ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಅಮೆರಿಕನ್ನರ ಮತಪ್ರಮಾಣವೇ ಹೆಚ್ಚು..!
ಅಮೆರಿಕಾ : ಕಳೆದ ವರ್ಷ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಹೀನಾಯವಾಗಿ ಸೋತಿದ್ದು, ಜೋ ಬೈಡೆನ್ ಗೆದ್ದು ಅಧ್ಯಕ್ಷರಾಗಿ ದೇಶದ ಜವಾಬ್ದಾರಿ ಹೊತ್ತಿದ್ದಾರೆ. ಆದ್ರೆ ಈ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಅಮೆರಿಕನ್ನರ ಮತಪ್ರಮಾಣವೇ ಹೆಚ್ಚು ಎಂದು ಅಧ್ಯಯನಿಂದ ತಿಳಿದುಬಂದಿದೆ.
ಏಷ್ಯಾ ಮೂಲದ ಅಮೆರಿಕನ್ನರ ಪೈಕಿ ಭಾರತೀಯ-ಅಮೆರಿಕನ್ನರು ಚಲಾಯಿಸಿದ ಮತಗಳ ಪ್ರಮಾಣವೇ ಅಧಿಕ ಇತ್ತು ಎಂದು ಸಮೀಕ್ಷೆಯೊಂದು ಹೇಳಿದೆ. ಏಷ್ಯಾ ಮೂಲದ ಇತರ ಸಮುದಾಯಗಳಿಗೆ ಹೋಲಿಸಿದರೆ, ಭಾರತೀಯ-ಅಮೆರಿಕನ್ನರ ಮತ ಚಲಾವಣೆ ಪ್ರಮಾಣ ಶೇ 71ರಷ್ಟು ಇತ್ತು ಎಂದು ಏಷ್ಯನ್ ಅಮೆರಿಕನ್ಸ್ ಆಯಂಡ್ ಪೆಸಿಫಿಕ್ ಐಲ್ಯಾಂಡರ್ಸ್ ಸಂಘಟನೆಯ ಸಂಶೋಧಕ ಕಾರ್ತೀಕ್ ರಾಮಕೃಷ್ಣನ್ ಹೇಳಿದ್ದಾರೆ.
‘ಯುಎಸ್ ಕರೆಂಟ್ ಪಾಪ್ಯುಲೇಷನ್ ಸರ್ವೆ’ ಎಂಬ ಸಮೀಕ್ಷಾ ವರದಿಯನ್ನು ಉಲ್ಲೇಖಿಸಿ ಅವರು ತಮ್ಮ ಬ್ಲಾಗ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ಶೇ 66ರಷ್ಟು ಮತ ಚಲಾವಣೆ ಪ್ರಮಾಣದೊಂದಿಗೆ ಜಪಾನ್ ಮೂಲದ ಅಮೆರಿಕನ್ನರು ಎರಡನೇ ಸ್ಥಾನದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಇನ್ನೂ ಟ್ರಂಪ್ ಗೆದ್ದ 2016ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿನ ಮತ ಚಲಾವಣೆ ಪ್ರಮಾಣಕ್ಕೆ ಹೋಲಿಸಿದರೆ, ಭಾರತೀಯ-ಅಮೆರಿಕನ್ನರ ಮತ ಚಲಾವಣೆ ಪ್ರಮಾಣದಲ್ಲಿ ಶೇ 9ರಷ್ಟು ಹೆಚ್ಚಳ ಕಂಡು ಬಂದಿದೆ. ಜಪಾನೀಯರಿಗೆ ಸಂಬಂಧಿಸಿದಂತೆ ಈ ಪ್ರಮಾಣದಲ್ಲಿ ಶೇ 4ರಷ್ಟು ಹೆಚ್ಚಳ ಇದೆ ಎಂದು ರಾಮಕೃಷ್ಣನ್ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.