ಡಿವೋರ್ಸ್ ಬಳಿಕ ಮತ್ತೆ ಒಂದಾದ ಅಮಿರ್ ಖಾನ್ – ಮಾಜಿ ಪತ್ನಿ…!!!!!
ಕಳೆದ ವರ್ಷವಷ್ಟೇ ಬಾಲಿವುಡ್ ನ ಸ್ಟಾರ್ ಖಾನ್ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಪತ್ನಿ ಕಿರಣ್ ರಾವ್ ಅವರ ಜೊತೆಗೆ ಡಿವೋರ್ಸ್ ಪಡೆದುಕೊಂಡಿದ್ದಾರೆ.. ಈ ಜೋಡಿ ಮದುವೆಯಾದ ಒಟ್ಟು 15 ವರ್ಷಗಳ ಬಳಿಕ ಬೇರೆಯಾಗಿದ್ದಾರೆ.. ಆದ್ರೆ ಡಿವೋರ್ಸ್ ನಂತರವೂ ಈ ಜೋಡಿ ಆಗಾಗ ಒಟ್ಟಿಗೆ ಕಾಣಿಸಿಕೊಳ್ತಾ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ.. ಇಬ್ಬರೂ ಕೂಡ ಅವರೇ ಡಿವೋರ್ಸ್ ವಿಚಾರ ತಿಳಿಸುವ ಸಂದರ್ಭದಲ್ಲಿ ಹೇಳಿದ್ದಂತೆ ಒಳ್ಳೆಯ ಸ್ನೇಹಿತರಾಗಿದ್ದಾರೆ.. ಆದ್ರೆ ಇದೀಗ ಒಂದು ಆಶ್ಚರ್ಯಕರ ಸಂಗತಿ ಹೊರಬಿದ್ದಿದ್ದು , ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ..
ಹೌದು ಈ ಜೋಡಿ ಮತ್ತೆ ಒಂದಾಗ್ತಿದ್ದಾರೆ… ಹಾಗಂತ ರಿಯಲ್ ಲೈಫ್ ನಲ್ಲಿ ಅಲ್ಲ ಬದಲಾಗಿ ಈ ಜೋಡಿ ಸಿನಿಮಾಗಾಗಿ ಒಂದಾಗಿ ಕೆಲಸ ಮಾಡಲಿದ್ದಾರೆ.. ಕಿರಣ್ ರಾವ್ ನಿರ್ದೇಶಿಸಲಿರುವ ಸಿನಿಮಾಗೆ ಅಮೀರ್ ಖಾನ್ ಬಂಡವಾಳ ಹೂಡಲಿದ್ದಾರೆ ಅನ್ನುವ ಒಕಬರ್ ಬಾಲಿವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿ ಮಾಡಿದೆ..
2011, ಡಿಸೆಂಬರ್ 05 ರಂದು ಬಾಡಿಗೆ ತಾಯಿಯ ಮೂಲಕ ಪುತ್ರನನ್ನು ಪಡೆದಿದ್ದರು. ಆಮಿರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ಬಾಲಿವುಡ್‌ನಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದವರು. ಆಮಿರ್ ಖಾನ್ ವಿವಾಹದ ಬಳಿಕ ಕಿರಣ್ ‘ಧೋಬಿ ಘಾಟ್’ ಸಿನಿಮಾವನ್ನು ನಿರ್ದೇಶಿಸಿದ್ದರು. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆ ಬಳಿಕ ಸಿನಿಮಾ ನಿರ್ದೇಶಕನಕ್ಕೆ ತಲೆ ಹಾಕಿರಲಿಲ್ಲ.
ಆದ್ರೆ ಈಗ 12 ವರ್ಷಗಳ ನಂತರ , ಅದ್ರಲ್ಲೂ ವಿಚ್ಛೇಧನದ ಬಳಿಕ ಮತ್ತೆ ಡೈರೆಕ್ಟರ್ ಕ್ಯಾಪ್ ಧರಿಸಿ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದು , ಅವರ ಸಿನಿಮಾಗೆ ಅಮೀರ್ ಬಂಡವಾಳ ಹೂಡ್ತಿದ್ದಾರೆ.. ಕಿರಣ್ ರಾವ್ ಎಂಟರ್‌ಟೈನರ್ ಕಥೆಯನ್ನು ತೆರೆಮೇಲೆ ತರುವುದಕ್ಕೆ ನಿರ್ಧರಿಸಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಕೂಡ ಶುರುವಾಗಿದೆ. ಜನವರಿ 8ರಿಂದ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಮೊದಲ ಹಂತದ ಚಿತ್ರೀಕರಣ ಜನವರಿ 20ರವರೆಗೆ ನಡೆಯಲಿದೆ ಎನ್ನಲಾಗಿದೆ. ಬಿಪ್ಲಾಬ್ ಗೋಸ್ವಾಮಿ ಕಥೆ ರಚಿಸಿದ್ದು, ಸ್ನೇಹ ದೇಸಾಯಿ ಚಿತ್ರಕಥೆ ರಚಿಸಿದ್ದಾರೆ. ಮೂರು ಪಾತ್ರಗಳ ನಡುವೆ ನಡೆಯುವ ಈ ಸಿನಿಮಾಗೆ ಸ್ಪರ್ಶ್ ಶ್ರಿವತ್ಸವ್, ಪ್ರತಿಭಾ ರಂಟಾ ಹಾಗೂ ನಿತಾಂಶಿ ಗೋಯೆಲ್ ಆಯ್ಕೆ ಆಗಿದ್ದಾರೆಂದು ಬಾಲಿವುಡ್‌ನಲ್ಲಿ ವರದಿಯಾಗಿದೆ.
2001ರಲ್ಲಿ ‘ಲಾಗಾನ್’ ಸಿನಿಮಾಗೆ ಸಹಾಯಕ ನಿರ್ದೇಶಕಿಯಾಗಿ ಕಿರಣ್ ರಾವ್ ಕೆಲಸ ಮಾಡಿದ್ದರು. ಇದೇ ವೇಳೆ ಇಬ್ಬರಲ್ಲೂ ಲವ್ ಆಗಿ ನಾಲ್ಕು ವರ್ಷಗಳ ಬಳಿಕ ವಿವಾಹವಾಗಿದ್ದರು. ಮದುವೆ ಬಳಿಕವೂ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಕಿರಣ್ ರಾವ್, ಮಾಜಿ ಪತಿ ಆಮಿರ್ ಖಾನ್ ನಟಿಸುತ್ತಿರುವ ‘ಲಾಲ್ ಸಿಂಗ್ ಚಡ್ಡ’ ಚಿತ್ರಕ್ಕೆ ಸಹ-ನಿರ್ಮಾಪಕಿ ಆಗಿದ್ದಾರೆ. ಏಪ್ರಿಲ್ 14ಕ್ಕೆ ಈ ಸಿನಿಮಾ ಬಿಡುಗಡೆಯಾಗಲಿದೆ.
ಅಂದ್ಹಾಗೆ ಕಿರಣ್ ರಾವ್ ಅಮಿರ್ ಖಾನ್ 2ನೇ ಪತ್ನಿ ಆಗಿದ್ದರು.. ಇವರ ಜೊತೆಗೆ ಡಿವೋರ್ಸ್ ಪಡೆದ ನಂತರ ಮಿಸ್ಟರ್ ಪರ್ಪೆಕ್ಟ್ ಅಮಿರ್ ಖಾನ್ ಸಾಕಷ್ಟು ಟ್ರೋಲ್ ಗೆ ಗುರಿಯಾಗಿದ್ದು, ಕಟುವಾಗಿಯೂ ಟೀಕಿಸಲ್ಪಿಟ್ಟದರು.. ಅಲ್ಲದೇ ದಂಗಲ್ ನಲ್ಲಿ ಅಮಿರ್ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸನಾ ಶೇಖ್ ಜೊತೆಗೆ ಅವರಿಗೆ ಸಂಬಂಧವಿದ್ದು ,, ಸನಾರಿಂದಲೇ ಅಮಿರ್ ಕಿರಣ್ ಬೇರೆಯಾಗಿದ್ದಾರೆ ಎಂದು ಟೀಕೆ ಟಿಪ್ಪಣಿಗಳನ್ನ ಮಾಡಿ ಸನಾರನ್ನೂ ಟ್ರೋಲ್ ಮಾಡಲಾಗಿತ್ತು..








