ಅಮೆರಿಕಾದಲ್ಲಿ ಪ್ರತಿದಿನ ಒಂದು ಲಕ್ಷ ದಾಟುತ್ತಿದೆ ಸೋಂಕಿತರ ಸಂಖ್ಯೆ..!
ಅಮೆರಿಕಾ : 2ನೇ ಅಲೆ ಇನ್ನೇನು ಕಡಿಮೆಯಾಯ್ತು ಅನ್ನೋ ಹೊತ್ತಿನಲ್ಲಿ ಕೊರೊನಾ 3ನೇ ಅಲೆ ಈಗಾಗಲೇ ಹಲವೆಡೆ ಆರಂಭವಾಗಿದೆ.. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗ್ತಲೇ ಇದೆ.. ಮಹಾಮಾರಿಯ ಕಾಟ ವಿಶ್ವದ ದೊಡ್ಡಣ್ಣ ಅಮೆರಿಕಾವನ್ನೂ ಇನ್ನಿಲ್ಲದತೆ ಕಾಡ್ತಿದೆ.. ಕಳೆದ ಒಂದು ವಾರದಿಂದ ಸರಾಸರಿ ಒಂದು ಲಕ್ಷ ಪ್ರಕರಣಗಳು ವರದಿಯಾಗುತ್ತಿವೆ. ಕಳೆದ ಏಳು ದಿನಗಳ ಸರಾಸರಿ ಪ್ರಮಾಣದಲ್ಲಿ ಸೋಂಕು ಗಗನಮುಖಿಯಾಗಿರುವುದು ಸ್ಪಷ್ಟವಾಗಿದೆ. ಅದರಲ್ಲೂ ಲಸಿಕೆ ಪಡೆಯದೇ ಇರುವ ಜನರಲ್ಲಿ ಸೋಂಕು ಹೆಚ್ಚಾಗಿ ಹರಡುತ್ತಿದೆ.
ಮಳೆಗಾಲದಲ್ಲಿನ ಡೆಲ್ಟಾ ಅಲೆ ಅಮೆರಿಕಾದ ಡೀಪ್‍ಸೌತ್, ಪ್ರೋರಿಡಾ, ಲೂಸಿಯಾನ, ಮಿಸ್ಸಿಸ್ಸಿಪ್ಪಿ ಪ್ರದೇಶಗಳಲ್ಲಿ ವ್ಯಾಪಕವಾಗಿದೆ. ಅಲ್ಲಿನ ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ಹೋಗಿವೆ. ಕಳೆದ ಜೂನ್ ತಿಂಗಳಲ್ಲಿ ಪ್ರತಿ ದಿನ 11 ಸಾವಿರ ಪ್ರಕರಣಗಳು ವರದಿಯಾಗುತ್ತಿದ್ದವು. ಇಂದು 1,07.143ಕ್ಕೆ ಏರಿಕೆಯಾಗಿದೆ.
ಚೀನಾದಿಂದ ಇಡೀ ವಿಶ್ವಕ್ಕೆ ಹರಡಿರುವ ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ 2 ವರ್ಷಗಳಿಂದ ಜಗತ್ತಿನ ಜನರು ಕಷ್ಟ ಪಡ್ತಿದ್ದಾರೆ.. ಲಾಕ್ ಡೌನ್ , ಕ್ವಾರಂಟೈನ್ ನಿಂದಾಗಿ ಜನರು ಮಾನಸಿಕ ಖಿನ್ನತೆಗೂ ಒಳಗಾಗ್ತಿದ್ದಾರೆ.. ಮತ್ತೊಂದೆಡೆ ಕೆಲಸಗಳಿಲ್ಲದೆ ಅದೆಷ್ಟೋ ಕುಟುಂಬಗಳು ಪರದಾಡಿವೆ.. ಇನ್ನೂ ಕಡುಬಡವರು ಒಂದು ಹೊತ್ತಿನ ಊಟಕ್ಕೂ ಪರಿತಪಿಸಿದ್ದಾರೆ… ಕೂಲಿ ಕಾರ್ಮಿಕರು ಕಷ್ಟ ಪಟ್ಟಿದ್ದಾರೆ.. ಇದೇ ಪರಿಸ್ಥಿತಿ ಬಾರತದಲ್ಲೂ ಇದೆ.. ಅದ್ರಲ್ಲೂ ಇಡೀ ವಿಶ್ವಾದ್ಯಂತ ಕೊರೊನಾ 2ನೇ ಹಾವಳಿ ಸಾಕಷ್ಟು ಅವಾಂತರ ಸೃಷ್ಟಿಸಿದೆ… ಕೋಟ್ಯಾಂತರ ಜನರ ಬದುಕು ಮೂರಾಬಟ್ಟೆಯಾಗಿದೆ… ಸಾವಿರಾರು ಮಕ್ಕಳು ತಂದೆ ಅಥವ ತಾಯ ಇಲ್ಲಾ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರು ಜೀವನ ಕಳೆದುಕೊಂಡಿದ್ದಾರೆ.. ಆಪ್ತರನ್ನ , ಸ್ನೇಹಿತರು , ಕುಟುಂಬದವರನ್ನ ಕಳೆದುಕೊಂಡು ಜನರು ಕೊರೊನಾ ಮಹಾಮಾರಿ ಹಾಗೂ ಅದರ ಜನ್ಮಸ್ಥಳ ಚೈನಾಗೆ ಹಿಡಿ ಶಾಪ ಹಾಕ್ತಿದ್ದಾರೆ..
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








