂ ಮುನ್ನ ಚೀನಾಗೆ ಬಿಗ್ ಸಾಕ್ : 9 ಚೀನಾ ಕಂಪನಿಗಳ ಮೇಲೆ ನಿಷೇಧ..!
ನವದೆಹಲಿ: ಇನ್ನೇನು ಅಮೆರಿಕಾದ ಚುನಾಯಿತ ಅಧ್ಯಕ್ಷ ಜೋ ಬೈಡೆನ್ ಅವರ ಪದಗ್ರಹಣ ಸಮಾರಂಭಕ್ಕೆ ದಿನಗನಣನೆ ಆರಂಭವಾಗಿದೆ. ಇದರ ನಡುವೆಯೇ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾಗೆ ಮತ್ತೊಂದು ಆಘಾತ ನೀಡಿದ್ದಾರೆ. 9 ಚೀನಾದ ಸಂಸ್ಥೆಗಳ ಮೇಲೆ ನಿರ್ಬಂಧ ಹೇರಿ ಶಾಕ್ ನೀಡಿದ್ದಾರೆ. ಸ್ಮಾರ್ಟ್ ಫೋನ್ ದೈತ್ಯ ಕಂಪನಿ ಕ್ಸಿಯೊಮಿ ಸೇರಿದಂತೆ 9 ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸುವ ಆದೇಶ ಹೊರಡಿಸಿದ್ದಾರೆ..
ಐಸ್ ಕ್ರೀಮ್ ನಲ್ಲಿ ಕರೊನಾ ಪತ್ತೆ: ತಿಂದವರವನ್ನ ಪತ್ತೆಹಚ್ಚಲು ಪರದಾಡ್ತಿದೆ ಚೀನಾ..!
ಈ ಕಂಪನಿಗಳು ಚೀನಾದ ಮಿಲಿಟರಿ ಜೊತೆ ಸಂಪರ್ಕ ಹೊಂದಿದ್ದು, ಆ ಕಂಪನಿಗಳನ್ನು ಕಮ್ಯುನಿಸ್ಟ್ ಚೈನೀಸ್ ಮಿಲಿಟರಿ ಕಂಪನಿಗಳು ಎಂದು ಬಣ್ಣಿಸಿದೆ. ಇನ್ನೂ ಈ ಕಂಪನಿಗಳಿಗೆ ನಿಷೇಧ ಹೇರಿರುವುದರಿಂದ ಅಮೆರಿಕನ್ನರು ಈ ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಿರುವ ಕಂಪನಿಗಳಲ್ಲಿ ಹೂಡಿಕೆ ಮಾಡುವಂತಿಲ್ಲ. ಈ ವರ್ಷದ ನವೆಂಬರ್ ಹೊತ್ತಿಗೆ ಈ ನಿಷೇಧಿತ ಚೀನಾ ಕಂಪೆನಿಗಳಲ್ಲಿ ಅಮೆರಿಕದ ಹೂಡಿಕೆದಾರರು ತಮ್ಮ ಷೇರುಗಳನ್ನು ಹಿಂತೆಗೆದುಕೊಳ್ಳಬೇಕು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel