ವಲಸಿಗರಿಗೆ ನಿಷೇಧ : ಟ್ರಂಪ್ ಸುಗ್ರೀವಾಜ್ಞೆ ರದ್ದತಿಗೆ ಜೋ ಬೈಡನ್ ನಿರ್ಧಾರ..!
ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕರಿಸಲು ಇನ್ನೇನು ದಿನಗಣನೆ ಆರಂಭವಾಗಿದೆ. ಈ ನಡುವೆ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಭಾರತೀಯ ವಲಸಿಗರಿಗೆ ಪ್ರಮುಖ ಆದ್ಯತೆ ನೀಡುವುದು ಅವರ ಆದ್ಯತೆ ಎಂದು ಹೇಳಿಕೊಂಡಿದ್ದರು. ಇದೀಗ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಅವರು ಪ್ರಮುಖ ರಾಷ್ಟ್ರಗಳ ವಲಸಿಗರಿಗೆ ಅಮೆರಿಕ ಪ್ರವೇಶ ನಿರಾಕರಿಸುವ ಸುಗ್ರೀವಾಜ್ಞೆಯನ್ನು ರದ್ದುಪಡಿಸಲಿದ್ದಾರೆ ಹಾಗೂ ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಮರುಸೇರ್ಪಡೆಗೊಳ್ಳುವ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.
ಭಾರತದ ಕೆಲ ಕಾನೂನುಗಳ ವಿರುದ್ಧ ಬ್ರಿಟನ್ ನಲ್ಲಿ ಪ್ರತಿಭಟನೆ
ಹೌದು ವಲಸಿಗರಿಗೆ ಅಮೆರಿಕ ಪ್ರವೇಶ ನಿರಾಕರಿಸುವ ಟ್ರಂಪ್ ಸುಗ್ರೀವಾಜ್ಞೆಯನ್ನು ಅಮೆರಿಕದ 46ನೇ ಅಧ್ಯಕ್ಷರಾಗಿ ಜೊ ಬೈಡನ್ ಅವರು ಆಯ್ಕೆಯಾದ ಮೊದಲ ದಿನವೇ ಹಿಂಪಡೆಯಲಿದ್ದಾರೆ ಎನ್ನಲಾಗಿದೆ. ಅಂದ್ಹಾಗೆ ಇದೇ ತಿಂಗಳ 20 ಅಂದ್ರೆ ಬುಧವಾರ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಆಡಳಿತ ವಹಿಸಿಕೊಂಡ ನಂತರ ಅವರು ಗಡಿಗಳಲ್ಲಿ ವಲಸಿಗ ಕುಟುಂಬಗಳಿಂದ ಬೇರ್ಪಟ್ಟ ಮಕ್ಕಳನ್ನು ಅವರ ಪಾಲಕರಿಗೆ ಒಪ್ಪಿಸುವ ನಿರ್ಧಾರವನ್ನು ಕೂಡಾ ಪ್ರಕಟಿಸುವ ನಿರೀಕ್ಷೆಯಿದೆ.
ಮದುವೆ ಆಸೆ ತೋರಿಸಿ ಕಾಗೆ ಹಾರಿಸಿದಳು ಸುಂದರಿ : ಪ್ರೀತಿ ನಂಬಿ ಪಾಪರ್ ಆದ ಯುವಕ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








