Ukraine : ಉಕ್ರೇನ್ ಗೆ 600 ಮಿಲಿಯನ್ ಡಾಲರ್ ನೆರವು ಘೋಷಿಸಿದ ಅಮೆರಿಕಾ
ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿರುವ ಸಂದರ್ಭದಲ್ಲಿ ಅಮೆರಿಕಾ ಸರ್ಕಾರವು ಸೇರಿದಂತೆ ಪಾಶ್ಚಿಮಾತ್ಯ ದೇಶಗಳು , ರಷ್ಯಾ ಅಧಧ್ಯಕ್ಷ ವ್ಲಾಡಿಮಾರ್ ಪುಟಿನ್ ನಡೆಯನ್ನ ತೀವ್ರವಾಗಿ ಖಂಡಿಸಿದ್ದು , ಇದೀಗ ಉಕ್ರೇನ್ ಗೆ ಒಟ್ಟಾರೆಯಾಗಿ 600 ಮಿಲಿಯನ್ ಡಾಲರ್ ನೆರವು ಘೋಷಿಸಿದ್ದಾರೆ,..
ರಕ್ಷಣಾ ಉಪಕರಣಗಳ ಖರೀದಿ, ಮಿಲಿಟರಿ ತರಬೇತಿ ಮತ್ತು ಶಿಕ್ಷಣ ಸೌಲಭ್ಯಕ್ಕಾಗಿ ತಕ್ಷಣಕ್ಕೆ 350 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ ಸುಮಾರು 2,626 ಕೋಟಿ ರೂ , ಮತ್ತು ಭದ್ರತಾ ಹಿತಾಸಕ್ತಿಗಳಿಗೆ 250 ಮಿಲಿಯನ್ ಡಾಲರ್ ಅಂದ್ರೆ ಸುಮಾರು 1,876 ಕೋಟಿ ರೂ ನೆರವು ಘೋಷಿಸುವುದಕ್ಕೆ ರಾಜ್ಯ ಕಾರ್ಯದರ್ಶಿಗೆ ಅಧಿಕಾರ ನೀಡಲಾಗಿದೆ ಎಂದು ಶ್ವೇತಭವನದ ಪ್ರಕಟಣೆಯಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ..








