ತೇಲುವ ಬಾರ್ಡರ್ ಔಟ್‌ಪೋಸ್ಟ್‌ಗಳನ್ನು ಉದ್ಘಾಟಿಸಿದ ಅಮಿತ್ ಶಾ
ಕೋಲ್ಕತ್ತಾ: ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಪಶ್ಚಿಮಬಂಗಾಳಕ್ಕೆ ಭೇಟಿ ನೀಡಿ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಮೂರು ತೇಲುವ ಬಾರ್ಡರ್ ಔಟ್‌ಪೋಸ್ಟ್‌ಗಳನ್ನು (ಬಿಒಪಿ) ಉದ್ಘಾಟಿಸಿದ್ದಾರೆ.
ಗುರುವಾರ ಸುಂದರಬನ್ಸ್‌ನ ದುರ್ಗಮ ಪ್ರದೇಶಗಳನ್ನು ರಕ್ಷಿಸಲು ನಿರ್ಮಾಣ ಮಾಡಿರುವ ತೇಲುವ ಬಾರ್ಡರ್ ಔಟ್‌ಪೋಸ್ಟ್‌ಗಳನ್ನು ಪಶ್ಚಿಮ ಬಂಗಾಳಕ್ಕೆ ತಮ್ಮ ಎರಡು ದಿನಗಳ ಭೇಟಿಯ ಮೊದಲ ದಿನ ಉದ್ಘಾಟಿಸಿದ್ದಾರೆ.
ಹಾಗೇ ತೇಲುವ ಬೋಟ್ ಆಂಬ್ಯುಲೆನ್ಸ್ ಅನ್ನು ಅನಾವರಣ ಮಾಡಿದರು ಮತ್ತು ‘ಮೈತ್ರಿ ಸಂಗ್ರಹಾಲಯ’ಕ್ಕೆ ಅಡಿಪಾಯವನ್ನು ಹಾಕಿದರು.
ಇನ್ನೂ ಫ್ಲೋಟಿಂಗ್ ಬಾರ್ಡರ್ ಔಟ್‌ಪೋಸ್ಟ್‌ಗಳಾದ ಸಟ್ಲೆಜ್, ಕಾವೇರಿ ಮತ್ತು ನರ್ಮದಾವನ್ನು ಕೋಚ್ ಶಿಪ್‌ಯಾರ್ಡ್ ನಿರ್ಮಾಣ ಮಾಡಿದೆ. ಪ್ರತಿ ಟಿಂಗ್ ಬಾರ್ಡರ್ ಔಟ್‌ಪೋಸ್ಟ್ ಬೆಲೆ ರೂ. 38 ಕೋಟಿ ಮತ್ತು ಸುಮಾರು 53 ಸಾವಿರ ಮೆಟ್ರಿಕ್ ಟನ್ ತೂಗುತ್ತದೆ. ತೇಲುವ ಬಾರ್ಡರ್ ಔಟ್‌ಪೋಸ್ಟ್ ಗಳು ಆಧುನಿಕ ಸೌಲಭ್ಯಗಳು ಮತ್ತು ಸುರಕ್ಷತಾ ಸಾಧನಗಳೊಂದಿಗೆ ಸುಸಜ್ಜಿತವಾಗಿವೆ.
ತೇಲುಬ ಬಾರ್ಡರ್ ಔಟ್‌ಪೋಸ್ಟ್ ಮುಂಭಾಗದ ಭಾಗವು ಯೋಧರ ಸುರಕ್ಷತೆಗಾಗಿ ಬುಲೆಟ್ ಪ್ರೂಫ್ ಆಗಿದೆ. ಇವು ಒಂದು ತಿಂಗಳ ಕಾಲ ಇಂಧನ ತುಂಬಿಸದೆ DG ಸೆಟ್‌ನೊಂದಿಗೆ ತೇಲುವ ಸಾಮರ್ಥ್ಯ ಹೊಂದಿದೆ. ಒಂದು ತೇಲುವ ಬಾರ್ಡರ್ ಔಟ್‌ಪೋಸ್ಟ್ ಜೊತೆಗೆ 6 ಸಣ್ಣ ದೋಣಿಗಳು ಮತ್ತು ಒಳನುಸುಳುವಿಕೆ ಮತ್ತು ಕಳ್ಳಸಾಗಣೆ ಎರಡನ್ನೂ ತಡೆಯಲು ಸಾಕಷ್ಟು ವ್ಯವಸ್ಥೆಗಳು ಇರಲಿವೆ.








