ನಿಮಗಿದು ಗೊತ್ತಾ ? ಸ್ನೇಹಿತರಿಲ್ಲದಿದ್ದರೆ ಅನಾರೋಗ್ಯಕ್ಕೆ ಒಳಗಾಗಬಹುದು…
ನಿಮಗಿದು ಗೊತ್ತಾ ? ನಿಮಗೆ ಸ್ನೇಹಿತರಿಲ್ಲದಿದ್ದರೆ ನೀವು ಅನಾರೋಗ್ಯಕ್ಕೆ ಒಳಗಾಗಬಹುದು. ಅಮೆರಿಕದಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಸ್ನೇಹಿತರ ಕೊರತೆಯಿಂದ, ಒಂಟಿತನದಿಂದ ಜನರ ರೋಗನಿರೋಧಕ ಶಕ್ತಿ ಕುಂಠಿತವಾಗುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಅವರು ಹೃದ್ರೋಗಗಳು, ಆಲ್ಝೈಮರ್ಸ್, ನಿದ್ರಾಹೀನತೆ, ಅಧಿಕ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂಬ ಈ ಅಧ್ಯಯನವನ್ನ ಅಮೆರಿಕಾ ಜನರ ಮೇಲೆ ಎಇಐ ಸರ್ವೇ ಸೆಂಟರ್ ಆನ್ ಅಮೇರಿಕನ್ ಮಾಡಿದೆ.
ಅಮೆರಿಕಾದ 5 ರಲ್ಲಿ ಒಬ್ಬ ಪುರುಷರಿಗೆ ಉತ್ತಮ ಸ್ನೇಹಿತರಿಲ್ಲ..
ಅಧ್ಯಯನದ ಪ್ರಕಾರ, ಆರ್ಥಿಕ ಕುಸಿತದೊಂದಿಗೆ ಹೋರಾಡುತ್ತಿರುವ ಅಮೆರಿಕದ ಜನರು ಈಗ ಸ್ನೇಹಿತರ ಕೊರತೆಯಿಂದ ಬಳಲುತ್ತಿದ್ದಾರಂತೆ. 5 ರಲ್ಲಿ 1 ಅಮೆರಿಕನ್ ಪುರುಷರಿಗೆ ಉತ್ತಮ ಸ್ನೇಹಿತ ಇಲ್ಲ ಎಮದು ಸಂಶೋಧನೆಗಳು ಹೇಳುತ್ತಿವೆ. 1990 ರಲ್ಲಿ, ಪ್ರತಿಯೊಬ್ಬರೂ ಸರಾಸರಿ 6 ಉತ್ತಮ ಸ್ನೇಹಿತರನ್ನು ಹೊಂದಿದ್ದರು, 2021 ರ ವೇಳೆಗೆ ಈ ಸಂಖ್ಯೆಯು ಅರ್ಧದಷ್ಟು ಅಂದರೆ 3 ಕ್ಕೆ ಇಳಿದಿದೆ ಎಂದು ಅಧ್ಯಯನಗಳು ಕಂಡುಕೊಂಡಿವೆ.
ಸೈಕಾಲಜಿ ಪ್ರೊಫೆಸರ್ ನಿಯೋಬ್ ಅವರ ಪ್ರಕಾರ “ಅಮೇರಿಕನ್ ಪುರುಷರ ಒಂಟಿತನದಿಂದಾಗಿ ಸಮಾಜದಲ್ಲಿ ಹಿಂಸೆ ಹೆಚ್ಚುತ್ತಿದೆ. ಆತ ಒಬ್ಬಂಟಿಯಾಗಿರಲು ಒಂದು ಪ್ರಮುಖ ಕಾರಣವೆಂದರೆ ಅವನ ಭಾವನೆಗಳನ್ನ ಸ್ನೇಹಿತರೊಂದಿಗೆ ಹೇಳಿಕೊಳ್ಳಲಾಗದ ಅಸಮರ್ಥತೆ. ಸಮೀಕ್ಷೆಯ ಪ್ರಕಾರ, 48% ಮಹಿಳೆಯರು ತಮ್ಮ ಸ್ನೇಹಿತರೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಂಡರೆ, 30% ಪುರುಷರು ಮಾತ್ರ ಹಾಗೆ ಮಾಡಲು ಸಮರ್ಥರಿದ್ದಾರೆ. 41% ಮಹಿಳೆಯರು ಭಾವನಾತ್ಮಕವಾಗಿ ತಮ್ಮ ಸ್ನೇಹಿತರನ್ನ ಬೆಂಬಲಿಸಿದ್ದಾರೆ. ಆದರೆ 21% ಪುರುಷರು ಮಾತ್ರ ತಮ್ಮ ಸ್ನೇಹಿತರಿಗೆ ಭಾವನಾತ್ಮಕ ಬೆಂಬಲವನ್ನು ನೀಡಲು ಸಮರ್ಥರಾಗಿದ್ದಾರೆ.
ಸ್ನೇಹಿತರಿಗೆ ಪ್ರೀತಿ ತೋರಿಸುವುದು ಅವಶ್ಯಕ
ನಿಮ್ಮ ಸ್ನೇಹಿತರನ್ನ ನೀವೆಷ್ಟು ಪ್ರೀತಿಸುತ್ತೀರಿ ಮತ್ತು ನಿಮಗವರು ಎಷ್ಟು ಅರ್ಥವಾಗಿದ್ದಾರೆ ಎಂಬುದನ್ನ ಸಹ ತಿಳಿಸುವುದು ಸಹ ಮುಖ್ಯ. ಇದರಲ್ಲಿಯೂ ಅಮೆರಿಕದ ಪುರುಷರು ತೀರಾ ಹಿಂದುಳಿದಿದ್ದಾರೆ. ಒಂಟಿಯಾಗಿ ವಾಸಿಸುವ ಪುರುಷರು ಮಹಿಳೆಯರಿಗಿಂತ 7 ಪಟ್ಟು ಹೆಚ್ಚು ಹಿಂಸಾತ್ಮಕ ಭಾವನೆಗಳನ್ನು ಹೊಂದಿರುತ್ತಾರೆ ಮತ್ತು ಆತ್ಮಹತ್ಯಾ ಆಲೋಚನೆಗಳಿಗೆ ಎರಡು ಪಟ್ಟು ಹೆಚ್ಚು ಒಳಗಾಗುತ್ತಾರೆ ಎಂದು ಮನೋವಿಜ್ಞಾನಿಗಳು ಹೇಳುತ್ತಾರೆ.








