ಕೊರೊನಾ ಕಾಟದ ನಡುವೆ ಮತ್ತೊಂದು ಸಂಕಷ್ಟ : ಮೆದುಳು ತಿನ್ನುವ ಅಮೀಬಾ.!
ಕೊರೋನಾ ಹಾವಳಿಗೆ ಈಗಾಗಲೇ ಜಗತ್ತೇ ತತ್ತರಿಸಿಹೋಗಿದೆ. ಇದಕ್ಕೆ ವಿಶ್ವದ ದೊಡ್ಡಣ್ಣ ಅಮೆರಿಕಾವೂ ಹೊರತಾಗಿಲ್ಲ. ಕೊರೊನಾ ಹಾವಳಿಯಿಂದಾಗಿ ನಲುಗಿಹೋಗಿರುವಾಗಲೇ ಇದೀಗ ಬ್ರಿಟಕ್ ನಲ್ಲೂ ಹೊಸ ಮಾದರಿಯ ಕೊರೊನಾ ಸೋಂಕು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇದರ ನಡುವೆಯೇ ಇದೀಗ ಅಮೆರಿಕಾ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಅತ್ಯಂತ ಡೇಂಜರಸ್ ಅಮಿಬಾ ಮಾದರಿಯ ವೈರಸ್ ಕಾಣಿಸಿಕೊಂಡು ಜನರ ನಿದ್ದೆಗೆಡಿಸಿದೆ.
ದೇಶದಲ್ಲೂ ಕೊರೊನಾ ಹೊಸ ತಳಿ ಪತ್ತೆ: ಕೇಂದ್ರದಿಂದ ಕೋವಿಡ್ ಮಾರ್ಗಸೂಚಿ ರಿಲೀಸ್..!
ಹೌದು ಅಮೆರಿಕಾ ಹಾಗೂ ಕೆಲ ರಾಷ್ಟ್ರಗಳಲ್ಲಿ ಇದೀಗ ಮೆದುಳು ತಿನ್ನಬಲ್ಲ ಅಮೀಬಾದ ಮಾದರಿಯೊಂದು ಕಾಣಿಸಿಕೊಂಡಿದೆ. ನೇಗ್ಲೇರಿಯಾ ಫ್ಲವರಿ ಹೆಸರಿನ ಈ ಅಮೀಬಾ ಅಮೆರಿಕದ ಉತ್ತರ ಭಾಗದಲ್ಲಿ ವ್ಯಾಪಕವಾಗಿ ಪಸರಿಸಿದೆ. ಇನ್ನೂ ಇದಕ್ಕೂ ಮುನ್ನ ಅಮೆರಿಕದ ದಕ್ಷಿಣಕ್ಕಷ್ಟೇ ಸೀಮಿತವಾಗಿದ್ದ ಈ ಅಮೀಬಾ ಹವಾಮಾನ ಬದಲಾವಣೆ ಕಾರಣದಿಂದಾಗಿ ಉತ್ತರ ಭಾಗಕ್ಕೂ ಪಸರಿದೆ. ಅಲ್ಲದೇ ಈ ಅಮಿಬಾ ಆರು ವರ್ಷದ ಬಾಲಕನ ಮೆದುಳನ್ನು ಹೊಕ್ಕಿ ತಿಂದು ಹಾಕಿತ್ತು. ಪರಿಣಾಮ ಬಾಲಕ ಮೃತಪಟ್ಟಿದ್ದ. ನೀರಿನಲ್ಲಿ ಈ ಅಮೀಬಾಗಳು ಕಂಡು ಬಂದಿದ್ದವು. ಇದೀಗ ಬೇರೆ ಭಾಗಗಳಲ್ಲೂ ಈ ಅಮಿಬಾ ಕಂಡುಬಂದಿರೋದು ಜನರ ಆತಂಕವನ್ನ ಮತ್ತಷ್ಟು ಹೆಚ್ಚಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel