Amitabh Bachchan: ಪಾನ್ ಮಸಾಲಾ ಕಂಪನಿಗೆ ಲೀಗಲ್ ನೋಟಿಸ್ ನೀಡಿದ ಬಿಗ್ ಬಿ..
ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ ಪಾನ್ ಮಸಾಲಾ ಕಂಪನಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಒಪ್ಪಂದ ಮುಗಿದಿದ್ದರೂ ತನ್ನ ಜಾಹೀರಾತ್ ಅನ್ನ ಇನ್ನೂ ಪ್ರಸಾರ ಮಾಡಲಾಗುತ್ತಿದೆ ಎಂದು ಕಂಪನಿ ವಿರುದ್ಧ ಲೀಗಲ್ ನೋಟೀಸ್ ಕಳುಹಿಸಿದ್ದಾರೆ ಬಿಗ್ ಬಿ.
ವಾಸ್ತವವಾಗಿ, ಪಾನ್ ಮಸಾಲ ಜಾಹೀರಾತ್ ನಲ್ಲಿ ಅಮಿತಾಬ್ ನಟಿಸಿದ್ದಕ್ಕೆ ಹಲವಾರು ಅಭಿಮಾನಿಗಳು ಬೇಸರಗೊಂಡಿದ್ದರು ಮತ್ತು ಹಲವರು ಟೀಕಿಸಿದ್ದರು. ನಂತರ ಅಭಿಮಾನಿಗಳ ಭಾವನೆಗೆ ಬೆಲೆ ಕೊಟ್ಟು ಅಮಿತಾಬ್ ಅಕ್ಟೋಬರ್ 2022 ರಲ್ಲಿ ಪಾನ್ ಮಸಾಲಾ ಬ್ರ್ಯಾಂಡ್‌ನೊಂದಿಗಿನ ತನ್ನ ಒಪ್ಪಂದವನ್ನು ಕೊನೆಗೊಳಿಸಿದರು. ಮತ್ತು ಕಂಪನಿಗೆ ಹಣವನ್ನೂ ಹಿಂತಿರುಗಿಸಿದ್ದರು.
ಪಾನ್ ಮಸಾಲಾ ಬ್ರಾಂಡ್‌ನೊಂದಿಗೆ ಅಮಿತಾಬ್ ಬಚ್ಚನ್ ಅವರ ಒಪ್ಪಂದವು ಕೊನೆಗೊಂಡಿದೆ, ಆದರೆ ಕಂಪನಿಯು ಬಿಗ್ ಬಿಯವರ ಜಾಹೀರಾತುಗಳಲ್ಲಿ ತೋರಿಸುವುದನ್ನ ನಿಲ್ಲಿಸಿಲ್ಲ. ಹಾಗಾಗಿ ಅಮಿತಾಬ್ ಬಚ್ಚನ್ ಅವರ ಪಾನ್ ಮಸಾಲವನ್ನ ಒಳಗೊಂಡ ಜಾಹೀರಾತುಗಳನ್ನು ಪ್ರಸಾರ ಮಾಡುವುದನ್ನ ನಿಲ್ಲಿಸುವಂತೆ ಕಂಪನಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ ಎನ್ನಲಾಗಿದೆ.
ತಂಬಾಕು ನಿರ್ಮೂಲನೆಗಾಗಿ ರಾಷ್ಟ್ರೀಯ ಸಂಘಟನೆಯ ಅಧ್ಯಕ್ಷ ಶೇಖರ್ ಸಲ್ಕರ್ ಮತ್ತು ಅಮಿತಾಬ್ ಬಚ್ಚನ್ ಅವರಿಗೆ ಪತ್ರ ಬರೆದಿದ್ದರು. ಪಾನ್ ಮಸಾಲಾ ನಾಗರಿಕರ ಆರೋಗ್ಯಕ್ಕೆ ಹಾನಿಕರ ಎಂದೂ, ಬಿಗ್ ಬಿ ಅವರು ಈ ಜಾಹೀರಾತಿನಿಂದ ಹೊರಗುಳಿಯಬೇಕು ಎಂದು ಕೇಳಿಕೊಂಡಿದ್ದರು.
ಈ ಹಿಂದೆ ಅಕ್ಷಯ್ ಕುಮಾರ್ ಕೂಡ ಪಾನ್ ಮಸಾಲಾ ಜಾಹೀರಾತಿನಿಂದ ದೂರ ಉಳಿದಿದ್ದರು.
Amitabh Bachchan Sent Legal Notice To Pan Masala Company








