ಅಮೆರಿಕಾ ಮೂಲದ ಬಯೋಟೆಕ್ ಕಂಪನಿ ಮಾಡೆರ್ನಾ ಜೊತೆಗೆ ಬರೋಬ್ಬರಿ 1.525 ಬಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಮಾಡೆರ್ನಾ ಜೊತೆ ಮಾಡಿಕೊಳ್ಳುತ್ತಿರುವ ಎರಡನೇ ಒಪ್ಪಂದ ಇದಾಗಿದೆ. ಈ ಒಪ್ಪಂದದ ಅನ್ವಯ ಕೊರೊನಾ ಸೋಂಕಿಗೆ ಲಸಿಕೆಯನ್ನು ತರಿಸಿಕೊಳ್ಳಲು ಮುಂಚಿತವಾಗಿಯೇ ಔಷಧಿಗಳನ್ನ ಆರ್ಡರ್ ಮಾಡಿದ್ದು, ಒಟ್ಟು ಐದು ಕಂಪನಿಗಳ ಜೊತೆಗೆ ಅಮೆರಿಕ ಒಪ್ಪಂದ ಮಾಡಿಕೊಂಡಿದೆ.
ಒಪ್ಪಂದದಲ್ಲಿ ಹೆಚ್ಚುವರಿಯಾಗಿ 400 ಮಿಲಿಯನ್ (40 ಕೋಟಿ) ಡೋಸ್ಗಳನ್ನು ಪಡೆಯಲಿದೆ ಎಂದು ಹೇಳಲಾಗಿದೆ. ಮಾಡೆರ್ನಾ ಲಸಿಕೆಯು ಅಂತಿಮ ಹಂತದ ಪ್ರಯೋಗದಲ್ಲಿದ್ದು, 2021ರಲ್ಲಿ ಅನುಮತಿ ಸಿಗುವ ನಿರೀಕ್ಷೆಯಿದೆ. 300 ಮಿಲಿಯನ್ ಅಂದರೆ 30 ಕೋಟಿ ಲಸಿಕೆಯನ್ನು ಒದಗಿಸುವಂತೆ ಆಕ್ಸ್ಫರ್ಡ್ ಜೊತೆ ಅಮೆರಿಕಾ ಸರ್ಕಾರ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ನೋವಾವ್ಯಾಕ್ಸ್ ಜೊತೆಗೆ 100 ಮಿಲಿಯನ್ ಲಸಿಕೆ ನೀಡುವಂತೆ ಒಪ್ಪಂದ ಮಾಡಿಕೊಂಡಿದೆ.