ವಿಜಯಪುರ: ಸರ್ಕಾರಿ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭದಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಎಂಬಿ ಪಾಟೀಲ್, ಶಾಸಕ ಶಿವಾನಂದ ಪಾಟೀಲ್‍ಗೆ ಚಿನ್ನದ ಕಿರೀಟ ತೊಡಿಸಿ ಗಿಫ್ಟ್ ನೀಡಲಾಗಿದೆ.
ಈ ಘಟನೆ ನಡೆದಿರುವುದು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ. ಕಾರಜೋಳದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಮಾಜಿ ಸಚಿವ ಎಂಬಿ ಪಾಟೀಲ್, ಶಿವಾನಂದ ಪಾಟೀಲ್ ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಪಾಲ್ಗೊಂಡ ಈ ಮೂವರೂ ನಾಯಕರಿಗೆ ಗ್ರಾಮಸ್ಥರು 210 ಗ್ರಾಂನ ಮೂರು ಚಿನ್ನದ ಕಿರೀಟ ತೊಡಿಸಿ ಗಿಫ್ಟ್ ನೀಡಿದ್ದಾರೆ.
ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ವಿಜಯಪುರ ಜಿಲ್ಲೆ ಪ್ರವಾಹದಿಂದ ತತ್ತರಿಸಿ ಹೋಗಿತ್ತು. ಜತೆಗೆ ವಿಜಯಪುರ ಜಿಲ್ಲೆ ಹೆಮ್ಮಾರಿ ಕೊರೊನಾ ಅಟ್ಟಹಾಸಕ್ಕೆ ನಲುಗಿ ಹೋಗಿದೆ. ಇಷ್ಟೆಲ್ಲಾ ಸಂಕಷ್ಟದ ನಡುವೆಯೂ ಗ್ರಾಮಸ್ಥರು ಚಿನ್ನದ ಕಿರೀಟ್ ನೀಡಿರುವುದು ಸಾಮಾಜಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮೊದಲು ಚಿನ್ನದ ಕಿರೀಟ ಗಿಫ್ಟ್ ಪಡೆಯಲು ಮೂವರೂ ನಾಯಕರು ನಿರಾಕರಿಸಿದ್ದಾರೆ. ಆದರೂ ಒತ್ತಾಯಪೂರ್ವಕವಾಗಿ ಗ್ರಾಮಸ್ಥರು ಚಿನ್ನದ ಕಿರೀಟ ತೊಡಿಸಿದ್ದಾರೆ. ಬಲವಂತವಾಗಿ ಕಿರೀಟ ಹಾಕಿದ್ದಕ್ಕೆ ಬೇಸರಗೊಂಡು ಶಾಸಕ ಶಿವಾನಂದ ಪಾಟೀಲ್ ಸಮಾರಂಭದಿಂದ ಹೊರನಡೆದ ಘಟನೆಯೂ ನಡೆದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel