America Whitehouse : ಅಪರಿಚಿತ ವಸ್ತು ಹೊಡೆದುರುಳಿಸಿದ ಕ್ರಮ ಸಮರ್ಥಿಸಿಕೊಂಡ ಶ್ವೇತಭವನ…
ಅಮೆರಿಕಾದ ವಾಯುಗಡಿಯ ಪರಿಮಿತಿಯಲ್ಲಿ ಇತ್ತೀಚೆಗೆ ಮೂರು ಅಪರಿಚಿತ ವಸ್ತುಗಳು ಕಂಡು ಬಂದ ನಂತರ ಅದನ್ನ ಹೊಡೆದುರುಳಿಸಿದ್ದ ಅಮೆರಿಕಾದ ವೈಟ್ ಹೌಸ್ ಇದೀಗ ತನ್ನ ನಡೆಯನ್ನ ಸಮರ್ಥಿಸಿಕೊಂಡಿದೆ..
ಅಲ್ಲದೇ ಈ ಹಿಂದೆ ಅತಿ ಎತ್ತರದಲ್ಲಿ ಕಾಣಿಸಿಕೊಂಡಿದ್ದ ಚೀನಾದ ಬಲೂನ್ ರೀತಿಯಂತೇ ಅಪರಿಚಿತ ವಸ್ತುಗಳು ಕಣ್ಗಾವಲು ಉದ್ದೇಶ ಹೊಂದಿದ್ದವೇ ಎಂಬುದರ ಬಗ್ಗೆ ಯಾವುದೇ ಸುಳಿವು ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಹೊಡೆದುರುಳಿಸಿದ್ದ ವಸ್ತು ಸೇರಿದಂತೆ ಮೂರು ವಸ್ತುಗಳು, ನಾಗರಿಕ ವಿಮಾನಗಳ ಸಂಚಾರಕ್ಕೆ ಅಡ್ಡಿ ಆಗುವಂತೆ ಕೆಳಹಂತದಲ್ಲಿ ಚಲನೆಯಲ್ಲಿದ್ದವು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಕಿರ್ಬಿ ಹೇಳಿದ್ದಾರೆ.
ಇದರ ಹೊರತಾಗಿ ಈ ಶಂಕಾಸ್ಪದ ವಸ್ತುಗಳು ಚೀನಾಕ್ಕೇ ಸೇರಿದ್ದವು ಅಥವಾ ಅವುಗಳಿಗೆ ಕಣ್ಗಾವಲು ಉದ್ದೇಶದ ಪರಿಕರ ಅಳವಡಿಸಲಾಗಿತ್ತು ಎಂಬುದಕ್ಕೆ ಸಾಕ್ಷ್ಯವಿಲ್ಲ.
ಹಾಗಂತ ಇಂತಹ ಸಾಧ್ಯತೆ ತಳ್ಳಿಹಾಕುವುದಿಲ್ಲ ಎಂದೂ ಕೂಡ ತಿಳಿಸಿದ್ದಾರೆ.
ಅಷ್ಟೇ ಅಲ್ದೇ ಶಂಕಾಸ್ಪದ ವಸ್ತುಗಳ ಮೂಲ ಪತ್ತೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಚೀನಾವು ಮಾಹಿತಿ ಕಲೆಹಾಕಲು ಅತಿ ಎತ್ತರದ ಪ್ರದೇಶದಲ್ಲಿ ಕಣ್ಗಾವಲು ಬಲೂನ್ ಹಾರಿಬಿಡುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ನಾವು ಗುರುತಿಸಿದ್ದೇವೆ ಎಂದರು.








