ಟ್ರಂಪ್ ಅಧಿಕಾರವಧಿ ಮುಗಿಯುವ ಮುನ್ನವೇ ಪದಚ್ಯುತಿ? ಸಂಪುಟ ಸದಸ್ಯರ ಚರ್ಚೆ!
ಟ್ರಂಪ್ ಬೆಂಬಲಿಗರು ವಾಷಿಂಗ್ ಟನ್ ನಲ್ಲಿ ಹಿಂಸಾಚಾರಕ್ಕೆ ಮುಂದಾಗಿದ್ದು, ಪೊಲೀಸರು ಪ್ರತಿಭಟನಾಕಾರರ ನಡುವಿನ ಸಂಘರ್ಷದಲ್ಲಿ ಈಗಾಗಲೇ ನಾಲ್ವರು ಬಲಿಯಾಗಿದ್ದಾರೆ. ಇತ್ತ ಟ್ರಂಪ್ ಅವರ ಬೆಂಬಲಿಗರು ಮುತ್ತಿಗೆ ಹಾಕಿದ ಘಟನೆ ತೀವ್ರ ಖಂಡನೆಗೆ ಗುರಿಯಾಗಿದೆ. ಘಟನೆ ಹಿನ್ನೆಲೆ ಟ್ರಂಪ್ರನ್ನ ಅವಧಿಗೂ ಮುನ್ನವೇ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಬಗ್ಗೆ ಟ್ರಂಪ್ ಸಂಪುಟ ಸದಸ್ಯರು ಚರ್ಚೆ ನಡೆಸಿದ್ದಾರೆಂದು ಅಮೆರಿಕಾದ ಮಾಧ್ಯಮಗಳು ವರದಿ ಮಾಡಿವೆ.
ಟ್ರಂಪ್ ಬೆಂಬಲಿಗರ ದಾಂಧಲೆ : ಅಮೆರಿಕಾದ ಕರಾಳ ದಿನ ಎಂದ ಜೋ ಬೈಡನ್
ಇದರ ಬೆನ್ನಲ್ಲೇ ಅಧಿಕಾರವಧಿ ಮುಗಿಯುವ ಮುನ್ನವೇ ಡೊನಾಲ್ಡ್ ಟ್ರಂಪ್ ಅವರನ್ನು ಪದಚ್ಯುತಿಗೊಳಿಸಬೇಕೆಂಬ ಒತ್ತಡ ಡೆಮಾಕ್ರಟಿಕ್ ಪಕ್ಷದ ಕೆಲ ಮುಖಂಡರಿಂದ ಕೇಳಿಬರುತ್ತಿದೆ ಎನ್ನಲಾಗಿದೆ. ಡೊನಾಲ್ಡ್ ಟ್ರಂಪ್ ಅವರ ಅಧಿಕಾರವಧಿ ಜನವರಿ 30ಕ್ಕೆ ಅಂತ್ಯಗೊಳ್ಳಲಿದೆ. ಚುನಾವಣೆಯಲ್ಲಿ ಮೋಸದಿಂದ ತಮ್ಮನ್ನು ಸೋಲಿಸಲಾಗಿದೆ ಎಂದು ಪದೇ ಪದೇ ಹೇಳಿಕೆ ನೀಡುವ ಮೂಲಕ ಅಧಿಕಾರವನ್ನು ಶಾಂತಯುತವಾಗಿ ವರ್ಗಾವಣೆ ಮಾಡಲು ಡೊನಾಲ್ಡ್ ಟ್ರಂಪ್ ನಿರಾಕರಿಸಿದ ನಂತರ ಅಮೆರಿಕಾ ಹಿಂಸಾಚಾರದಲ್ಲಿ ನಲುಗಿದ್ದು, ಎರಡು ಮಾರ್ಗಗಳ ಮೂಲಕ ಅಧ್ಯಕ್ಷರನ್ನು ಕಚೇರಿಯಿಂದ ಪದಚ್ಯುತಿಗೊಳಿಸಬಹುದಾಗಿದೆ. ದೋಷರೋಪಣೆ ಮತ್ತು ಅಮೆರಿಕದ ಸಂವಿಧಾನಕ್ಕೆ 25ನೇ ತಿದ್ದುಪಡಿ ಮೂಲಕ ಡೊನಾಲ್ಡ್ ಟ್ರಂಪ್ ಅವರ ಅಧಿಕಾರವಧಿ ಮುಗಿಯುವೇ ಮೊದಲೇ ಪದಚ್ಯುತಿಗೊಳಿಸಬಹುದಾಗಿದೆ. ಬಿಡೆನ್ ಅಧಿಕಾರ ವಹಿಸಿಕೊಳ್ಳುವವರೆಗೂ ಉಪಾಧ್ಯಕ್ಷ ಮೈಕ್ ಪೆನ್ಸ್ ಆಡಳಿತದ ಜವಾಬ್ದಾರಿ ತೆಗೆದುಕೊಳ್ಳಬಹುದಾಗಿದೆ.
ಅಮೆರಿಕಾದಲ್ಲಿ ಟ್ರಂಪ್ ಬೆಂಬಲಿಗರ ದಾಂಧಲೆ : ಪ್ರಧಾನಿ ಮೋದಿ ಬೇಸರ
ಜನವರಿ 20ರಂದು ಜೋ ಬೈಡನ್ ಅಧಿಕೃತವಾಗಿ ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹೀಗಾಗಿ ಇನ್ನೂ ಎರಡು ವಾರ ಟ್ರಂಪ್, ಅಧ್ಯಕ್ಷ ಹುದ್ದೆಯನ್ನ ನಿಭಾಯಿಸಬೇಕು. ಆದ್ರೆ ಅಧ್ಯಕ್ಷರು ತನ್ನ ಅಧಿಕಾರ ಮತ್ತು ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ತೀರ್ಮಾನಿಸಿದಾಗ, ಉಪಾಧ್ಯಕ್ಷ ಮತ್ತು ಕ್ಯಾಬಿನೆಟ್ ಸೇರಿ ಅಧ್ಯಕ್ಷರನ್ನು ಹುದ್ದೆಯಿಂದ ತೆಗೆದುಹಾಕಬಹುದು. ಹೀಗಾಗಿ ಉಪಾಧ್ಯಕ್ಷ ಮೈಕ್ ಪೆನ್ಸ್ರ ಮೂಲಕ ಟ್ರಂಪ್ರನ್ನ ಕೆಳಗಿಳಿಸಲು ಅಮೆರಿಕಾ ಸಂಸತ್ತಿಗೆ 25ನೇ ತಿದ್ದುಪಡಿ ತರುವ ಕುರಿತು ಸಂಪುಟ ಸದಸ್ಯರು ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಟ್ರಂಪ್ರನ್ನ ತೆಗೆದುಹಾಕಲು ಮತ ಹಾಕುವಲ್ಲಿ ಮೈಕ್ ಪೆನ್ಸ್ ಸಂಪುಟವನ್ನ ಮುನ್ನಡೆಸಬೇಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೆನ್ಸ್, ನನ್ನ ಪ್ರತಿಜ್ಞೆ ಸಂವಿಧಾನವನ್ನು ಬೆಂಬಲಿಸುವುದು ಮತ್ತು ಸಮರ್ಥಿಸುವುದು ನನ್ನ ತೀರ್ಮಾನ, ಯಾವ ಎಲೆಕ್ಟೊರಲ್ ಮತಗಳನ್ನು ಎಣಿಕೆ ಮಾಡಬೇಕು ಯಾವುದನ್ನು ಎಣಿಕೆ ಮಾಡಬಾರದು ಎಂದು ನಿರ್ಧರಿಸುವ ಏಕಪಕ್ಷೀಯ ನಿರ್ಧಾರವನ್ನು ಕೈಗೊಳ್ಳದಂತೆ ತಡೆಯುತ್ತಿದೆ ಎಂದಿದ್ದಾರೆ.
ಅಮೆರಿಕಾದಲ್ಲಿ ಹಿಂಸಾಚಾರಕ್ಕೆ ಕಾರಣ ಡೊನಾಲ್ಡ್ ಟ್ರಂಪ್: ಮಾಜಿ ಅಧ್ಯಕ್ಷ ಒಬಾಮ
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel