ಅಮೆರಿಕಾದಲ್ಲಿ 150 ದಿನದಲ್ಲಿ 300 ಮಿಲಿಯನ್ ಡೋಸ್ ಲಸಿಕೆ ಹಂಚಿಕೆ
ಅಮೆರಿಕಾ: ಚೀನಾದಿಂದ ಇಡೀ ವಿಶ್ವಕ್ಕೆ ಹರಡಿರುವ ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ 2 ವರ್ಷಗಳಿಂದ ಜಗತ್ತಿನ ಜನರು ಕಷ್ಟ ಪಡ್ತಿದ್ದಾರೆ.. ಲಾಕ್ ಡೌನ್ , ಕ್ವಾರಂಟೈನ್ ನಿಂದಾಗಿ ಜನರು ಮಾನಸಿಕ ಖಿನ್ನತೆಗೂ ಒಳಗಾಗ್ತಿದ್ದಾರೆ.. ಮತ್ತೊಂದೆಡೆ ಕೆಲಸಗಳಿಲ್ಲದೆ ಅದೆಷ್ಟೋ ಕುಟುಂಬಗಳು ಪರದಾಡಿವೆ.. ಇನ್ನೂ ಕಡುಬಡವರು ಒಂದು ಹೊತ್ತಿನ ಊಟಕ್ಕೂ ಪರಿತಪಿಸಿದ್ದಾರೆ… ಕೋವಿಡ್ ವಿರುದ್ಧ ಹೋರಾಟಕ್ಕಾಗಿ ಲಸಿಕೆ ನೀಡುವಿಕೆಗೆ ಉತ್ತೇಜನ ನೀಡಲಾಗ್ತಿದೆ.. ಅದ್ರಂತೆ ಭಾರತ ಹಾಗೂ ಅಮೆರಿಕಾದಲ್ಲೂ ಲಸಿಕೆ ಅಭಿಯಾನ ವೇಗ ಪಡೆದುಕೊಂಡಿದೆ..
ಈ ನಡುವೆ ಕೋವಿಡ್ ಮೊದಲ ಅಲೆಗೆ ತತ್ತರಿಸಿದ ಅಮೇರಿಕಾ ಇದೀಗ ಶರವೇಗದ ಲಸಿಕೆ ಉತ್ಪಾದನೆಯಲ್ಲಿ ತೊಡಗಿದೆ. ಈ ವಾರಾಂತ್ಯಕ್ಕೆ 160 ಮಿಲಿಯನ್ ಅಮೆರಿಕನ್ನರಿಗೆ ಎರಡೂ ಡೋಸ್ ಲಸಿಕೆ ಪೂರೈಸುವ ಗುರಿ ಹೊಂದಲಾಗಿದೆ ಎಂದು ಅಮೆರಿಕಾ ಅಧ್ಯಕ್ಷ ಜೋಬೈಡನ್ ತಿಳಿಸಿದ್ದಾರೆ. ಕೋವಿಡ್ ನಿರ್ವಹಣಾ ತಂಡದಿಂದ ಮಾಹಿತಿ ಪಡೆದ ಬಳಿಕ ಮಾತನಾಡಿದ ಜೋ ಬೈಡನ್ 27 ವರ್ಷ ಮೇಲ್ಪಟ್ಟ ಶೇ.70 ಹಾಗೂ ಶೇ.90ರಷ್ಟು ಹಿರಿಯರಿಗೆ ಸೇರಿ ಒಟ್ಟು 182 ಮಿಲಿಯನ್ ಜನರಿಗೆ ಮೊದಲ ಡೋಸ್ ನೀಡಲಾಗಿದೆ.
150 ದಿನಗಳ ಅಂತರದಲ್ಲಿ 300 ಡೋಸ್ ಲಸಿಕೆ ತಯಾರಿ ಪೂರ್ಣಗೊಳಿಸಿರುವ ಬಗ್ಗೆ ಹೆಮ್ಮೆ ಇದೆ ಎಂದಿದ್ದಾರೆ. ಜನವರಿ ನಂತರದಲ್ಲಿ ಕೊವಿಡ್ ಪ್ರಕರಣಗಳು ಗಣನೀಯವಾಗಿ ಇಳಿಕೆ ಕಂಡ ಬೆನ್ನಲ್ಲೇ ಲಸಿಕೆಯ ಹಂಚಿಕೆಯಲ್ಲೂ ಕೂಡ ವೇಗ ಪಡೆದುಕೊಂಡು, 2 ಡೋಸ್ನಿಂದ ಯಾರೂ ವಂಚಿತರಾಗದಂತೆ ಲಸಿಕೆ ಹಂಚಿಕೆಯನ್ನು ಸಮರ್ಥವಾಗಿ ನಡೆಸುವಲ್ಲಿ ಗಮನ ಹರಿಸುತ್ತಿದೆ.
ಇನ್ನೂ ಇಡೀ ವಿಶ್ವಾದ್ಯಂತ ಕೊರೊನಾ 2ನೇ ಹಾವಳಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಕೋಟ್ಯಾಂತರ ಜನರ ಬದುಕು ಮೂರಾಬಟ್ಟೆಯಾಗಿದೆ. ಸಾವಿರಾರು ಮಕ್ಕಳು ತಂದೆ ಅಥವ ತಾಯ ಇಲ್ಲಾ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರು ಜೀವನ ಕಳೆದುಕೊಂಡಿದ್ದಾರೆ.. ಆಪ್ತರನ್ನ , ಸ್ನೇಹಿತರು , ಕುಟುಂಬದವರನ್ನ ಕಳೆದುಕೊಂಡು ಜನರು ಕೊರೊನಾ ಮಹಾಮಾರಿ ಹಾಗೂ ಅದರ ಜನ್ಮಸ್ಥಳ ಚೈನಾಗೆ ಹಿಡಿ ಶಾಪ ಹಾಕ್ತಿದ್ದಾರೆ..
ಕೊರೊನಾ ರಿಪೋರ್ಟ್ : ನಿನ್ನೆ 43,393 ಮಂದಿಗೆ ಸೋಂಕು