ಅಮೆರಿಕಾ ಚುನಾವಣೆ ( American election ) : ಮತಗಳಿಕೆಯಲ್ಲಿ ಚರಿತ್ರೆ ಸೃಷ್ಟಿಸಿದ ಬಿಡೆನ್
ನ್ಯೂಯಾರ್ಕ್ : ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ಚರಿತ್ರೆ ಸೃಷ್ಠಿಸಿದ್ದಾರೆ.
ಅಮೆರಿಕದ ಚುನಾವಣಾ ( American election ) ಇತಿಹಾಸದಲ್ಲೇ ಅತಿ ಹೆಚ್ಚು ಮತಗಳಿಸಿದ ಅಧ್ಯಕ್ಷೀಯ ಅಭ್ಯರ್ಥಿ ಎಂಬ ಹೆಗ್ಗಳಿಕೆ ಜೋ ಬಿಡೆನ್ ಅವರು ಪಾತ್ರರಾಗಿದ್ದಾರೆ.
ಈ ಮೂಲಕ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಮುರಿದಿದ್ದಾರೆ.
ಜೋ ಬಿಡನ್ ಹೆಚ್ಚಿನ ಮತಗಳಿಕೆಯ ದಾಖಲೆಯನ್ನು ನಿರ್ಮಿಸಿ ಗಮನಸೆಳೆದಿದ್ದಾರೆ ಎಂದು ನ್ಯಾಷನಲ್ ಪಬ್ಲಿಕ್ ರೇಡಿಯೋ ವರದಿ ಮಾಡಿದೆ.
ಇದನ್ನೂ ಓದಿ : ಅಮೆರಿಕ ಚುನಾವಣೆ – ಟ್ರಂಪ್ ಕೈಹಿಡಿಯುತ್ತಾರಾ ಭಾರತೀಯ ಮತದಾರರು?
ನವೆಂಬರ್ 4ರ ಮತಗಳಿಕೆ ಲೆಕ್ಕಾಚಾರ ಪ್ರಕಾರ ಬೈಡನ್ ಅವರು 7 ಕೋಟಿಗೂ ಹೆಚ್ಚು ಮತಗಳನ್ನು ಪಡೆದು ಮುಂದಿದ್ದಾರೆ.
ಇಷ್ಟು ಮತ ಗಳಿಕೆ ಬೇರಾವ ಅಧ್ಯಕ್ಷೀಯ ಅಭ್ಯರ್ಥಿಯೂ ಮಾಡಿಲ್ಲ. ಇಲ್ಲಿಯವರೆಗೂ 2008ರಲ್ಲಿ ಬರಾಕ್ ಒಬಾಮ ಅವರು 69,498,516 ಮತಗಳಿಸಿದ್ದು ದಾಖಲೆ ಆಗಿತ್ತು.
ಆದ್ರೆ ನಿನ್ನೆ ಬಿಡೆನ್ ಅವರು ಈ ದಾಖಲೆಯಲ್ಲಿ ಮುರಿದಿದ್ದು, ಒಬಾಮಾ ಮತಕ್ಕಿಂತ 3 ಲಕ್ಷ ಮತಗಳನ್ನು ಬಿಡೆನ್ ಗಳಿಸಿದ್ದಾರೆ.
ಇನ್ನು ಟ್ರಂಪ್ ಅವರು 6.7 ಕೋಟಿಗೂ ಹೆಚ್ಚು (67.32 ಮಿಲಿಯನ್) ಮತಗಳೊಂದಿಗೆ ಒಬಾಮಾ ಅವರ ಮತಗಳಿಕೆಯ ದಾಖಲೆ ಸಮೀಪದಲ್ಲಿದ್ದಾರೆ.
ಬೈಡನ್ vs ಟ್ರಂಪ್ – ಯಾರಿಗೆ ಈ ಬಾರಿ ಶ್ವೇತ ಭವನದ ಅಧಿಪತ್ಯ
ಒಬಾಮಾ ಅವರು 2008ರಲ್ಲಿ 6,94,98,516 ಮತಗಳನ್ನು ಪಡೆದಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










