ಕೊರೊನಾ ಮೂಲ ಯಾವುದು…? ಚೀನಾ ವಿರುದ್ಧ ಅಮೆರಿಕ ಆರೋಪ..? ವಿಶ್ವದ ದೊಡ್ಡಣ್ಣನಿಗೆ ವಾರ್ನಿಂಗ್ ಕೊಟ್ಟ ಚೀನಾ…!
ಕೊರೊನಾ ಮೂಲದ ಬಗ್ಗೆ ಚೀನಾದ ವುಹಾನ್ ಲ್ಯಾಬ್ ಬಗೆಗಿನ ಗೊಂದಲಗಳು ಈ ವಿಚಾರವಾಗಿ ಇತ್ತೀಚೆಗೆ ಸಾಕಷ್ಟು ಚರ್ಚೆಯಾಗ್ತಿದ್ದು, ಅನುಮಾನಗಳು ಮೂಡುತ್ತಿವೆ.. ಅಲ್ಲದೇ ಅಮೆರಿಕಾ ಚೀನಾದ ವುಹಾನ್ ಲ್ಯಾಬ್ ನಿಂದಲೇ ವೈರಸ್ ಹರಡಿರುವುದು ಎಂಬ ಅನುಮಾನಗಳ ವ್ಯಕ್ತಪಡಿಸುತ್ತಾ ಕೆಲ ದಾಖಲೆಗಳನ್ನೂ ಬಿಡುಗಡೆ ಮಾಡುತ್ತಲೇ ಬಂದಿದೆ..
ಈ ನಡುವೆ ಕೊರೊನಾ ವೈರಸ್ ಮೂಲವನ್ನು ಪತ್ತೆ ಮಾಡುವ ವಿಚಾರವನ್ನು ಅಮೆರಿಕ ರಾಜಕೀಯಗೊಳಿಸುತ್ತಿದೆ ಎಂದು ಚೀನಾ ಟೀಕಿಸಿದೆ. ಜೊತೆಗೆ ಇತರ ವಿಷಯವಾಗಿ ತನ್ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಂತೆ ಅಮೆರಿಕಕ್ಕೆ ಎಚ್ಚರಿಕೆಯನ್ನೂ ನೀಡಿದೆ.
ಚೀನಾದ ಹಿರಿಯ ವಿದೇಶಾಂಗ ನೀತಿ ಸಲಹೆಗಾರ ಯಾಂಗ್ ಜಿಯೆಚಿ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರ ನಡುವೆ ಶುಕ್ರವಾರ ನಡೆದ ದೂರವಾಣಿ ಮಾತುಕತೆ ವೇಳೆ, ಈ ವಿಷಯವಾಗಿ ಮಾತಿನ ಚಕಮಕಿ ನಡೆದಿದೆ ಎಂದು ವರದಿಯಾಗಿದೆ.
ಹಲವಾರು ವಿವಾದಾತ್ಮಕ ವಿಷಯಗಳನ್ನು ಬ್ಲಿಂಕೆನ್ ಮಾತುಕತೆ ವೇಳೆ ಪ್ರಸ್ತಾಪಿಸಿದರು. ಪ್ರಜಾಪ್ರಭುತ್ವ ಪರ ಹೋರಾಡುವವರನ್ನು ಹಾಂಗ್‌ಕಾಂಗ್‌ನಲ್ಲಿ ದಮನಿಸಲಾಗುತ್ತಿದೆ. ಲಕ್ಷಾಂತರ ಜನ ಮುಸ್ಲಿಮರನ್ನು ಷಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಬಂಧನ ಕೇಂದ್ರಗಳಲ್ಲಿರಿಸಲಾಗಿದೆ ಎಂಬುದನ್ನು ಈ ವೇಳೆ ಪ್ರಸ್ತಾಪಿಸಲಾಯಿತು ಎಂದೂ ಮೂಲಗಳು ತಿಳಿಸಿವೆ.
ಕೊರೊನಾಗೆ ಕಾರಣವಾದ ಸಾರ್ಸ್–ಕೋವ್–2 ವೈರಸ್‌ನ ಮೂಲದ ಬಗ್ಗೆ ಸಮಗ್ರ ತನಿಖೆ ನಡೆಸಬೇಕಾಗಿದೆ. ಮೊದಲ ಬಾರಿಗೆ ವುಹಾನ್‌ನ ಪ್ರಯೋಗಾಲಯದಲ್ಲಿ ಪತ್ತೆಯಾದ ಈ ವೈರಸ್, ಅಲ್ಲಿಂದ ಸೋರಿಕೆಯಾಗಿರುವ ಸಾಧ್ಯತೆ ಇದೆ ಎಂದು ಅಮೆರಿಕಾ ವಾದಿಸುತ್ತಲೇ ಬರುತ್ತಿದೆ. ಹೀಗಾಗಿ ಅಮೆರಿಕಾ ವಿರುದ್ಧ ತಿರುಗಿ ಬಿದ್ದಿರುವ ಚೀನಾ ವುಹಾನ್ ಪ್ರಯೋಗಾಲಯದಿಂದಲೇ ವೈರಸ್ ಸೋರಿಕೆಯಾಗಿದೆ ಎಂದು ಅಮೆರಿಕದ ಕೆಲವರು ಅಸಂಬದ್ಧ ಕಥೆಗಳನ್ನು ಹೆಣೆದಿದ್ದಾರೆ ಎಂದು ಆರೋಪಿಸಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.