ವಿಜಯಪುರ: ಸಚಿವ ಸಂಪುಟ ವಿಸ್ತರಣೆಯಾಗುತ್ತೋ? ಪುನಾರಚನೆಯಾಗುತ್ತೋ ಗೊತ್ತಿಲ್ಲ. ಆದರೆ, ಪ್ರಮುಖ ನಿರ್ಣಯ ಕೈಗೊಳ್ಳಲು ಅಮಿತ್ ಶಾ ಅವರು ಸಿಎಂ ಯಡಿಯೂರಪ್ಪ ಅವ್ರನ್ನು ಕರೆಯಿಸಿದ್ರು ಅಂತ ಅನ್ನಿಸುತ್ತೆ ಎನ್ನುವ ಮೂಲಕ ಮತ್ತೆ ನಾಯಕತ್ವದ ಸುಳಿವು ನೀಡಿದ್ದಾರೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್.
ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಹೈಕಮಾಂಡ್ ಬುಲಾವ್ ಮೇರೆಗೆ ಯಡಿಯೂರಪ್ಪ ದಿಲ್ಲಿಗೆ ಹೋಗಿದಾರೆ. ಯಾರನ್ನು ನಾಯಕರನ್ನಾಗಿ ಮಾಡಬೇಕೆಂದು ಕೇಂದ್ರ ನಾಯಕರಿಗೆ ಗೊತ್ತಿದೆ. ಪ್ರಧಾನಿ, ಗೃಹ ಸಚಿವರಿಗೆ ಅವರದ್ದೆ ಆದಂಥ ದೊಡ್ಡ ಜಾಲವಿದೆ. ದೇಶದಲ್ಲಿ ಯಾರು ಏನು ಮಾಡುತ್ತಿದ್ದಾರೆ ಎಂಬುದು ಅವರಿಗೆ ಗೊತ್ತು. ಯಾವ ಶಾಸಕ, ಸಚಿವ, ಸಿಎಂ ಏನು ಮಾಡುತ್ತಿದ್ದಾರೆ ಎಂಬುದೂ ಪ್ರಧಾನಿಗೆ ಗೊತ್ತು. ಅವರು ಸೂಕ್ತ ನಿರ್ಣಯ ತೆಗದುಕೊಳ್ಳುತ್ತಾರೆ ಎನ್ನುವ ಮೂಲಕ ಪರೋಕ್ಷವಾಗಿ ಬಿಎಸ್ವೈ ನಾಯಕತ್ವ ಬದಲಾವಣೆಉ ಮುನ್ಸೂಚನೆ ನೀಡಿದ್ದಾರೆ.
ನನ್ನ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲು ನಾನೇನು ಮಾಡಿದ್ದೇನೆ? ನನ್ನಿಂದ ಅಶಿಸ್ತೇ ಆಗಿಲ್ಲ. ಇನ್ನು ಶಿಸ್ತು ಕ್ರಮ ಎಲ್ಲಿಂದ? ನಾನೇನು ಪಕ್ಷದ ರಾಷ್ಟ್ರೀಯ ನಾಯಕರ ಬಗ್ಗೆ ಮಾತನಾಡಿದ್ದೇನೇಯೇ? ಸಿಎಂ ಹಾಗೂ ಸಚಿವರುಗಳ ಬಗ್ಗೆ ಮಾತನಾಡಿದ್ದೇನಾ? ನಾನು ಹೇಳಿದ್ದು ಜನಪರ ಕಾರ್ಯಕ್ರಮಗಳ ಬಗ್ಗೆ. ಅಭಿವೃದ್ಧಿಗಾಗಿ ಹೆಚ್ಚು ಹಣ ಕೇಳಿದ್ದೇನೆ. ಕೋವಿಡ್ ವೇಳೆ ಖಾಸಗಿ ಆಸ್ಪತ್ರೆಗಳ ಸುಲಿಗೆ ಬಗ್ಗೆ ಮಾತನಾಡಿದ್ದೇನೆ. ಶುದ್ದ ಕುಡಿಯುವ ನೀರಿನ ಘಟಕಗಳ ಯೋಜನೆಯಲ್ಲಿ ಭ್ರಷ್ಟಾಚಾರ ಬಗ್ಗೆ ಮಾತನಾಡಿದ್ದೇನೆ.
ಸಿಎಂ ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದೇನಾ? ಕೇಂದ್ರ ನಾಯಕರ ವಿರುದ್ಧ ಮಾತನಾಡಿದ್ದೇನಾ? ನಾನು ಪಕ್ಷದ ಶಿಸ್ತು ಮೀರಿ ನಡೆದಿಲ್ಲ. ನಾನು ಶಿಸ್ತಿನಿಂದ ಕೆಲಸ ಮಾಡಿದ್ದೇನೆ. ನನ್ನ ಮೇಲೆ ಶಿಸ್ತು ಕ್ರಮವಿಲ್ಲ ಎಂದು ಯತ್ನಾಳ್ ಆತ್ಮವಿಶ್ವಾಸದಿಂದ ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel