ಭಾವನೆಗಳೂ ಉಚಿತವಲ್ಲ…! ಶಸ್ತ್ರ ಚಿಕಿತ್ಸೆ ವೇಳೆ ಅತ್ತಿದ್ದಕ್ಕೆ ದಂಡ ಕಟ್ಟಿದ ರೋಗಿ..!
ಕೆಲವೊಮ್ಮೆ ಭಾವನೆಗಳೂ ಕೂಡ ಉಚಿತವಾಗಿರಲ್ಲ. ನಮ್ಮ ಸ್ವಂತ ಬಾವನೆಗಳಿಗೂ ಬೆಲೆತೆರಬೇಕಾದ ಪರಿಸಸ್ಥಿತಿಯೂ ಬರಬಹುದು. ಹೌದು ಇದಕ್ಕೆ ತಾಜಾ ಉದಾಹರಣೆ ಅಮೆರಿಕಾದಲ್ಲಿ ನಡೆದಿರುವ ಈ ಘಟನೆ. ಮಹಿಳೆಯೊಬ್ಬರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರ ಚಿಕಿತ್ಸೆ ವೇಳೆ ಅವರು ಅತ್ತಿರುವುದಕ್ಕೆ ಆಸ್ಪತ್ರೆಯ ವತಿಯಿಂದ ಅವರಿಗೆ ಹೆಚ್ಚುವರಿ ದಂಡವನ್ನು ವಿಧಿಸಲಾಗಿದೆ.
ಹೌದು.. ಮೋಲ್ ತೆಗೆಯುವ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಆಕೆ ಅತ್ತಿದ್ದಕ್ಕೆ ದಂಡ ವಿಧಿಸಲಾಗಿದೆ. ಸುಮಾರು 11 ಡಾಲರ್ ಗಳ ದಂಡವನ್ನ ವಿಧಿಸಲಾಗಿದೆ. ಆಸ್ಪತ್ರೆಯ ಬಿಲ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಮಹಿಳೆ ಈ ಬಗ್ಗೆ ಮಾಹಿತಿ ನೀಡಿದ್ದು, ಭಾವನೆಗಳು ಉಚಿತ ಅಂದುಕೊಂಡಿದ್ದು, ಅದಕ್ಕೂ ಬೆಲೆ ಕಟ್ಟಬೇಕು ಎಂಬುದು ಈಗ ಗೊತ್ತಾಯ್ತು ಎಂದಿದ್ದಾರೆ. ಆಸ್ಪತ್ರೆಯ ಒಟ್ಟಾರೆ ಬಿಲ್ 223 ಡಾಲರ್ ಗಳು. ಇದರಲ್ಲಿ 11 ಡಾಲರ್ ದಂಡವೂ ಕೂಡ ಸೇರಿಕೊಂಡಿರೋದಾಗಿ ಬಿಲ್ ನಲ್ಲಿ ತೋರಿಸಸಲಾಗಿದೆ.