ಅಫ್ಗಾನ್ ತೊರೆದ್ರೂ ತಾಲಿಬಾನಿಗಳಿಗೆ ಶಾಕ್ ಕೊಟ್ಟು ಬಂದ ಅಮೆರಿಕಾ ಸೇನೆ..!
ಸ್ಮಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ..
ಈ ನಡುವೆ ಅಮೆರಿಕಾಗೆ ತಾಲಿಬಾನ್ ಕೊಟ್ಟಿದ್ದ ಡೆಡ್ ಲೈನ್ ಇಂದಿಗೆ ಮುಕ್ತಾಯವಾಗಿದೆ.. ಈಗಾಗಲೇ ಅಮೆರಿಕಾ ಸಾಕಷ್ಟು ನಾಗರಿಕರು , ಅಮೆರಿಕನ್ನರನ್ನು ಅಫ್ಗಾನ್ ನಿಂದ ಸ್ಥಳಾಂತರಿಸಿದೆ.. ಅಲ್ಲದೇ ಈಗಾಗಲೇ ಅಮೆರಿಕಾದ ಕೊನೆಯ ವಿಮಾನವೂ ಅಫ್ಗಾನ್ ನಿಂದ ಹೊರಟಾಗಿದೆ.. ಹೀಗೆ ಕೊನೆಯ ವಿಮಾನ ಹೊರಡ್ತಿದ್ದಂತೆ ತಾಲಿಬಾನಿಗಳು ಆಗಸಕ್ಕೆ ಗುಂಡು ಹಾರಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಅಲ್ಲದೇ ಕಾಬುಲ್ ವಿಮಾನ ನಿಲ್ದಾಣವನ್ನು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಆದ್ರೆ ಅಮೆರಿಕಾ ಸೇನೆಯು ನಿರ್ಗಮಿಸುತ್ತಾ ತಾಲಿಬಾನಿಗಳಿಗೆ ಖುಷಿಯ ಜೊತೆಗೆ ಶಾಕ್ ಕೊಟ್ಟು ಹೋಗಿದ್ದಾರೆ. ಹೌದು ಅಮೆರಿಕ ಅಫ್ಗಾನ್ ತೊರೆಯುವ ಮುನ್ನ ಏರ್ಪೋರ್ಟ್ನಲ್ಲಿದ್ದ ಯುದ್ಧ ತನ್ನ ವಿಮಾನಗಳು, ಆರ್ಮೋರ್ಡ್ ವೆಹಿಕಲ್, ಹೈಟೆಕ್ ರಾಕೆಟ್ ಡಿಫೆನ್ಸ್ ಸಿಸ್ಟಂನ್ನು ಡಿಸೇಬಲ್ ಮಾಡಿದೆ.. ಹೀಗಾಗಿ ಇವ್ಯಾವುದೂ ಕೂಡ ಪ್ರಯೋಜನಕ್ಕೆ ಬಾರದಂತಾಗಿದೆ.. ಅಲ್ಲದೇ ಅಮೆರಿಕಾದ ಸುಸಜ್ಜಿತ ಶಸ್ತ್ರಾಸ್ತ್ರಗಳನ್ನೂ ಕೂಡ ಅಮೆರಿಕಾ ನಾಶ ಮಾಡಿ ಹಾಕಿದೆ.. ಈ ಬಗ್ಗೆ ಖುದ್ದು ಅಮೆರಿಕಾ ಸೇನೆ ತಿಳಿಸಿದೆ.
ಅಫ್ಗಾನ್ ನಿಂದ ಕಾಲ್ಕಿತ್ತ ಅಮೆರಿಕಾ – ಗುಂಡು ಹಾರಿಸಿ ಸಂಭ್ರಮಿಸಿದ ತಾಲಿಬಾನಿಗಳಿಂದ ಸ್ವಾತಂತ್ರ್ಯ ಘೋಷಣೆ..!
ಈ ಬಗ್ಗೆ ಮಾತನಾಡಿರುವ ಜೆನರಲ್ ಕೆನ್ನೆತ್ ಮೆಕೆಂಝೀ, ಕಾಬೂಲ್ ಏರ್ಪೋರ್ಟ್ನಲ್ಲಿ ಇನ್ನೂ 73 ಯುದ್ಧ ವಿಮಾನಗಳಿವೆ. ಅವುಗಳನ್ನು ಯೋಧರು ಹೊರಡುವ ಮುನ್ನ ಕಂಪ್ಲೀಟಾಗಿ ನಾಶ ಮಾಡಿದ್ದಾರೆ. ಆ ಯುದ್ಧ ವಿಮಾನಗಳು ಇನ್ಮುಂದೆ ಯಾವತ್ತೂ ಹಾರೋದಿಲ್ಲ. ಅದನ್ನು ಯಾರಿಂದಲೂ ಆಪರೇಟ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅಲ್ಲದೇ 70 ಆರ್ಮೋರ್ಡ್ ವೆಹಿಕಲ್ ಮತ್ತು 27 ಹಮ್ವೀಸ್ ವಾಹನಗಳನ್ನು ಕೂಡ ಡಿಸೇಬಲ್ ಮಾಡಿದ್ದೀವಿ.. ಅದನ್ನ ಯಾರೂ ಓಡಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನು ವಿಮಾನ ನಿಲ್ದಾಣವನ್ನು ರಾಕೆಟ್ ದಾಳಿಯಿಂದ ರಕ್ಷಿಸಿಕೊಳ್ಳಲು ಬಳಸುತ್ತಿದ್ದ ರಾಕೆಟ್ ಡಿಫೆನ್ಸ್ ಸಿಸ್ಟಂನ್ನು ಕೂಡ ಡಿಸೇಬಲ್ ಮಾಡಿದೀವಿ. ಅದು ಕೊನೆ ಕ್ಷಣದವರೆಗೂ ಕೆಲಸ ಮಾಡ್ತಿತ್ತು. ಇದೀಗ ಅದು ಕೂಡ ಕೆಲಸ ಮಾಡ್ತಿಲ್ಲ. ಯಾರಿಂದಲೂ ಉಪಯೋಗಿಸಲೂ ಸಾಧ್ಯವಿಲ್ಲ ಅಂತ ಹೇಳಿದ್ಧಾರೆ.








