ಕರ್ನಾಟಕ ಬಂದ್ ಗೆ ಕರೆ ನೀಡಿದ ಅಮೀರ್-ಇ-ಶರಿಯತ್ ಸಂಘಟನೆ – Saaksha Tv
ಬೆಂಗಳೂರು: ಹಿಜಾಬ್ ವಿವಾದಕ್ಕೆ ಸಂಭಂದಿಸಿದಂತೆ ಮಂಗಳವಾರ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಇದನ್ನು ವಿರೋಧಿಸಿ ಅಮೀರ್-ಇ-ಶರಿಯತ್ ಸಂಘಟನೆ ಮಾರ್ಚ 17 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಮೀರ್-ಇ-ಶರಿಯತ್ ಮುಖಂಡ ಮೌಲನಾ ಸಗೀರ್ ಮಂಗಳವಾರ ಹೈಕೋರ್ಟ್ ನೀಡಿದ ತೀರ್ಪು ನಮಗೆ ನಿರಾಸೆ ಉಂಟು ಮಾಡಿದೆ. ಹೀಗಾಗಿ ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಿದ್ದೇವೆ. ಎಲ್ಲರೂ ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು ಎಂದು ಕರೆ ನೀಡಿದ್ದಾರೆ,

ಅಲ್ಲದೇ ಪ್ರತಿಭಟನೆ ವೇಳೆ ಬಲವಂತದ ಬಂದ್ ಆಗಲಿ. ಜಾಥಾ, ಮೆರವಣಿಗೆ ಆಗಲಿ ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.








