ಟ್ರಂಪ್ ಸರ್ಕಾರದ ಮತ್ತೊಂದು ಆದೇಶ ಹಿಂಪಡೆದ ಜೋ ಬೈಡನ್
ಅಮೆರಿಕಾ: ಟ್ರಂಪ್ ಆಡಳಿತ ಕೈಗೊಂಡಿದ್ದ ಮತ್ತೊಂದು ನಿರ್ಧಾರವನ್ನು ನೂತನ ಜೋ ಬೈಡನ್ ಆಡಳಿತವು ಹಿಂದೆ ಪಡೆದಿದೆ. 2020ರ ಗಣತಿಯ ಅಂಕಿ ಅಂಶಗಳನ್ನು ಆಧರಿಸಿ ಜನರ ಪೌರತ್ವ ಹಾಗೂ ಅವರ ವಯಸ್ಸು ಕುರಿತ ದತ್ತಾಂಶ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಅಮೆರಿಕದ ಜನಗಣತಿ ಸಂಸ್ಥೆ ಕೈಬಿಟ್ಟಿದೆ.
ನಾನಿಲ್ಲಿ ಮನ್ ಕಿ ಬಾತ್ ಹೇಳಲು ಬಂದಿಲ್ಲ, ನಿಮ್ಮ ಮಾತು ಕೇಳಲು ಬಂದಿದ್ದೇನೆ : ರಾಹುಲ್ ಗಾಂಧಿ
ಈ ಕುರಿತು ಆದೇಶಕ್ಕೆ ಜೋ ಬೈಡನ್ ಈಗಾಗಲೇ ಸಹಿ ಹಾಕಿದ್ದಾರೆ. ಈ ಸಂಬಂಧ ಹೇಳಿಕೆಯಲ್ಲಿ, ಜನಗಣತಿ ಸಂಸ್ಥೆಯು ಪೌರತ್ವ ಮತ್ತು ವಯಸ್ಸು ಆಧರಿಸಿದ ದತ್ತಾಂಶ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಕೈಬಿಡಲಾಗಿದೆ. 2020ರ ಗಣತಿಗೆ ಸಂಬಂಧಿಸಿದ ಟ್ರಂಪ್ ಅವರ ಎರಡು ನಿರ್ದೇಶನಗಳನ್ನು ಕೈಬಿಡಲು ನಿರ್ಧರಿಸಲಾಗಿದೆ ಎಂದಿದೆ.
ಜನ ಹಣದುಬ್ಬರದಿಂದ ಬಳಲುತ್ತಿದ್ದರೆ, ಮೋದಿ ಸರಕಾರ ತೆರಿಗೆ ಸಂಗ್ರಹದಲ್ಲಿ ಬ್ಯುಸಿಯಾಗಿದೆ: ರಾಹುಲ್ ಗಾಂಧಿ
ಮೊದಲನೆಯದು ಅಮೆರಿಕದ ಪ್ರತಿ ನಾಗರಿಕರ ಪೌರತ್ವವನ್ನು ದಾಖಲೆಗಳನ್ನು ಆಧರಿಸಿ ಗ್ರಹಿಸುವುದು, ಎರಡನೆಯದು ಪೌರತ್ವವಿಲ್ಲದ, ನಿಯಮಬಾಹಿರವಾಗಿ ಇರುವ ನಾಗರಿಕರನ್ನು ಪ್ರತ್ಯೇಕಗೊಳಿಸುವುದು ಎಂದು ಸಂಸ್ಥೆಯು ತಿಳಿಸಿದೆ. 2018ರಲ್ಲಿ ಟ್ರಂಪ್ ಅವರ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರಾಸ್ ಅವರು, ಬ್ಲಾಕ್ ಹಂತದ ಪೌರತ್ವ ಅಂಕಿ ಅಂಶ ಒದಗಿಸಬೇಕು ಎಂದು ಆದೇಶಿಸಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








